ಕ್ರೆಮ್ಲಿನ್ ಕಪ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೋಲುವ ಮೂಲಕ ಸಾನಿಯಾ ಮಿರ್ಜಾ ಅವರು ಟೂರ್ನಿಯಿಂದ ಪೂರ್ಣ ಪ್ರಮಾಣದಲ್ಲಿ ಹೊರಗೆ ಬಿದ್ದಂತಾಗಿದೆ.
ಸ್ವಿಡರ್ಲೆಂಡಿನ ಪ್ಯಾಟಿ ಸಿಂಡರ್ಸ್ ಅವರೊಂದಿಗೆ ಅಂಕಣ ಹಂಚಿಕೊಂಡು, ಟೂರ್ನಿಯ ಮೊದಲ ಸುತ್ತಿನಲ್ಲಿ ಜಿಂಬಾಬ್ವೆಯ ಕಾರಾ ಬ್ಲಾಕ್ ಮತ್ತು ಅಮೆರಿಕದ ಲಿಜೆಲ್ ಹುಬೇರ್ ಅವರನ್ನು ಎದುರಿಸಿ ಮೂರು ಸೆಟ್‌ಗಳ ಆಟದಲ್ಲಿ ಸಾನಿಯಾ ಸೋತರು.
ಟೂರ್ನಿಯ ಪ್ರಾಥಮಿಕ ಹಂತದಲ್ಲಿ ನಡೆದ ಪಂದ್ಯವನ್ನು ಸಾನಿಯಾ-ಸಿಂಡರ್ಸ್ ಜೋಡಿ 6-3, 5 -7 ಮತ್ತು 10-7 ರಂತೆ ಸೋತಿದ್ದಾರೆ. ಈಗಾಗಲೇ ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಸಿಂಗಲ್ಸ್ ವಿಭಾಗದಲ್ಲಿ ಅರ್ಜೆಂಟಿನಾದ ಗಿಸೆಲಾ ಡಲ್ಕೊ ವಿರುದ್ಧ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೋತಿದ್ದಾರೆ.
|