ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಚೆನ್ನೈ ಓಪನ್: ಪ್ರಮುಖ ಪಂದ್ಯಕ್ಕೆ ಬೋಪಣ್ಣ ಅರ್ಹತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ಓಪನ್: ಪ್ರಮುಖ ಪಂದ್ಯಕ್ಕೆ ಬೋಪಣ್ಣ ಅರ್ಹತೆ
ಎರಡನೇ ಶ್ರೇಯಾಂಕದ ಜರ್ಮನಿಯ ಮೈಕೆಲ್ ಬೆರರ್‌ರನ್ನು ಸೋಲಿಸುವ ಮ‌ೂಲಕ ಭಾರತದ ಡೇವಿಸ್ ಕಪ್ ವಿಜೇತ ರೋಹನ್ ಬೋಪಣ್ಣ ತನ್ನ ಸಹ ಆಟಗಾರರಾದ ಸೋಮದೇವ್ ದೇವರ್‌ಮನ್ ಮತ್ತು ಪ್ರಕಾಶ್ ಅಮೃತರಾಜ್ ಜತೆ ಎಟಿಪಿ ಚೆನ್ನೈ ಓಪನ್‌ನ ಸಿಂಗಲ್ಸ್ ವಿಭಾಗದಲ್ಲಿ ಜತೆಯಾಗಿದ್ದಾರೆ.

ಮೈಕೆಲ್ ಬೆರರ್‌ರ ಜತೆಗಿನ ಅಂತಿಮ ಸುತ್ತಿನಲ್ಲಿ ಎರಡು ಗಂಟೆಗಳಿಗೂ ಮಿಕ್ಕಿದ ಹೋರಾಟದಲ್ಲಿ 4-6, 6-3, 6-4ರಿಂದ ಬೋಪಣ್ಣ ಜಯಗಳಿಸಿದ್ದು, ಟೂರ್ನಿಯ ಪ್ರಮುಖ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಹಿಂದಿನ ಎರಡು ಸುತ್ತುಗಳನ್ನೂ ಬೋಪಣ್ಣ ಜಯಿಸಿದ್ದರು.

ಮೊದಲ ಸೆಟ್ಟನ್ನು ಕಳೆದುಕೊಂಡರೂ ನಂತರದ ಸೆಟ್‌ಗಳಲ್ಲಿ ಪ್ರಬಲವಾಗಿ ಮ‌ೂಡಿ ಬಂದು ಎದುರಾಳಿಯನ್ನು ಮಣಿಸಿದರು. ಆ ಮ‌ೂಲಕ ಚೆನ್ನೈ ಓಪನ್‌ ಸಿಂಗಲ್ಸ್ ವಿಭಾಗದಲ್ಲಿ ಮ‌ೂವರು ಭಾರತೀಯ ಪುರುಷರು ಭಾಗವಹಿಸಿದಂತಾಗಿದೆ.

ಬೋಪಣ್ಣ ಅವರ ಜತೆ ಇಟಲಿಯ ಫ್ಲವಿಯೋ ಸಿಪೊಲ್ಲಾ, ಥಾಯ್ಲೆಂಡಿನ ಡಾನೈ ಉಡಮ್ಚೆಕೆ ಹಾಗೂ ಅಮೆರಿಕಾದ ರಾಜೀವ್ ರಾಮ್ ಕೂಡ ಪ್ರಮುಖ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಇಟಲಿಯ ಫ್ಲವಿಯೋರವರು ಜರ್ಮನಿಯ ಅಲೆಕ್ಸ್ ಸಾಟ್ಚಸ್ಕೊರವರನ್ನು 6-3, 6-1ರಿಂದ ಸೋಲಿಸಿದರು. ಥಾಯ್ಲೆಂಡಿನ ಡಾನೈ ಉಡಮ್ಚೆಕೆಯವರು ಕೊರಿಯಾದ ಕ್ಯೂ-ಟೇ-ಇಮ್‌ರನ್ನು 7-6(5), 6-1ರಿಂದ ಪರಾಜಯಗೊಳಿಸಿದ್ದಾರೆ. ಅಮೆರಿಕಾದ ರಾಮ್ ರಷ್ಯಾದ ಅಲೆಕ್ಸಾಂಡ್ರೆಯವರನ್ನು 6-4, 6-7(4), 6-3ರಿಂದ ಮಣಿಸಿ ಅರ್ಹತೆ ಪಡೆದುಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಕ್ವಾಷ್: ಭಾರತದ ಮ‌ೂವರು ಸೆ.ಫೈನಲಿನಲ್ಲಿ
ಪಾಕಿಸ್ತಾನದ ಮರಿಯಾಳನ್ನು ಮಣಿಸಿದ ದೀಪಿಕಾ
ಚೆನ್ನೈ ಓಪನ್: ಎರಡನೇ ಪಂದ್ಯ ಗೆದ್ದ ರೋಹನ್
ಚೆನ್ನೈ: ರೋಹನ್ ಬೋಪಣ್ಣ ಎರಡನೇ ಸುತ್ತಿಗೆ
ಭಾರತದ ಟೆನಿಸ್ ಭವಿಷ್ಯ ಸೋಮದೇವ್: ಪೇಸ್
ಸರಕಾರದ ನಿಯಮಕ್ಕೆ ಸಾನಾ, ರಷ್ಮಿ ಬೆಂಬಲ