ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಚೆನ್ನೈ ಓಪನ್: ಸೋಮದೇವ್ ಅದ್ಭುತ, ಬೋಪಣ್ಣ ನೀರಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ಓಪನ್: ಸೋಮದೇವ್ ಅದ್ಭುತ, ಬೋಪಣ್ಣ ನೀರಸ
ಚೆನ್ನೈ ಓಪನ್‌ಗೆ ವೈಲ್ಡ್ ಕಾರ್ಡ್ ಅರ್ಹತೆ ಪಡೆದಿದ್ದ ಸೋಮದೇವ್ ದೇವರ್‌ಮನ್ ವರ್ಷಾರಂಭವನ್ನು ಅದ್ಭುತ ಗೆಲುವಿನ ಮ‌ೂಲಕ ಆರಂಭಿಸಿದರೆ, ಅತ್ತ ರೋಹನ್ ಬೋಪಣ್ಣ ಮೊದಲ ಸುತ್ತಿನಿಂದ ನಿರ್ಗಮಿಸಿದ್ದಾರೆ.

ವಿಶ್ವ ರ‌್ಯಾಂಕಿಂಗ್‌ನಲ್ಲಿ 202ನೇ ಸ್ಥಾನದಲ್ಲಿರುವ ಭಾರತದ ನಂ.1 ಸಿಂಗಲ್ಸ್ ಟೆನಿಸ್ ಆಟಗಾರ ಸೋಮದೇವ್ ದೇವರ್‌ಮನ್ ತನ್ನ ಎದುರಾಳಿ 114ನೇ ರ‌್ಯಾಂಕಿಂಗ್‌ನ ಅಮೆರಿಕಾದ ಕೆವಿನ್ ಕಿಮ್‌ರನ್ನು 6-3, 6-3ರಿಂದ ಸದೆಬಡಿದು ತನ್ನ ಮೊದಲ ಸುತ್ತು ಮುಗಿಸಿದ್ದಾರೆ.

ಥಾಯ್ಲೆಂಡಿನ ಡಾನಯ್ ಉಡೊಮೊಂಜೋಕ್‌ರೆದುರು ಆರನೇ ಶ್ರೇಯಾಂಕದ ಸ್ಪೇನ್‌ನ ಕಾರ್ಲೊಸ್ ಮೋಯಾ ಹೋರಾಡಲಿದ್ದು ಗೆಲುವು ಸಾಧಿಸಿದಲ್ಲಿ ಎರಡನೇ ಸುತ್ತು ಪ್ರವೇಶಿಸಲಿದ್ದಾರೆ. ಚೆನ್ನೈ ಓಪನ್‌ ಪ್ರಶಸ್ತಿಯನ್ನು ಈ ಹಿಂದೆ 2004 ಮತ್ತು 2005ರಲ್ಲಿ ಕಾರ್ಲೊಸ್ ಮೋಯಾ ತನ್ನ ಬಗಲಿಗೆ ಹಾಕಿಕೊಂಡಿದ್ದರು. ಇವರು ಗೆಲುವು ಸಾಧಿಸಿದಲ್ಲಿ ಎರಡನೇ ಸುತ್ತಿನಲ್ಲಿ ಸೋಮದೇವ್ ಜತೆ ಮುಖಾಮುಖಿಯಾಗಲಿದ್ದಾರೆ.

ಚೆನ್ನೈ ಓಪನ್‌ನಲ್ಲಿ ಅರ್ಹತಾ ಪಂದ್ಯಗಳನ್ನು ತನ್ನ ಅದ್ಭುತ ಆಟದಿಂದ ಗೆದ್ದು ಪ್ರಮುಖ ಸುತ್ತು ಪ್ರವೇಶಿಸಿದ್ದ ಕರ್ನಾಟಕದ ಹುಡುಗ ರೋಹನ್ ಬೋಪಣ್ಣ ಸೋಲುಂಡದ್ದು ನಿರಾಸೆಯುಂಟು ಮಾಡಿತು. ವಿಶ್ವ ಟೆನಿಸ್ ರ‌್ಯಾಂಕಿಂಗ್‌ನಲ್ಲಿ 332 ಹಾಗೂ ಭಾರತದ ನಂ.2 ಆಟಗಾರ ರೋಹನ್ ಉಜ್ಬೇಕಿಸ್ತಾನದ ಡೆನಿಸ್ ಇಸ್ತೋಮಿನ್‌ರೆದುರು 4-6, 6-7(3)ರಿಂದ ಮೊದಲ ಸುತ್ತಿನಲ್ಲಿ ಪರಾಜಯಗೊಂಡು ಚೆನ್ನೈ ಓಪನ್‌ ಸಿಂಗಲ್ಸ್ ವಿಭಾಗದಿಂದ ದಬ್ಬಿಸಿಕೊಂಡಿದ್ದಾರೆ.

ಈಗಾಗಲೇ ಪ್ರಥಮ ಸುತ್ತಿನಲ್ಲೇ ನಿರ್ಗಮಿಸಿರುವ ಪ್ರಕಾಶ್ ಅಮೃತರಾಜ್ ಜತೆ ರೋಹನ್ ಬೋಪಣ್ಣ ಕೂಡ ಸೇರಿಕೊಂಡಿದ್ದಾರೆ. ಇದೀಗ ಸಿಂಗಲ್ಸ್ ವಿಭಾಗದಲ್ಲಿ ಉಳಿದಿರುವವರು ಸೋಮದೇವ್ ದೇವರ್‌ಮನ್ ಮಾತ್ರ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಏಷಿಯನ್ ಅವಾರ್ಡ್‌' ಸ್ಪರ್ಧೆಯಲ್ಲಿ ಭುಟಿಯಾ
ಮಲೇಷ್ಯನ್ ಸೂಪರ್ ಸಿರೀಸ್: ಭಾರತ ಶುಭಾರಂಭ
ಚೆನ್ನೈ ಓಪನ್: ಅಕ್ರಮ ಟಿಕೆಟ್ ಮಾರುತ್ತಿದ್ದವರ ಬಂಧನ
ಬಾಸ್ಕೆಟ್‌ಬಾಲ್: ಕರ್ನಾಟಕ ತಂಡ ಸೋಲು
ಮಲೇಷ್ಯಾ ಓಪನ್‌ನಲ್ಲಿ ಸೈನಾ ನೆಹ್ವಾಲ್
ಮಾರ್ಕೊಸ್‌ಗೆ ಸೋಲುನಿಸಿದ ಜಾರ್ಕೊ