ಡ್ರ್ಯಾಗ್ ಫ್ಲಿಕರ್ ಸಂದೀಪ್ ಸಿಂಗ್ ಅವರು ದಾಖಲಿಸಿದ ಎರಡು ಗೋಲುಗಳ ನೆರವಿನಿಂದ ತನ್ನ ಎರಡನೇ ಗೆಲುವು ದಾಖಲಿಸಿದ ಭಾರತವು 17ನೇ ಅಜ್ಲಾನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ಪದಕ ಗಳಿಸುವ ಬಯಕೆಗೆ ನೀರೇರದು ಪೋಷಿಸಿದೆ. ಬೆಲ್ಜಿಯಂ ವಿರುದ್ಧ ನಡೆದ ಐದನೇ ಲೀಗ್ ಪಂದ್ಯವನ್ನು ಭಾರತ 6-4 ಗೋಲುಗಳ ಅಂತರದಿಂದ ಗೆದ್ದುಕೊಂಡಿದೆ.
ಪಂದ್ಯದ ಪ್ರಥಮಾರ್ಧದಲ್ಲಿ 5-1 ಗೋಲುಗಳ ಲಬಾರೀ ಮನ್ನಡೆಯನ್ನು ಪಡೆದ ಭಾರತೀಯ ಹಾಕಿ ತಂಡವು ಸಂದೀಪ್ ಸಿಂಗ್, ಶಿವೇಂದ್ರ ಸಿಂಗ್, ದೀವಾಕರ್ ರಾಮ್ ಮತ್ತು ಎಸ್. ವಿ ಸುನೀಲ್ ಅವರು ಗೋಲುಗಳಿಸಿದರೆ. ಬೆಲ್ಜಿಯಂ ತಂಡದ ಪರ ಅಲೆಕ್ಸಾಂಡ್ರೆ ಡಿ ಸಾದೀಲೀರ್, ಜೇರೋಮ್ ಟ್ರ್ಯೂಯೆನ್ಸ್, ಥಾಮಸ್ ಬ್ರೈಯಿಲ್ಸ್ ಮತ್ತು ಚಾರ್ಲ್ಸ್ ವ್ಯಾಂಡೆವಿಘಲ್ಸ್ ಅವರು ಗೋಲು ಗಳಿಸಿದರು. 11 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತೀಯ ಹಾಕಿ ತಂಡವು ಶಿವೇಂದ್ರ ಸಿಂಗ್ ಅವರು ಗುರಿ ತಪ್ಪದೇ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುವ ಮೂಲಕ ಭಾರತ ತನ್ನ ಮೊದಲನೆ ಗೋಲು ದಾಖಲಿಸಿತು.
19 ವರ್ಷದ ದಿವಾಕರ್ ರಾಮ್ ಅವರು ಪೆನಾಲ್ಟಿಯಲ್ಲಿ ಗೋಲುಗಳಿಸುವ ಮೂಲಕ ತಂಡದ ಗೋಲಿನ ಅಂತರವನ್ನು ಎರಡಕ್ಕೆ ಎರಿಸಿದರು. ಬೆಲ್ಜಿಯಮ್ ತಂಡವೂ ಕೂಡ ಅಲೆಕ್ಸಾಂಡ್ರಿ ಅವರ ನೆರವಿನಿಂದ ತನ್ನ ಚೊಚ್ಚಲ ಗೋಲು ದಾಖಲಿಸಿತು.
ಬೆಲ್ಜಿಯಮ್ ತಂಡದ ಆಕ್ರಮಣವನ್ನು ಪುನಃ ಮೆಟ್ಟಿ ನಿಂತ ಭಾರತ, ಸಂದೀಪ್ ಸಿಂಗ್ ಅವರ ಪ್ರಬಲ ಡ್ರ್ಯಾಗ್ ಫ್ಲಿಕ್‌ನಲ್ಲಿ ಮೂರನೆ ಗೋಲು ಗಳಿಸಿತು. 35ನೇ ನಿಮಿಷದಲ್ಲಿ ಮತ್ತೊಂದು ಗೋಲು ಭಾರತೀಯ ಹಾಕಿ ತಂಡವು ಗಳಿಸಿತು.
ಪ್ರಥಮಾರ್ಧದ ಕೊನೆಯ ಕ್ಷಣದಲ್ಲಿ ಭಾರತಕ್ಕೆ ನಾಲ್ಕನೆ ಪೆನಾಲ್ಟಿ ಕಾರ್ನರ್ ದೊರೆಯಿತು. ದೊರೆತ ಪೆನಾಲ್ಟಿಯನ್ನು ಹಾಳು ಮಾಡದ ಸಂದೀಪ್ ಸಿಂಗ್ ಅವರು ತಂಡದ ಗೋಲಿನ ಅಂತರವನ್ನು 5-1ಕ್ಕೆ ಏರಿಸಿದರು.
ದ್ವಿತೀಯಾರ್ಧದಲ್ಲಿ ಬೆಲ್ಜಿಯಂನ ಪ್ರತಿರೋಧವನ್ನು ಭಾರತೀಯ ತಂಡವು ನಿರೀಕ್ಷಿಸಿರಲಲ್ಲ. ಊಹೆಗೂ ಮೀರಿದ ಆಕ್ರಮಣಕ ತಂತ್ರವನ್ನು ಅನುಸರಿಸಿದ ಬೆಲ್ಜಿಯಮ್ ಮೂರು ಗೋಲುಗಳನ್ನು ದಾಖಲಿಸಿ. ಪಂದ್ಯವನ್ನು ಭಾರತದಿಂದ ಕಿತ್ತುಕೊಳ್ಳುವ ಹರ ಸಾಹಸ ಮಾಡಿತು. ಆದರೂ 68 ನಿಮಿಷದಲ್ಲಿ ಎಸ್ ವಿ ಸುನೀಲ್ ನೀಡಿದ ಪಾಸ್‌ನ್ನು ಶಿವೇಂದ್ರ ಸಿಂಗ್ ಯಶಸ್ವಿಯಾಗಿ ಗೋಲು ಪೆಟ್ಟಿಗೆ ಸೇರಿಸಿದರು.
|