ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮತ್ತು ರಾಷ್ಟೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಪುಲ್ಲೇಲಾ ಗೋಪಿಚಂದ್ ಒಲಿಂಪಿಕ್ಸ್ ಆಟಗಾರ್ತಿ ಸೈನಾ ನೆಹ್ವಾಲ್ ಅವರೊಂದಿಗೆ ಕ್ರೀಡಾ ಸಚಿವ ಎಂ. ಎಸ್ ಗಿಲ್ ಅವರನ್ನು ಭೇಟಿಯಾಗಲು ತೆರಳಿದಾಗ ಗುರುತು ಹಿಡಿಯುವಲ್ಲಿ ವಿಫಲರಾಗಿ ನೀವು ಯಾರು ಎಂದು ಸಚಿವರು ಪ್ರಶ್ನಿಸಿದ ಘಟನೆ ವರದಿಯಾಗಿದೆ.
ಸೈನಾ ನೆಹ್ವಾಲ್ ಅವರನ್ನು ಅಭಿನಂದಿಸಿದ ಗಿಲ್, ಸೈನಾ ಪಕ್ಕದಲ್ಲಿ ನಿಂತಿದ್ದ ಗೋಪಿಚಂದ್ ಅವರನ್ನು ಗುರುತು ಹಿಡಿಯುವಲ್ಲಿ ವಿಫಲರಾದರು. ಇದು ಮರೆಗುಳಿಯೋ ಅಥವಾ ಅಪರಿಚಿತ ಪ್ರಜ್ಞೆಯೋ ಅಂತೂ ಗಿಲ್‌ಗೆ ಗೋಪಿಚಂದ್ ಯಾರೆಂದು ತಿಳಿಯಲಿಲ್ಲವಂತೆ !!
ಪ್ರಕಾಶ ಪಡುಕೋಣೆಯ ನಂತರ ಆಲ್ ಇಂಗ್ಲೆಂಡ್ ಚಾಂಪಿಯನ್ ಪಂದ್ಯಾವಳಿಯನ್ನು 2001ರಲ್ಲಿ ಗೆಲುವು ಸಾಧಿಸಿದ ಏಕೈಕ ಭಾರತೀಯರಾಗಿದ್ದು, ಸಚಿವ್ ಗಿಲ್ ಜೋಕ್ ಮಾಡುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವು ಎಂದು ಸೈನಾ ಮತ್ತು ಗೋಪಿಚಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಹೊರಬಿದ್ದ ಬಳಿಕ ಭಾರತಕ್ಕೆ ಮರಳಿದ ನಂತರ ತಮ್ಮ ಕಚೇರಿಗೆ ಭೇಟಿ ನೀಡುವಂತೆ ಸಚಿವ ಗಿಲ್ ಸೈನಾ ಅವರನ್ನು ಅಹ್ವಾನಿಸಿದ್ದರು.
|