ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೊಕೊವಿಕ್‌ಗೆ ರೋಮ್ ಮಾಸ್ಟರ್ಸ್ ಪ್ರಶಸ್ತಿ
ಸ್ಟಾನಿಲೇಸ್ ವಾವರಿಂಕಾ ವಿರುದ್ಧ ನಡೆದ ರೋಮ್ ಮಾಸ್ಟರ್ಸ್‌ನ ಅಂತಿಮ ಸುತ್ತಿನ ಪಂದ್ಯವನ್ನು ಮೂರು ಸೆಟ್‌ಗಳ ಆಟದಲ್ಲಿ ಗೆದ್ದುಕೊಂಡ ಮೂರನೇ ಶ್ರೇಯಾಂಕಿತ ನೋವಾಕ್ ಜೊಕೊವಿಕ್ ಅವರು ರೋಮ್ ಮಾಸ್ಟರ್ಸ್ ಚಾಂಪಿಯನ್‌ಷಿಪ್‌ನ್ನು ತಮ್ಮದಾಗಿಸಿಕೊಂಡರು.

ಸ್ವಿಸ್ ಆಟಗಾರನನ್ನು 4-6, 6-3, 6-3 ಸೆಟ್‌ಗಳ ಅಂತರದಿಂದ ಸೋಲಿಸಿರುವ ಜೊಕೋವಿಕ್ ಅವರು ವಾರದ ಅವಧಿಯಲ್ಲಿ ಅತ್ತ್ಯುತ್ತಮ ಪ್ರದರ್ಶನ ತೋರಿದ ಪರಿಣಾಮವಾಗಿ ಮುಂದಿನ ವಾರ ಬಿಡುಗಡೆಯಾಗಲಿರುವ ಎಟಿಪಿ ಶ್ರೇಯಾಂಕದಲ್ಲಿ ಅಗ್ರ ಹತ್ತರಲ್ಲಿ ಸ್ಥಾನ ಪಡೆಯುವುದು ನಿಶ್ಚಿತ.

ವಾವರಿಂಕ ಮತ್ತು ರಾಡಿಕ್ ನಡುವೆ ನಡೆದ ಸೆಮಿಫೈನಲ್ ಪಂದ್ಯವು ಕೇವಲ 20 ನಿಮಿಷಗಳಲ್ಲಿ ಅಂತ್ಯಗೊಂಡಿತು. ಬೆನ್ನು ನೋವಿನ ಕಾರಣ ರಾಡಿಕ್ ಅವರು ಪಂದ್ಯದಿಂದ ಹಿಂದೆ ಸರಿದು ವಾವರಿಂಕ್ ಅವರ ಫೈನಲ್ ಹಾದಿಯನ್ನು ಸುಗಮಗೊಳಿಸಿದರು.

ರಾಡೆಕ್ ಸ್ಟೆಪ್ನೆಕ್ ವಿರುದ್ಧ ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಕ್ ಮಾತ್ರ ತೀವ್ರವಾಗಿ ಸೆಣಸಿ ಅಂತಿಮವಾಗಿ ಸ್ಟೇಪ್ನೆಕ್‌ರನ್ನು 6-0, 1-0 ಸೆಟ್‌ಗಳ ಅಂತರದಿಂದ ಸೋಲಿಸಿ ಜೊಕೊವಿಕ್ ಫೈನಲ್ ತಲುಪಿದರು.
ಮತ್ತಷ್ಟು
ಜರ್ಮನ್ ಒಪನ್: ಸಫಿನ್ ಫೈನಲ್‌ಗೆ
ಜರ್ಮನ್ ಒಪನ್: ಇವಾನೊವಿಕ್ ನಿರ್ಗಮನ
ರೋಮ್ ಮಾಸ್ಟರ್ಸ್: ಸೆಮಿಗೆ ರಾಡಿಕ್
ಬರ್ಲಿನ್ ಓಪನ್: ಸೆಮಿಗೆ ಸಫೀನ್
ವಿಶಿಗೆ ಐದನೆ ಬಾರಿ ಆಸ್ಕರ್ ಪ್ರಶಸ್ತಿ
ಹಾಕಿ: ಭಾರತಕ್ಕೆ ಎರಡನೇ ಸೋಲು