ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸ್ಕ್ವಾಷ್: ದೀಪಿಕಾ, ಕುಶ್, ಮಹೇಶ್ ಫೈನಲ್‌ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಕ್ವಾಷ್: ದೀಪಿಕಾ, ಕುಶ್, ಮಹೇಶ್ ಫೈನಲ್‌ಗೆ
ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಬ್ರಿಟೀಷ್ ಓಪನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಟೂರ್ನಮೆಂಟಿನಲ್ಲಿ ಭಾರತದ ಮ‌ೂವರು ಸ್ಕ್ವಾಷ್ ಆಟಗಾರರಾದ ದೀಪಿಕಾ ಪಲ್ಲಿಕಲ್, ಕುಶ್ ಕುಮಾರ್ ಮತ್ತು ಮಹೇಶ್ ಮಂಗಾಂವ್ಕರ್ ಪ್ರತ್ಯೇಕ ವಿಭಾಗಗಳಲ್ಲಿ ತಮ್ಮ ಈಜಿಪ್ಟ್ ಎದುರಾಳಿಗನ್ನು ಮಣಿಸಿ ಫೈನಲ್ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ದೀಪಿಕಾ ಪಲ್ಲಿಕಲ್ ತನ್ನ ಈಜಿಪ್ಟ್ ಎದುರಾಳಿ ಹೆಬಾ ಎಲ್ ಟೊರ್ಕೀಯವರನ್ನು 11-9, 14-12, 9-11, 14-12ರ ಅಂತರದಿಂದ ಮಣಿಸಿದ್ದಾರೆ. ದೀಪಿಕಾ 19ರೊಳಗಿನ ಹುಡುಗಿಯರ ವಿಭಾಗದ ಸೆಮಿಫೈನಲ್ ಮುಗಿಸಿ ಇದೀಗ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ.

ಮೊದಲೆರಡು ಗೇಮ್‌ಗಳನ್ನು ಗೆದ್ದು ಕೊಂಡ ದೀಪಿಕಾ ಮ‌ೂರನೇ ಗೇಮ್‌ನಲ್ಲಿ ಎರಡು ಅಂಕ ಬಿಟ್ಟುಕೊಟ್ಟಿದ್ದರು. ಆದರೆ ನಾಲ್ಕನೇ ಗೇಮ್‌ನಲ್ಲಿ ಮರಳಿ ತನ್ನ ಅಧಿಪತ್ಯ ಸ್ಥಾಪಿಸಿ ಪಂದ್ಯವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಆಕೆ ಸಫಲರಾದರು.

13ರೊಳಗಿನ ಹುಡುಗರ ವಿಭಾಗದಲ್ಲಿ ಕುಶ್ ಕುಮಾರ್ ಈಜಿಪ್ಟ್‌ನ ಒಮರ್ ಎಲ್ ಅಟ್ಲಾಸ್‌ರನ್ನು 11-7, 11-7, 11-7ರಿಂದ ಹಾಗೂ 15ರೊಳಗಿನ ಹುಡುಗರ ವಿಭಾಗದಲ್ಲಿ ಮಹೇಶ್ ಮಂಗಾಂವ್ಕರ್ ತನ್ನ ಎದುರಾಳಿ ಮಾಜೆನ್ ಗಮಾಲ್‌ರನ್ನು 7-11, 11-2, 11-9, 11-4ರಿಂದ ಮಣಿಸಿ ತಮ್ಮ ಪ್ರಥಮ ಬ್ರಿಟೀಷ್ ಓಪನ್ ಫೈನಲ್ ಪ್ರವೇಶ ಪಡೆದರು.

ಕುಶ್ ಕುಮಾರ್ ತನ್ನ ಎದುರಾಳಿಯನ್ನು ಚೇತರಿಸಿಕೊಳ್ಳಲು ಆರಂಭದಲ್ಲೇ ಬಿಟ್ಟಿರಲಿಲ್ಲ. ಪಂದ್ಯದ ಅಂತ್ಯದವರೆಗೂ ಸ್ಥಿರತೆಯನ್ನು ಕಾಯ್ದುಕೊಂಡು ಕುಶ್ ವಿಜಯಿಯಾದರು. ಮಹೇಶ್ ಆರಂಭದಲ್ಲಿ ಆಘಾತ ಅನುಭವಿಸಿದರೂ ಮುಂದಿನ ಮ‌ೂರು ಗೇಮ್‌ಗಳಲ್ಲಿ ಚೇತರಿಸಿಕೊಂಡು ಎದುರಾಳಿಗೆ ಭಾರೀ ಹೊಡೆತಗಳನ್ನು ನೀಡುವ ಮ‌ೂಲಕ ಪಂದ್ಯವನ್ನು ತನ್ನ ವಶ ಮಾಡಿಕೊಂಡರು.

ಫೈನಲ್‌ ಪಂದ್ಯದಲ್ಲಿ ಮಹೇಶ್ ಇಂಗ್ಲೆಂಡಿನ ಒಲಿವರ್ ಹಾಲ್ಯಾಂಡ್ ಹಾಗೂ ಕುಶ್ ಕುಮಾರ್ ಈಜಿಪ್ಟಿನ ಎಮರ್ ಅಬೌಲ್ ಸೌಡ್‌ರನ್ನು ಎದುರಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪುಣೆ: ಜನವರಿ 28ರಿಂದ ವೈಟ್‌ಲಿಫ್ಟಿಂಗ್ ಕ್ರೀಡಾಕೂಟ
ಚೆನ್ನೈ ಓಪನ್: ಪ್ರಮುಖ ಪಂದ್ಯಕ್ಕೆ ಬೋಪಣ್ಣ ಅರ್ಹತೆ
ಸ್ಕ್ವಾಷ್: ಭಾರತದ ಮ‌ೂವರು ಸೆ.ಫೈನಲಿನಲ್ಲಿ
ಪಾಕಿಸ್ತಾನದ ಮರಿಯಾಳನ್ನು ಮಣಿಸಿದ ದೀಪಿಕಾ
ಚೆನ್ನೈ ಓಪನ್: ಎರಡನೇ ಪಂದ್ಯ ಗೆದ್ದ ರೋಹನ್
ಚೆನ್ನೈ: ರೋಹನ್ ಬೋಪಣ್ಣ ಎರಡನೇ ಸುತ್ತಿಗೆ