ತಮ್ಮ ಅರ್ಹತಾ ಸುತ್ತುಗಳ ಪಂದ್ಯಗಳನ್ನು ಜಯಿಸಿರುವ ಭಾರತದ ಬ್ಯಾಡ್ಮಿಂಟನ ಆಟಗಾರರಾದ ರೂಪೇಶ್ ಕುಮಾರ್ ಮತ್ತು ಸಾನವೆ ಥೋಮಸ್ ಮಲೇಷ್ಯನ್ ಸೂಪರ್ ಸಿರೀಸ್‌ನ ಪ್ರಮುಖ ಪಂದ್ಯಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಮಂಗಳವಾರ ನಡೆದ ಪಂದ್ಯಗಳಲ್ಲಿ ಸ್ಥಳೀಯ ಪ್ರತಿಭಾವಂತ ಆಟಗಾರರಾದ ಯಾವೊ-ಹಾನ್-ವೊ ಮತ್ತು ಹಾಂಗ್ ಕೆಂಗ್ ಯೊರವರನ್ನು 21-16, 21-14ರ ಅಂತರದಿಂದ 26 ನಿಮಿಷದಲ್ಲಿ ಮಣಿಸಿದರು. ನಂತರದ ಪಂದ್ಯದಲ್ಲಿ ಕಾಹ್-ಮಿಂಗ್-ಚೂಯಿ ಮತ್ತು ಝೆಂಗ್-ಲಿನ್-ಪಾಂಗ್ ಜೋಡಿಯನ್ನು 22-20, 21-19ರಿಂದ 30 ನಿಮಿಷಗಳಲ್ಲಿ ಸೋಲಿಸುವ ಮೂಲಕ ಪ್ರಧಾನ ಪಂದ್ಯದಲ್ಲಿ ಆಡುವ ಅರ್ಹತೆಯನ್ನು ರೂಪೇಶ್ ಕುಮಾರ್ ಮತ್ತು ಸಾವೆ ಥೋಮಸ್ ಜೋಡಿ ಪಡೆದುಕೊಂಡಿದೆ.
ಅರ್ಹತಾ ಪಂದ್ಯಗಳನ್ನು ಗೆದ್ದುಕೊಂಡಿರುವ ಈ ಜೋಡಿ ಮುಂದಿನ ಹಂತದಲ್ಲಿ ಮೂರನೇ ಶ್ರೇಯಾಂಕದ ತೈವಾನ್ ಜತೆಗಾರರಾದ ಹುಂಗ್-ಲಿಂಗ್-ಚೆನ್ ಮತ್ತು ಯೂ-ಲಾಂಗ್-ಲಿನ್‌ರನ್ನು ಬುಧವಾರ ಮುಖಾಮುಖಿಯಾಗಲಿದ್ದಾರೆ.
|