ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸ್ಕ್ವಾಷ್: ಮಹೇಶ್ ಚಾಂಪಿಯನ್, ಕುಶ್‌ಗೆ ಸೋಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಕ್ವಾಷ್: ಮಹೇಶ್ ಚಾಂಪಿಯನ್, ಕುಶ್‌ಗೆ ಸೋಲು
15ರೊಳಗಿನ ಬಾಲಕರ ವಿಭಾಗದ ಬ್ರಿಟೀಷ್ ಜೂನಿಯರ್ ಓಪನ್ (ಬಿಜೆಒ) ಸ್ಕ್ವಾಷ್ ಪ್ರಶಸ್ತಿಯನ್ನು ಮಹೇಶ್ ಮಂಗಾವ್ಕರ್ ಪಡೆದುಕೊಂಡಿದ್ದು, ಎದುರಾಳಿ ಇಂಗ್ಲೆಂಡಿನ ಒಲಿವರ್ ಹಾಲ್ಯಾಂಡ್‌ರನ್ನು ಮಣಿಸಿ ಈ ಸಾಧನೆಯನ್ನು ಮಾಡಿದ್ದಾರೆ. ಅದೇ ಹೊತ್ತಿಗೆ ಫೈನಲ್ ಪ್ರವೇಶಿಸಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ 13ರೊಳಗಿನವರ ವಿಭಾಗದ ಕುಶ್ ಕುಮಾರ್ ವೀರೋಚಿತವಾಗಿ ಪರಾಜಯಗೊಂಡರು.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನಲ್ಲಿ 15ರೊಳಗಿನ ಬಾಲಕರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಮಹೇಶ್ ಎದುರಾಳಿಯನ್ನು 11-5, 7-11, 11-5, 12-10ರಿಂದ ಸೋಲಿಸಿದರು.

ಇಲ್ಲಿನ ಪ್ರಶಸ್ತಿಯನ್ನು ಕೊನೆಯ ಬಾರಿ ಭಾರತ ಪಡೆದುಕೊಂಡದ್ದು 2004ರಲ್ಲಿ. 19ರೊಳಗಿನ ಬಾಲಕರ ವಿಭಾಗದಲ್ಲಿ ಸೌರವ್ ಘೋಷಾಲ್ ಬ್ರಿಟೀಷ್ ಜೂನಿಯರ್ ಓಪನ್ ಸ್ಕ್ವಾಷ್ ಪ್ರಶಸ್ತಿಯನ್ನು ಈ ಹಿಂದೆ ಪಡೆದುಕೊಂಡಿದ್ದರು. ಹಾಗಾಗಿ ನಾಲ್ಕು ವರ್ಷದ ಅಂತರದ ನಂತರ ಮತ್ತೊಂದು ಪ್ರಶಸ್ತಿಯನ್ನು ಪಡೆದಂತಾಗಿದೆ.

ದುರದೃಷ್ಟ ಆವರಿಸಿಕೊಂಡದ್ದು ದೆಹಲಿಯ ಹುಡುಗ ಕುಶ್ ಕುಮಾರ್‌ಗೆ. 13ರೊಳಗಿನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ್ದ ಕುಶ್ ಕುಮಾರ್ ಫೈನಲ್‌ನಲ್ಲಿ
ಈಜಿಪ್ಟಿನ ಎಮರ್ ಅಬೌಲ್ ಸೌಡ್‌ರನ್ನು ಮುಖಾಮುಖಿಯಾಗಿದ್ದರು. ಆದರೆ ನಿರೀಕ್ಷಿತ ಪ್ರದರ್ಶನದಲ್ಲಿ ವಿಫಲವಾದ ಅವರು 7-11, 11-7, 11-9, 9-11, 7-11ರಿಂದ ಪಂದ್ಯವನ್ನು ಕಳೆದುಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೆನ್ನೈ: ಮೊದಲ ಸುತ್ತಿನಲ್ಲಿ ಡೆವಿಡೆಂಕೊ ನಿರಾತಂಕ
ಚೆನ್ನೈ ಓಪನ್: ಕಾರ್ಲೊಸ್ ಮೋಯಾ ಎರಡನೇ ಸುತ್ತಿಗೆ
ಚೆನ್ನೈ ಓಪನ್: ಸೋಮದೇವ್ ಅದ್ಭುತ, ಬೋಪಣ್ಣ ನೀರಸ
'ಏಷಿಯನ್ ಅವಾರ್ಡ್‌' ಸ್ಪರ್ಧೆಯಲ್ಲಿ ಭುಟಿಯಾ
ಮಲೇಷ್ಯನ್ ಸೂಪರ್ ಸಿರೀಸ್: ಭಾರತ ಶುಭಾರಂಭ
ಚೆನ್ನೈ ಓಪನ್: ಅಕ್ರಮ ಟಿಕೆಟ್ ಮಾರುತ್ತಿದ್ದವರ ಬಂಧನ