ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಚೆನ್ನೈ ಓಪನ್: ಮೊದಲ ಸುತ್ತಿನಲ್ಲಿ ಪ್ರಕಾಶ್ ಪರಾಜಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ಓಪನ್: ಮೊದಲ ಸುತ್ತಿನಲ್ಲಿ ಪ್ರಕಾಶ್ ಪರಾಜಯ
ಡೇವಿಸ್ ಕಪ್ಪರ್ ಭಾರತೀಯ ಪ್ರಕಾಶ್ ಅಮೃತರಾಜ್ ಮತ್ತೆ ಎಡವಿದ್ದು, ಐದನೇ ಶ್ರೇಯಾಂಕದ ಅಗ್ರ ಆಟಗಾರ ಜರ್ಮನಿಯ ರೈನರ್ ಶೆಟ್ಲರ್ ಎದುರು ಎಟಿಪಿ ಚೆನ್ನೈ ಓಪನ್‌ನ ಮೊದಲ ಸುತ್ತಿನಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಗೆಲುವಿನ ನಗೆ ಬೀರಿರುವ ರೈನರ್ ಶೆಟ್ಲರ್ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡರು.

ಜರ್ಮನಿಯ ರೈನರ್ ಶೆಟ್ಲರ್ ವಿರುದ್ಧ ಎರಡನೇ ಸೆಟ್‌ನಲ್ಲಿ ಜಯಗಳಿಸಿದರೂ ಮೊದಲನೇ ಮತ್ತು ಕೊನೆಯ ಸೆಟ್‌ನಲ್ಲಿ ಸೋಲುಂಡ ಕಾರಣ ಪಂದ್ಯ ಪ್ರಕಾಶ್ ಕೈ ತಪ್ಪಿತು. ಪಂದ್ಯವನ್ನು ಪ್ರಕಾಶ್ 2-6, 6-4, 1-6ರ ಅಂತರದಿಂದ 85 ನಿಮಿಷಗಳ ಕಾಲ ಹೋರಾಡಿ ಕಳೆದುಕೊಂಡರು. ಈ ಟೂರ್ನಮೆಂಟ್ 450 ಸಾವಿರ ಅಮೆರಿಕನ್ ಡಾಲರ್ ಬಹುಮಾನವನ್ನು ಹೊಂದಿದೆ.

211ನೇ ರ‌್ಯಾಂಕ್‌ನ ಆಟಗಾರ ಪ್ರಕಾಶ್ ಅಮೃತರಾಜ್ ತವರು ನೆಲದಲ್ಲಿ ತನ್ನ ಪ್ರಭಾವ ಬೀರಲು ವಿಫಲವಾದರು. 33ನೇ ರ‌್ಯಾಂಕ್ ಆಟಗಾರ ಶೆಟ್ಲರ್ ಪಾರಮ್ಯ ಮೆರೆದಿದ್ದು, ಪ್ರಕಾಶ್‌ರ ತಪ್ಪುಗಳ ಲಾಭವನ್ನು ಸುಲಭವಾಗಿ ಪಡೆದುಕೊಂಡರು.

ಭಾರತದ ಪಾಸ್‌ಪೋರ್ಟ್ ಹೊಂದಿರದಿದ್ದರೂ ವೈಲ್ಡ್ ಕಾರ್ಡ್ ಅರ್ಹತೆ ಮ‌ೂಲಕ ಪ್ರಕಾಶ್ ಅಮೃತರಾಜ್ ನಾಮಕರಣಗೊಂಡಿದ್ದರು. ಭಾರತದ ನಂಬರ್ 2 ಆಟಗಾರನಾಗಿರುವ ಪ್ರಕಾಶ್ ಅಮೃತರಾಜ್ ಮತ್ತು ನಂಬರ್ ವನ್ ಆಟಗಾರ ಸೋಮದೇವ್ ದೇವರ್‌ಮನ್ ನವೆಂಬರ್‌ನಲ್ಲೇ ಚೆನ್ನೈ ಓಪನ್‌ಗಾಗಿ ವೈಲ್ಡ್ ಕಾರ್ಡ್ ಅರ್ಹತೆ ಗಿಟ್ಟಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನನ್ನ ಈ ಸ್ಥಿತಿಗೆ ಯುವರಾಜ್ ಸಿಂಗ್ ಕಾರಣ: ಸಾನಿಯಾ
ಸ್ಕ್ವಾಷ್: ದೀಪಿಕಾ, ಕುಶ್, ಮಹೇಶ್ ಫೈನಲ್‌ಗೆ
ಪುಣೆ: ಜನವರಿ 28ರಿಂದ ವೈಟ್‌ಲಿಫ್ಟಿಂಗ್ ಕ್ರೀಡಾಕೂಟ
ಚೆನ್ನೈ ಓಪನ್: ಪ್ರಮುಖ ಪಂದ್ಯಕ್ಕೆ ಬೋಪಣ್ಣ ಅರ್ಹತೆ
ಸ್ಕ್ವಾಷ್: ಭಾರತದ ಮ‌ೂವರು ಸೆ.ಫೈನಲಿನಲ್ಲಿ
ಪಾಕಿಸ್ತಾನದ ಮರಿಯಾಳನ್ನು ಮಣಿಸಿದ ದೀಪಿಕಾ