ಸ್ಟಾಕ್‌ಹೋಂನಲ್ಲಿ ನಡೆದ ಸ್ಟಾಕ್‌ಹೋಂ ಓಪನ್ ಪಂದ್ಯಾವಳಿಯಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಬೆಲ್ಜಿಯಮ್ ಜೊತೆಗಾರ ಓಲ್ವಿಯರ್ ರೋಚಸ್ ಅವರು, ಡಚ್-ಪ್ರೋಟೀ ಜೋಡಿಯಾದ ಜೆಫ್ ಕೋಟ್ಸೀ ಮತ್ತು ರೋಗಿಯರ್ ವಾಸನ್ ಅವರ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದ್ದಾರೆ.
ಹಾರ್ಡ್‌ಕೋರ್ಟ್ ಒಳಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ 6-2,6-3 ಅಂತರದ ಗೆಲುವನ್ನು ಸಾಧಿಸಲು ಶ್ರೇಯಾಂಕಿತ ಇಂಡೋ-ಬೆಲ್ಜಿಯಮ್ ಜೋಡಿಯು ಒಂದು ಗಂಟೆಗೂ ಕಡಿಮೆ ಸಮಯವನ್ನು ತೆಗೆದುಕೊಂಡರು.
ಈ ಜೋಡಿಯು ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಸ್ವೀಡನ್‌ನ ಜೋನಾಸ್ ಜೋರ್ಕ‌್‌ಮನ್ ಮತ್ತು ಬೆಲಾರುಸ್‌ನ ಮ್ಯಾಕ್ಸ್ ಮಿರ್ನಿ ಅವರೊಂದಿಗೆ ಸೆಣಸಲಿದ್ದಾರೆ. ಜೋರ್ಕ್‌ಮನ್ ಜೋಡಿಯು ಆಸ್ಟ್ರೇಲಿಯಾ-ಸ್ಪೇನ್ ಜೋಡಿ ಆಸ್ಕರ್ ಹರ್ನಾಂಡೆಸ್ ಮತ್ತು ಪೀಟರ್ ಲುಕ್‌ಜಾಕ್ ಅವರನ್ನು 6-3, 6-4 ಅಂತರದಿಂದ ಸೋಲಿಸಿ ಸೆಮಿಫೈನಲ್ ತಲುಪಿತ್ತು.
|