51ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಅಹಮದ್‌ಬಾದಿನಲ್ಲಿ ಡಿಸೆಂಬರ್ 28ರಿಂದ ಆರಂಭವಾಗಲಿದ್ದು ಪ್ರಸಿದ್ದ ಶೂಟರ್ ಜಸ್ಪಾಲ್ ರಾಣ, ಅಭಿನವ್ ಬಿಂದ್ರ ಮತ್ತು ಅಂಜಲಿ ಭಾಗವತ್ ಅವರು ಇತರ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲಿದ್ದಾರೆ.
ಹನ್ನೊಂದು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಮೂರು ಶೂಟಿಂಗ್( 10ಮೀಟರ್, 25ಮೀಟರ್ ಮತ್ತು 50ಮೀಟರ್) ರೇಂಜ್‌ಗಳಲ್ಲಿ 31ಪಂದ್ಯವನ್ನು ಅಹಮದ್‌ಬಾದ್ ಮಿಲಿಟರಿ ಪಡೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಏರ್ ಪಿಸ್ಟಲ್, ಕೇಂದ್ರ ಪಿಸ್ಟಲ್, ಸ್ಟಾಂಡರ್ಡ್ ಪಿಸ್ಟಲ್ ಪಂದ್ಯಗಳಲ್ಲಿ ರಾಣಾ ಅವರು ಸ್ಪರ್ಧಿಸುತ್ತಿದ್ದು, ಅಭಿನವ್ ಮತ್ತು ಅಂಜಲಿ ಅವರು ಏರ್ ರೈಫಲ್ ವಿಭಾಗಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ ಎಂದು ಸಂಘಟಕರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಪಂದ್ಯಾವಳಿಯಲ್ಲಿ ಸಮರೇಶ್ ಜಂಗ್, ಗಗನ್ ನಾರಂಗ್ ಮತ್ತು ಸುಷ್ಮಾ ರಾಣಾ ಪಾಲ್ಗೊಳ್ಳುತ್ತಿದ್ದಾರೆ.
|