ವಿಶ್ವದ ನಂ.5 ರಷ್ಯಾದ ನಿಕೋಲೆ ಡೆವಿಡೆಂಕೊರವರು ವಿಶ್ವದ ನಂ. 123 ಆಟಗಾರ ಆಸ್ಟ್ರೇಲಿಯಾದ ಡೇನಿಯಲ್ ಕೊಲೆರರ್‌ರನ್ನು ಚೆನ್ನೈ ಓಪನ್ ಟೆನಿಸ್‌ನ ಮೊದಲ ಸುತ್ತಿನಲ್ಲಿ ಮಣಿಸಿದ್ದು, ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಸುಮಾರು 72 ನಿಮಿಷಗಳ ಕಾಲ ನಡೆದ ಈ ಹೋರಾಟ 6-2, 6-3ರ ಅಂತರದಿಂದ ಕೊನೆಗೊಂಡಿತು. ಎರಡೂ ಸೆಟ್‌ಗಳಲ್ಲಿ ಎದುರಾಳಿಯನ್ನು ಚೇತರಿಸಿಕೊಳ್ಳಲು ಬಿಡದ ಡೆವಿಡೆಂಕೊ ತನ್ನ ಪಾರುಪತ್ಯ ಮೆರೆದರು. ಆರನೇ ಮತ್ತು ಎಂಟನೇ ಗೇಮ್‌ಗಳನ್ನು ಬ್ರೇಕ್ ಮಾಡಿದ 27ರ ಡೆವಿಡೆಂಕೊ ಮೊದಲ ಸೆಟ್ ಗೆದ್ದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಶಕ್ತಿಯುತವಾಗಿ ಕಂಡು ಬಂದ ಆಸ್ಟ್ರೇಲಿಯನ್ ಪ್ರತಿಸ್ಪರ್ಧಿ ಗೆಲುವು ಸಾಧಿಸಲಾಗಲಿಲ್ಲ.
ಆ ಮೂಲಕ ಗೆಲುವಿನೊಂದಿಗೆ ವರ್ಷದಾರಂಭವನ್ನು ಮಾಡಿರುವ ಡೆವಿಡೆಂಕೊ ಈ ತಿಂಗಳಾಂತ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ಗಾಗಿ ಪೂರ್ವ ತಯಾರಿ ನಡೆಸಿದ್ದಾರೆ.
"ಅವರು ಕೆಲವು ಉತ್ತಮ ಡ್ರಾಪ್ ಶಾಟ್‌ಗಳನ್ನಾಡಿದ್ದಾರೆ. ನಾನು ಆಚೀಚೆ ಓಡುತ್ತಾ ಪ್ರಯತ್ನಿಸಬೇಕಾಗಿತ್ತು. ಎದುರಾಳಿ ಉತ್ತಮವಾಗಿ ಆಡಿದರು" ಎಂದು ಮೊದಲನೇ ಸುತ್ತಿನಲ್ಲಿ ಗೆಲುವು ಸಾಧಿಸಿದ ನಂತರ ಡೆವಿಡೆಂಕೊ ಪ್ರತಿಕ್ರಿಯೆ ನೀಡಿದ್ದಾರೆ.
|