ಡೇವಿಸ್ ಕಪ್ ವಿಜೇತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಚೆನ್ನೈ ಓಪನ್‌ನ ಅರ್ಹತಾ ಪಂದ್ಯದ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ನೆದರ್‌ಲ್ಯಾಂಡಿನ ಎದುರಾಳಿ ಮೈಕೆಲ್ ಕನ್ನಿಂಗ್‌ರವರನ್ನು 6-7, 7-6, 7-6ರಿಂದ ಮಣಿಸಿದ ಅವರು ಈ ಸಾಧನೆ ಮಾಡಿದರು.
ಜನವರಿ 5ರಿಂದ ಆರಂಭವಾಗಲಿರುವ ಚೆನ್ನೈ ಓಪನ್‌ಗಾಗಿನ ಅರ್ಹತಾ ಪಂದ್ಯ ನಡೆಯುತ್ತಿದ್ದು ಈ ಟೂರ್ನಮೆಂಟ್ 450 ಸಾವಿರ ಅಮೆರಿಕನ್ ಡಾಲರ್ ಹೊಂದಿದೆ. ಶನಿವಾರ ನಡೆದ ಅರ್ಹತಾ ಪಂದ್ಯದ ಮೊದಲ ಸುತ್ತಿನಲ್ಲಿ ರೋಹನ್ ಬೋಪಣ್ಣ ಗೆಲುವು ಸಾಧಿಸಿದ್ದಾರೆ.
ಅಂತಿಮ 32ರ ಹಂತಕ್ಕೆ ಭಾರತದ 18 ಆಟಗಾರರ ಪೈಕಿ 6 ಮಂದಿ ಆಯ್ಕೆಯಾಗಬೇಕಿದೆ. ಮೊದಲ ಸುತ್ತಿನಲ್ಲಿ ಬೋಪಣ್ಣ, ರೋಹನ್ ಗಜ್ಜರ್, ರಂಜಿತ್ ಮುರುಗೇಶನ್, ಸನಮ್ ಸಿಂಗ್, ಶ್ರೀರಾಮ್ ಬಾಲಾಜಿ ಮತ್ತು ವಿಘ್ನೇಶ್ ಮುರುಗೇಶನ್ ಗೆಲುವು ಸಾಧಿಸಿದ್ದಾರೆ.
ವಿಶ್ವ ಟೆನಿಸ್ ರ‌್ಯಾಂಕಿಂಗ್‌ನಲ್ಲಿ 333ನೇ ಸ್ಥಾನದಲ್ಲಿರುವ ರೋಹಣ್ ಬೋಪಣ್ಣ ಎದುರಾಳಿಯಿಂದ ಪ್ರಬಲ ಹೋರಾಟವನ್ನೇ ಎದುರಿಸಬೇಕಾಯಿತು. ಮೊದಲ ಸೆಟ್ ಸೋಲುಂಡರೂ ಎರಡು ಮತ್ತು ಮೂರನೇ ಸೆಟ್‌ನಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗೆಲುವು ಸಾಧಿಸಿದರು.
ಮುಂದಿನ ಹಂತದಲ್ಲಿ ಬೋಪಣ್ಣರವರು ಯೂಕಿ ಭಾಂಬ್ರಿಯವರನ್ನು ಮಣಿಸಿದ ಚಂಡೀಗಢದ ಸಮನ್ ಸಿಂಗ್ ಜತೆ ಹೋರಾಡಬೇಕಿದೆ.
|