ಹೈದರಾಬಾದಿನಲ್ಲಿ ನಡೆದಿರುವ ನಾಲ್ಕನೆ ಮಿಲಿಟರಿ ಕ್ರೀಡಾಕೂಟದಲ್ಲಿ ಭಾರತ, ಪುರುಷರ ಫುಟ್ಬಾಲ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿತು. ತುರ್ಕಿಯ ವಿರುದ್ಧ ಹ್ಯಾಂಡ್ ಬಾಲ್ ಆಟವನ್ನು 30-30 ಅಂಕಗಳ ಅಂತರದಿಂದ ಸಮಮಾಡಿಕೊಂಡಿತು.
ಪ್ರಾಥಮಿಕ ಹಂತದಲ್ಲಿ ಆಫಘಾನಿಸ್ತಾನ ವಿರುದ್ಧ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದ್ದ ಭಾರತ, ನೆಗುರ್ನಾಲ್ ಗಳಿಸಿದ ಆಕರ್ಷಕ ಗೋಲಿನ ನೆರವಿನಿಂದ ಪಂದ್ಯದ ಐದನೆ ನಿಮಿಷದಲ್ಲಿ ಭಾರತೀಯ ಫುಟ್ಬಾಲ್ ತಂಡವು ಮುನ್ನಡೆ ಸಾಧಿಸಿತು.
ಬಿ ಗುಂಪಿನಲ್ಲಿನ ಬ್ರೆಜಿಲ್ ಮತ್ತು ಕತಾರ್ ತಂಡಗಳೊಂದಿಗೆ ಭಾರತ ಕೂಡ ಕ್ವಾರ್ಟರ್ ಫೈನಲ್ ತಲುಪಿತು. ಇನ್ನೊಂದು ವಿಭಾಗದಿಂದ ಇಜಿಪ್ತ್, ಐರ್ಲೇಂಡ್, ಗಿಯೆನಾ, ಉತ್ತರ ಕೋರಿಯಾ ಮತ್ತು ಕ್ಯಾಮರೂನ್ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ.ಆಫಘಾನಿಸ್ತಾನದ ಶೋಯಬ್ ಯಾರ್ಸದಾ, ನೆಗುರಿರ್ನಿಲಾಲ್‌ಗೆ ಡಿಕ್ಕಿ ಹೊಡೆದು ಕಳಗೆ ಉರುಳಿಸಿದ್ದರಿಂದ ನೆಗುರಿರ್ನಾಲ್ ಅವರಿಗೆ ಪೆನಾಲ್ಟಿ ಅವಕಾಶ ಸಿಕ್ಕಿತು.
ಹ್ಯಾಂಡ್ ಬಾಲ್ ವಿಭಾಗದಲ್ಲಿ ಭಾರತ, ತುರ್ಕಿಯ ವಿರುದ್ಧ ಕೆಚ್ಚೆದೆಯ ಆಟ ಪ್ರದರ್ಶಿಸಿತು.ಪ್ರಬಲ ಪ್ರತಿಸ್ಪರ್ಧಿ ತುರ್ಕಿಯು ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಪ್ರಥಮಾರ್ದದಲ್ಲಿ 15-12ರ ಅಂತರದಲ್ಲಿ ಮುನ್ನಡೆ ಸಾಧಿಸಿತ್ತು.
ತುರ್ಕಿಯ ಬಾರಿಸ್ ಡಿನ್‌ಕ್ಟ್ರಕ್ ಮತ್ತು ಬರ್ಯಾಮ್ ಸೆಜಿನ್ ಕೆಲಕಾಲ ಅಚ್ಚರಿಯ ಆಟ ಪ್ರದರ್ಶಿಸಿ ಪಂದ್ಯವನ್ನು 21-21 ಗೋಲಿನ ಅಂತರಕ್ಕೆ ತಂದು ನಿಲ್ಲಿಸಿದರು.ಭಾರತದ ಕೇಂದ್ರ ವಲಯದ ರಕ್ಷಣೆ ಕೆಲಕಾಲ ಪ್ರಬಲವಾಗಿದ್ದರಿಂದ ಎದುರಾಳಿ ತಂಡಕ್ಕೆ ಅಂಕಗಳಿಸಲು ಸಾದ್ಯವಾಗಲಿಲ್ಲ. ಆದರೆ ಭಾರತ ಮಾತ್ರ ಮತ್ತೆ 3 ಅಂಕ ಕಲೆಹಾಕಿ ಮುನ್ನಡೆ ಸಾಧಿಸಿತು.
ಪಂದ್ಯ ಮುಕ್ತಾಯಕ್ಕೆ ನಲ್ವತ್ತು ಸೆಕೆಂಡುಗಳು ಬಾಕಿ ಇರುವಂತೆಯೆ ಆಟವನ್ನು ಭಾರತ ಒಂದು ಅಂಕದ ನೆರವಿನಿಂದ ಮುನ್ನಡೆ ಸಾಧಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ತುರ್ಕಿಯ ಗೋಲ್ ಕೀಪರ್ ಭಾರತದ ಅಂಕಣಕ್ಕೆ ನುಗ್ಗಿ ಪಂದ್ಯ ನಿರ್ಣಾಯಕ ಅಂಕವನ್ನು ಗಳಿಸಿ, ಆಟವನ್ನು ಡ್ರಾದಲ್ಲಿ ಅಂತ್ಯಗೊಳಿಸಿದರು.
|