ಹಾಲಿ ಚಾಂಪಿಯನ್ ಅನ್ನಾ ಇವಾನೋವಿಕ್ ಅವರು ಎಲಿನಾ ಡೆಮಿಂಟಿವಾ ವಿರುದ್ಧ ನಡೆದ ಬರ್ಲಿನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನೇರ ಸೆಟ್‌ಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಇವಾನೋವಿಕ್ ಅವರನ್ನು ಎದುರಿಸಿ ಸೋತಿದ್ದ ಡೆಮಿಂಟಿವಾ ಅವರು ಫೈನಲ್ ಪಂದ್ಯದಲ್ಲಿ ರಷಿಯಾದ ದೀನಾರ್ ಸಫೀನ್ ಅವರನ್ನು ಎದುರಿಸಲಿದ್ದಾರೆ.
ಮೊದಲ ಸೆಟ್ ಆಟವನ್ನು 6-2 ಸೆಟ್‌ಗಳ ಅಂತರದಿಂದ ಸೋತ 20 ವರ್ಷದ ಇವಾನೋವಿಕ್ ಅವರು ದ್ವಿತೀಯ ಸೆಟ್ ಆಟದಲ್ಲಿ ಪ್ರಬಲ ಪ್ರತಿರೋಧ ಒಡ್ಡಿದ ಕಾರಣ ಪಂದ್ಯವು ಸುದೀರ್ಘ ಅವಧಿಯವರೆಗೆ ಸಾಗಿತು. ಅಂತಿಮವಾಗಿ ಎರಡನೆ ಸೆಟ್‍ನ್ನು ರಷಿಯಾದ ಡಿಮಿಂಟಿವಾ ಅವರು 7-5 ರ ಅಂತರದಲ್ಲಿ ಗೆದ್ದುಕೊಂಡು ಫೈನಲ್ ತಲಪಿದರು.
ನಂ 2 ಆಟಗಾರ್ತಿಯನ್ನು ಸೋಲಿಸಿದ ಹುಮ್ಮಸ್ಸಿನಲ್ಲಿ ಇದ್ದ ಡಿಮಿಂಟಿವಾ ಫೈನಲ್ ಪಂದ್ಯದಲ್ಲಿ ಇನ್ನೋರ್ವ ರಷಿಯನ್ ಆಟಗಾರ್ತಿಯನ್ನು ಎದುರಿಸುವುದು ಕುತೂಹಲ ಹುಟ್ಟಿಸಿದೆ ಎಂದು ಹೇಳಿದರು.
|