ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸರಕಾರದ ನಿಯಮಕ್ಕೆ ಸಾನಾ, ರಷ್ಮಿ ಬೆಂಬಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರದ ನಿಯಮಕ್ಕೆ ಸಾನಾ, ರಷ್ಮಿ ಬೆಂಬಲ
ಭಾರತ ಮ‌ೂಲದ ವಿದೇಶೀ ಆಟಗಾರರು ಭಾರತವನ್ನು ಪ್ರತಿನಿಧಿಸಿ ತ್ರಿವರ್ಣ ಧ್ವಜವನ್ನು ಬಳಸುವುದನ್ನು ನಿಷೇಧಿಸಿರುವ ಸರಕಾರದ ನಿಯಮವನ್ನು ಟೆನಿಸ್ ಆಟಗಾರ್ತಿಯರಾದ ಸಾನಾ ಭಾಂಬ್ರಿ ಮತ್ತು ರಷ್ಮಿ ಚಕ್ರವರ್ತಿ ಬೆಂಬಲಿಸಿದ್ದಾರೆ.

ಅಮೆರಿಕಾ ಪ್ರಜೆಗಳಾದ ಸುನೀತಾ ರಾವ್ ಮತ್ತು ಶಿಖಾ ಒಬೆರಾಯ್‌ರನ್ನು ಫೆಡರೇಷನ್ ಕಪ್ ತಂಡದಿಂದ ಹೊರಗಿಡಲಾಗಿರುವುದನ್ನು ಅವರು ಸಮರ್ಥಿಸಿಕೊಂಡಿದ್ದು, ಭಾರತದ ಪ್ರಜೆಗಳಿಗೆ ಮಾತ್ರ ನೀಡಲಾಗಿರುವ ಅವಕಾಶಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿದೇಶೀ ಪಾಸ್‌ಪೋರ್ಟ್ ಹೊಂದಿರುವ ಭಾರತ ಮ‌ೂಲದ ಕ್ರೀಡಾಳುಗಳು ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವಂತಿಲ್ಲ ಎಂದು ಭಾರತ ಸರಕಾರ ಕೆಲವೇ ದಿನಗಳ ಹಿಂದೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿಸಿದ್ದು. ಈ ಹಿನ್ನಲೆಯಲ್ಲಿ ಫೆಡರೇಷನ್ ಕಪ್ ಟೆನಿಸ್ ಟೂರ್ನಿಯ ತಂಡದಿಂದ ಅಮೆರಿಕಾ ಮ‌ೂಲದ ಸುನೀತಾ ರಾವ್ ಮತ್ತು ಶಿಖಾ ಒಬೆರಾಯ್ ಅವಕಾಶ ವಂಚಿತರಾಗಿದ್ದರು.

ಸಾನಾಗಿದು ಮೊದಲನೇ ಫೆಡರೇಷನ್ ಕಪ್. ರಷ್ಮಿ 2007ರಲ್ಲಿ ಫೆಡರೇಷನ್ ಕಪ್ ಆಡಿದ್ದು ಕೊನೆ. ಹಾಗಾಗಿ ಮ‌ೂರು ವರ್ಷಗಳ ನಂತರ ಮತ್ತೆ ಸ್ಥಾನ ಪಡೆದಂತಾಗಿದ್ದು, ಅಂಕಿತಾ ಭಾಂಬ್ರಿ ಜತೆ ವಾಪಸು ಬಂದಿದ್ದಾರೆ.

ಸರಕಾರದ ಹೊಸ ನಿಯಮಗಳಿಂದ ನಮಗೆ ಲಾಭವಾಗಿದೆ. ಭಾರತದಲ್ಲೇ ಜನಿಸಿದವರು ಮಾತ್ರ ದೇಶವನ್ನು ಪ್ರತಿನಿಧಿಸಿದರೆ ಸಾಕು. ಭಾರತದ ಆಟಗಾರರಿಗೆ ಇದು ಶುಭ ಸುದ್ದಿಯಾಗಿ ಪರಿಣಮಿಸಿದೆ ಈ ಆಟಗಾರ್ತಿಯರು ಪ್ರತಿಕ್ರಿಯೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈ ವರ್ಷ ಗಾಯಮುಕ್ತಳಾಗುವ ಬಯಕೆ ಸಾನಿಯಾಗೆ
ಚೆನ್ನೈ ಓಪನ್ ಅರ್ಹತಾ ಸುತ್ತಿನಲ್ಲಿ ಬೋಪಣ್ಣ
ಭಾರತ ತಂಡದಿಂದ ಸುನೀತಾ, ಶಿಖಾ ಔಟ್
ಪಾಕಿಸ್ತಾನದಿಂದ ಹಾಕಿ, ಸ್ಕ್ವಾಷ್ ಪ್ರವಾಸ ರದ್ದು
ಹಾಕಿ: ಪಾಕ್‌ಗೆ ಗೇಟ್‌ಪಾಸ್ ನೀಡಿದ ಭಾರತ
ಕ್ರೀಡಾಜೀವನದ ಉನ್ನತ ಸ್ಥಾನದಲ್ಲಿ ಘೋಷಾಲ್