ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ನನ್ನ ಈ ಸ್ಥಿತಿಗೆ ಯುವರಾಜ್ ಸಿಂಗ್ ಕಾರಣ: ಸಾನಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನನ್ನ ಈ ಸ್ಥಿತಿಗೆ ಯುವರಾಜ್ ಸಿಂಗ್ ಕಾರಣ: ಸಾನಿಯಾ
ತನ್ನ ಕ್ರೀಡಾಜೀವನಕ್ಕೆ ಬೆದರಿಕೆ ಹಾಕಿದ್ದ ಮಣಿಕಟ್ಟು ಗಾಯದಿಂದ ಗುಣಮುಖರಾಗಲು ಕ್ರಿಕೆಟಿಗ ಯುವರಾಜ್ ಸಿಂಗ್ ಸಹಕಾರ ಕಾರಣ ಎಂದು ಭಾರತದ ಟೆನಿಸ್ ಸೆನ್ಸೇಷನಲ್ ಸೋಮವಾರ ಹಾಂಕಾಂಗ್‌ನಲ್ಲಿ ಪುನರುಚ್ಛರಿಸಿದ್ದಾರೆ.

ಕಳೆದ ವರ್ಷ ಗಾಯಾಳುವಾಗಿದ್ದ ಕಾರಣ ಹಲವು ಟೂರ್ನಮೆಂಟ್‌ಗಳನ್ನು ಸಾನಿಯಾ ಕೈ ಬಿಟ್ಟಿದ್ದರು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರೂ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗದೆ ನಿವೃತ್ತಿ ಹೊಂದಿದ್ದರು. ನಂತರ ನಡೆದ ಬೆಂಗಳೂರು ಓಪನ್, ಅಮೆರಿಕಾ ಓಪನ್‌ಗಳಲ್ಲೂ ಆಕೆ ಭಾಗವಹಿಸಿರಲಿಲ್ಲ. ಇದೀಗ ಮಣಿಕಟ್ಟು ನೋವಿನಿಂದ ಚೇತರಿಸಿಕೊಂಡಿರುವ ಸಾನಿಯಾ ಹಾಂಕಾಂಗ್ ಓಪನ್‌ನಲ್ಲಿ ಭಾಗವಹಿಸಲಿದ್ದಾರೆ.

"ನನ್ನ ಕ್ರೀಡಾಜೀವನಕ್ಕೆ ಧಕ್ಕೆಯಾಗಬಹುದಾಗಿದ್ದ ಗಾಯದಿಂದ ಮುಕ್ತಿ ಪಡೆದು ವಾಪಸು ಬರುತ್ತಿರುವುದು ನಿಜಕ್ಕೂ ನನಗೆ ರೋಮಾಂಚನ ಉಂಟು ಮಾಡಿದೆ. ಈ ವಿಚಾರದಲ್ಲಿ ನನಗೆ ಗೆಳೆಯ ಯುವರಾಜ್ ಸಿಂಗ್ ವೈದ್ಯಕೀಯ ಸಲಹೆ ನೀಡಿ ಸಹಾಯ ಮಾಡಿದ್ದಾರೆ" ಎಂದು ಸಾನಿಯಾ ಮಿರ್ಜಾ ಹೇಳಿದರು.

ಯುವರಾಜ್ ಸಿಂಗ್ ಗಾಯಾಳುವಾಗಿದ್ದಾಗ ಚಿಕಿತ್ಸೆ ಪಡೆಯುತ್ತಿದಿದ್ದ ವೈದ್ಯರ ಬಳಿ ಮಾತನಾಡಿ ಸಾನಿಯಾ ಮಿರ್ಜಾರನ್ನು ಅಲ್ಲಿಗೆ ಸೇರಿಸಿದ್ದರು. ಸ್ಪೈರಲ್ ಥೆರಪಿ ಪರಿಣತರಾದ ಜತಿನ್ ಚೌಧರಿಯವರು ಸಾನಿಯಾ ಮಿರ್ಜಾ ಮಣಿಕಟ್ಟು ನೋವನ್ನು ಕೆಲವೇ ತಿಂಗಳಲ್ಲಿ ಶಮನಗೊಳಿಸಿದ್ದರು. ಯಾವುದೇ ಶಸ್ತ್ರಚಿಕಿತ್ಸೆ ಮಾಡದೆ ಆಕೆಯ ನೋವನ್ನು ಜತಿನ್ ಪರಿಹಾರ ಮಾಡಿದ್ದು ವಿಶೇಷವಾಗಿತ್ತು.

ಹಾಂಕಾಂಗ್‌ನಲ್ಲಿ ನಡೆಯಲಿರುವ ಈ ಟೂರ್ನಮೆಂಟಿನಲ್ಲಿ ಯ‌ೂರೋಪ್, ರಷ್ಯಾ, ಅಮೆರಿಕಾ ಮತ್ತು ಏಷಿಯಾ ಪೆಸಿಪಿಕ್‌ಗಳು ಭಾಗವಹಿಸಲಿದ್ದು, ಜನವರಿ 7ರಿಂದ 10ರವರೆಗೆ ಟೂರ್ನಮೆಂಟ್ ನಡೆಯಲಿದೆ. ನಂಬರ್ ವನ್ ಜೆಲೆನಾ ಜಾಂಕೋವಿಕ್, ವಿಂಬಲ್ಡನ್ ಚಾಂಪಿಯನ್ ವೀನಸ್ ವಿಲ್ಲಿಯಮ್ಸ್, ವಿಶ್ವದ ನಂಬರ್ 7. ವೆರಾ ಝ್ವನರೆವಾ ಮತ್ತು ಚೀನಾದ ಅಗ್ರ ಆಟಗಾರ್ತಿ ಝೆಂಗ್ ಜೀ ಪಾಲ್ಗೊಳ್ಳಲಿದ್ದಾರೆ.

ಈ ಅವಧಿಯ ನಾಲ್ಕು ಗ್ರಾಂಡ್ ಸ್ಲಾಮ್‌ಗಳ ಮೊದಲನೇ ಟೂರ್ನಮೆಂಟ್ 'ಆಸ್ಟ್ರೇಲಿಯಾ ಓಪನ್' ಜನವರಿ 19ರಿಂದ ಆರಂಭವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಕ್ವಾಷ್: ದೀಪಿಕಾ, ಕುಶ್, ಮಹೇಶ್ ಫೈನಲ್‌ಗೆ
ಪುಣೆ: ಜನವರಿ 28ರಿಂದ ವೈಟ್‌ಲಿಫ್ಟಿಂಗ್ ಕ್ರೀಡಾಕೂಟ
ಚೆನ್ನೈ ಓಪನ್: ಪ್ರಮುಖ ಪಂದ್ಯಕ್ಕೆ ಬೋಪಣ್ಣ ಅರ್ಹತೆ
ಸ್ಕ್ವಾಷ್: ಭಾರತದ ಮ‌ೂವರು ಸೆ.ಫೈನಲಿನಲ್ಲಿ
ಪಾಕಿಸ್ತಾನದ ಮರಿಯಾಳನ್ನು ಮಣಿಸಿದ ದೀಪಿಕಾ
ಚೆನ್ನೈ ಓಪನ್: ಎರಡನೇ ಪಂದ್ಯ ಗೆದ್ದ ರೋಹನ್