ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಚೆನ್ನೈ ಓಪನ್: ಕಾರ್ಲೊಸ್ ಮೋಯಾ ಎರಡನೇ ಸುತ್ತಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ಓಪನ್: ಕಾರ್ಲೊಸ್ ಮೋಯಾ ಎರಡನೇ ಸುತ್ತಿಗೆ
ಇಲ್ಲಿನ ಎರಡು ಬಾರಿಯ ಚಾಂಪಿಯನ್ ಸ್ಪೇನ್‌ನ ಕಾರ್ಲೊಸ್ ಮೋಯಾರವರು ಥಾಯ್ಲೆಂಡಿನ ಡಾನಯ್ ಉಡೊಮೊಂಜೋಕ್‌ರೆದುರು ಗೆಲುವು ಸಾಧಿಸಿದ್ದು, ಚೆನ್ನೈ ಓಪನ್‌ನ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಭಾರತದ ನಂ.1 ಸಿಂಗಲ್ಸ್ ಟೆನಿಸ್ ಆಟಗಾರ ಸೋಮದೇವ್ ದೇವರ್‌ಮನ್ ಜತೆ ಎರಡನೇ ಸುತ್ತಿನಲ್ಲಿ ಮೋಯಾ ಸೆಣಸಾಡಲಿದ್ದಾರೆ.

ಕಾರ್ಲೊಸ್ ಮೋಯಾ ತನ್ನ ಎದುರಾಳಿ ಡಾನಯ್‌ರನ್ನು 6-3, 7-6(4)ರಿಂದ ಮಣಿಸಿ ಈ ಸಾಧನೆ ಮಾಡಿದ್ದಾರೆ. ಎದುರಾಳಿಯಿಂದ ಮೊದಲ ಸೆಟ್‌ನಲ್ಲಿ ಪ್ರತಿರೋಧ ಅಷ್ಟೊಂದು ಬರದಿದ್ದರೂ ಎರಡನೇ ಸೆಟ್‌ನಲ್ಲಿ ಪ್ರಬಲವಾಗಿ ಮ‌ೂಡಿ ಬಂದರು. ಆದರೂ ಗೆಲುವು ಸಾಧಿಸಲು ಪ್ರತಿಸ್ಪರ್ಧಿಗೆ ಅವಕಾಶ ನೀಡದ ಮೋಯಾ ಎರಡೂ ಸೆಟ್‌ಗಳಲ್ಲಿ ಜಯ ಸಾಧಿಸಿ ಮೊದಲ ಸುತ್ತು ಮುಗಿಸಿದರು.

ಸೋಮದೇವ್ ಮೊದಲ ಸುತ್ತಿನಲ್ಲಿ ಅಮೆರಿಕಾದ ಕೆವಿನ್ ಕಿಮ್‌ರನ್ನು 75 ನಿಮಿಷಗಳ ಹೋರಾಟದಲ್ಲಿ 6-3, 6-3ರ ಅಂತರದಿಂದ ಮಣಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದರು. ವಿಶ್ವ ಟೆನಿಸ್ ರ‌್ಯಾಂಕಿಂಗ್‌ನ 114ನೇ ಸ್ಥಾನಿಯನ್ನು ಮೊದಲ ಸುತ್ತಿನಲ್ಲಿ ಮಣಿಸಿರುವ 202ನೇ ಸ್ಥಾನದಲ್ಲಿರುವ ಸೋಮದೇವ್ ಮುಂದಿನ ಸುತ್ತಿನಲ್ಲಿ 42ನೇ ಸ್ಥಾನದ ಮೋಯಾ ಜತೆ ಹೇಗೆ ಏಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೆನ್ನೈ ಓಪನ್: ಸೋಮದೇವ್ ಅದ್ಭುತ, ಬೋಪಣ್ಣ ನೀರಸ
'ಏಷಿಯನ್ ಅವಾರ್ಡ್‌' ಸ್ಪರ್ಧೆಯಲ್ಲಿ ಭುಟಿಯಾ
ಮಲೇಷ್ಯನ್ ಸೂಪರ್ ಸಿರೀಸ್: ಭಾರತ ಶುಭಾರಂಭ
ಚೆನ್ನೈ ಓಪನ್: ಅಕ್ರಮ ಟಿಕೆಟ್ ಮಾರುತ್ತಿದ್ದವರ ಬಂಧನ
ಬಾಸ್ಕೆಟ್‌ಬಾಲ್: ಕರ್ನಾಟಕ ತಂಡ ಸೋಲು
ಮಲೇಷ್ಯಾ ಓಪನ್‌ನಲ್ಲಿ ಸೈನಾ ನೆಹ್ವಾಲ್