ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಚೆನ್ನೈ ಓಪನ್ ಅರ್ಹತಾ ಸುತ್ತಿನಲ್ಲಿ ಬೋಪಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ಓಪನ್ ಅರ್ಹತಾ ಸುತ್ತಿನಲ್ಲಿ ಬೋಪಣ್ಣ
ಜನವರಿ 5ರಿಂದ 11ರವೆರೆಗೆ ನಡೆಯಲಿರುವ ಚೆನ್ನೈ ಓಪನ್‌ನ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಭಾರತದ ಡೇವಿಸ್ ಕಪ್ ವಿಜೇತ ರೋಹನ್ ಬೋಪಣ್ಣ ಆರನೇ ಶ್ರೇಯಾಂಕದ ಮೈಕೆಲ್ ಕನ್ನಿಂಗ್‌ರವರನ್ನು ಮುಖಾಮುಖಿಯಾಗಲಿದ್ದಾರೆ.

ಅರ್ಹತಾ ಪಂದ್ಯಗಳು ಶನಿವಾರ ಆರಂಭವಾಗಲಿದ್ದು, 18 ಭಾರತೀಯರು ಸರದಿಯಲ್ಲಿದ್ದಾರೆ. ಇಲ್ಲಿ ಆಯ್ಕೆಯಾದವರು ಪ್ರಮುಖ ಪಂದ್ಯಗಳಲ್ಲಿ ಆಡಲಿದ್ದಾರೆ.

ಆರನೇ ಶ್ರೇಯಾಂಕದ ಮೈಕೆಲ್ ಕನ್ನಿಂಗ್ ಎದುರು ಬೋಪಣ್ಣ ವಿಜಯಿಯಾದಲ್ಲಿ ಯ‌ೂಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ನಡುವಿನ ಹೋರಾಟದಲ್ಲಿ ಗೆದ್ದವರೆದುರು ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.

ವಿನೋದ್ ಶ್ರೀಧರ್‌ರವರು ಐರ್ಲ್ಯಾಂಡ್‌ನ ಲೌಕ್ ಸೊರೆನ್‌ಸೇನ್ ಅವರೆದುರು ಆರಂಭಿಕ ಅರ್ಹತಾ ಸುತ್ತಿನಲ್ಲಿ ಎದುರಿಸಲಿದ್ದಾರೆ. ಸುನಿಲ್ ಕುಮಾರ್ ಸಿಪೇಯಾರವರು ರಷ್ಯಾದ ಅಲೆಕ್ಸಾಂಡ್ರೆ ಕುದ್ರಿವತ್ಸೆವ್‌ರನ್ನು ಮುಖಾಮುಖಿಯಾಗಬೇಕಿದೆ.

ಚೆನ್ನೈ ಓಪನ್ ಜನವರಿ 5ರಂದು ಆರಂಭವಾಗಲಿದ್ದು, ವಿಶ್ವದ ನಂ.5 ಆಟಗಾರ ರಷ್ಯಾದ ನಿಕೋಲೆ ಡೆವಿಡೆಂಕೊ, ಕಳೆದ ಬಾರಿಯ ಚೆನ್ನೈ ಓಪನ್ ವಿಜೇತ, ಮಾಜಿ ನಂಬರ್ 1 ಸ್ಪೇನ್‌ನ ಕಾರ್ಲೋಸ್ ಮೋಯಾ ಕೂಡ ಟೂರ್ನಮೆಂಟಿನಲ್ಲಿ ಭಾಗವಹಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ತಂಡದಿಂದ ಸುನೀತಾ, ಶಿಖಾ ಔಟ್
ಪಾಕಿಸ್ತಾನದಿಂದ ಹಾಕಿ, ಸ್ಕ್ವಾಷ್ ಪ್ರವಾಸ ರದ್ದು
ಹಾಕಿ: ಪಾಕ್‌ಗೆ ಗೇಟ್‌ಪಾಸ್ ನೀಡಿದ ಭಾರತ
ಕ್ರೀಡಾಜೀವನದ ಉನ್ನತ ಸ್ಥಾನದಲ್ಲಿ ಘೋಷಾಲ್
ಅಗ್ರ 5ರೊಳಗೆ ಸೈನಾ ಪ್ರವೇಶ ಸಾಧ್ಯತೆ
ಸೋಮದೇವ್ ಭಾರತದ ಹೆಮ್ಮೆ: ಅಮೃತರಾಜ್