ಮಾಸ್ಕೋದಲ್ಲಿ ಶುಕ್ರವಾರ ನಡೆದ ಕ್ರೆಮ್ಲಿನ್ ಕಪ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಕ್ರಮಾಂಕದ ಸ್ವೆಟ್ಲಾನಾ ಕುಜ್ನೆತ್ಸೋವಾ ಅವರು ಗೆಲುವು ಸಾಧಿಸಿ, ಇದೇ ಪ್ರಥಮ ಬಾರಿಗೆ ಸೆಮಿಫೈನಲ್ ತಲುಪಿದರು.
ಕುಜ್ನೆತ್ಸೋವಾ ಅವರು ರಷ್ಯಾದ ವೆರಾ ಡುಶೆವಿನಾ ಅವರನ್ನು 6-2, 6-2 ಅಂತರದ ಸೆಟ್ಟುಗಳಿಂದ ಪರಾಭವಗೊಳಿಸುವ ಮೂಲಕ ಮುನ್ನಡೆ ಕಾಯ್ದುಕೊಂಡರು.
ಸುಮಾರು 71 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಕುಜ್ನೆತ್ಸೋವಾ ಅವರು, ಮೊದಲ ಸುತ್ತಿನಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಡುಶೆವಿನಾ ವಿರುದ್ಧ ಮುನ್ನಡೆ ಕಾಯ್ದುಕೊಂಡರು. ನಂತರ ಎರಡನೇ ಸುತ್ತಿನಲ್ಲಿಯೂ ಅದೇ ಮುನ್ನಡೆ ಪಡೆದು ಸೆಮಿಫೈನಲ್ ಪ್ರವೇಶಿಸಿದರು.
ಇದೊಂದು ಬಹುಮಟ್ಟಿಗೆ ಸಂದ ಜಯ ಎಂದು ಭಾವಿಸಿದ್ದೇನೆ ಎಂದು 22 ವರ್ಷದ ಕುಜ್ನೆತ್ಸೋವಾ ಹರ್ಷದಿಂದ ಹೇಳಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಎಂಟನೇ ಕ್ರಮಾಂಕದ ಜೆಕ್ ನಿಕೋಲ್ ವೈಡಿಸೋವಾ ಅವರನ್ನು 6-4, 7-6 ಅಂತರದ ಸೆಟ್ಟುಗಳಿಂದ ಪರಾಭವಗೊಳಿಸಿದರು.
ಸೆರೆನಾ ವಿಲಿಯಮ್ಸ್ ಈ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದು, ಅಲ್ಲಿ ಅವರು ಸ್ವೆಟ್ಲಾನಾ ಕುಜ್ನೆತ್ಸೋವಾ ಅವರನ್ನು ಎದುರಿಸಲಿದ್ದಾರೆ.
ಎರಡನೇ ಸೆಮಿಫೈನಲ್ ಪಂದ್ಯವು ರಷ್ಯಾದ ಜೋಡಿಗಳಾದ ಎಲೆನಾ ಡಿಮೆಂಟಿಯೆವಾ ಹಾಗೂ ದಿನಾರ್ ಸಫಿನ್ ಅವರ ನಡುವೆ ಜರುಗಲಿದೆ.
ಪುರುಷರ ವಿಭಾಗದಲ್ಲಿ ನಿಕೋಲಾಯ್ ಡೇವಿಡೆಂಕೊ ಅವರು ತಮ್ಮ ಡೇವಿಸ್ ಕಪ್ ಜೋಡಿಯಾದ ಇಗೋರ್ ಆಂಡ್ರೀವ್ ಅವರನ್ನು 7-5, 7-5 ಅಂತರದಿಂದ ಪರಾಭವಗೊಳಿಸಿ ಸೆಮಿಫೈನಲ್ ತಲುಪಿದ್ದಾರೆ. ಅಲ್ಲಿ ಅವರು, ಸರ್ಬಿಯಾದ ಜಾಂಕೊ ಟಿಪ್ಸರೆವಿಕ್ ಅವರೊಂದಿಗೆ ಸೆಣಸಲಿದ್ದಾರೆ.
|