ಅರೇಬಿಯಾದ ಫುಟ್ಬಾಲ್ ವಾರಪತ್ರಿಕೆ 'ಸೂಪರ್' ನೀಡುವ ಅಗ್ರ ಏಷಿಯನ್ ಅವಾರ್ಡ್ ಪ್ರಶಸ್ತಿಗೆ ಸ್ಪರ್ಧಿಗಳಲ್ಲೊಬ್ಬರಾಗಿ ಭಾರತದ ಫುಟ್ಬಾಲ್ ತಂಡದ ಕಪ್ತಾನ ಭೈಚುಂಗ್ ಭುಟಿಯಾರನ್ನು ನಾಮಕರಣ ಮಾಡಲಾಗಿದೆ.
ಈ ಅರೇಬಿಯನ್ ಫುಟ್ಬಾಲ್ ಪತ್ರಿಕೆಯು ಏಷಿಯಾ, ಆಫ್ರಿಕಾ ಮತ್ತು ಅರೇಬಿಯಾ ದೇಶಗಳು ಸೇರಿದಂತೆ ಅಲ್ಲಿನ ಅಗ್ರ ಆಟಗಾರರನ್ನು ಗುರುತಿಸಿ ಪ್ರತ್ಯೇಕ ಪ್ರಶಸ್ತಿ ನೀಡಲಿದೆ. ಪ್ರತೀ ವಿಭಾಗದಲ್ಲಿ 100,000 ಅಮೆರಿಕನ್ ಡಾಲರ್ ಬಹುಮಾನ ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರ ಏಷಿಯನ್ ವಿಭಾಗಕ್ಕಾಗಿ ನಾಮಕರಣಗೊಂಡಿರುವವರಲ್ಲಿ ಭೈಚುಂಗ್ ಭುಟಿಯಾ ಕೂಡ ಒಬ್ಬರು.
ಭೈಚುಂಗ್ ಭುಟಿಯಾ ಸೇರಿದಂತೆ ಒಟ್ಟು 43 ಮಂದಿ ಏಷಿಯನ್ ಫುಟ್ಬಾಲ್ ಅವಾರ್ಡ್‌ಗಾಗಿ ಸ್ಪರ್ಧೆಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ, ಮ್ಯಾಂಚೆಸ್ಟರ್ ಯುನೈಟೆಡ್, ಜಪಾನ್, ಥಾಯ್ಲೆಂಡ್, ಸೌದಿ ಅರೇಬಿಯಾ ಮತ್ತು ಇರಾಕ್‌ನ ಆಟಗಾರರು ಕೂಡ ಒಳಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭುಟಿಯಾ, "ನಾಮಕರಣಗೊಂಡಿದ್ದು ಸಂತೋಷವಾಗಿದೆ. ನಮ್ಮ ಕಠಿಣ ಶ್ರಮವನ್ನು ಈ ರೀತಿ ಗುರುತಿಸಿದಾಗ ನಮಗೆ ನಿಜಕ್ಕೂ ಖುಷಿಯಾಗುತ್ತದೆ" ಎಂದಿದ್ದಾರೆ.
|