ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸೈನಾ, ಅನೂಪ್‌‌ಗೆ ಗೆಲುವು; ಚೇತನ್, ಭಟ್‌ಗೆ ನಿರಾಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೈನಾ, ಅನೂಪ್‌‌ಗೆ ಗೆಲುವು; ಚೇತನ್, ಭಟ್‌ಗೆ ನಿರಾಸೆ
ಸೈನಾ ನೆಹ್ವಾಲ್ ಮತ್ತು ಅನೂಪ್ ಶ್ರೀಧರ್ ಸಿಂಗಾಪುರ ಓಪನ್ ಸೂಪರ್ ಸಿರೀಸ್ ಆರಂಭಿಕ ಸುತ್ತಿನಲ್ಲಿ ಜಯ ದಾಖಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದರೆ ಚೇತನ್ ಆನಂದ್, ಅರವಿಂದ್ ಭಟ್, ಜ್ವಾಲಾ ಗುತ್ತಾ, ವಿ. ದಿಜು, ಅದಿತಿ ಮುತಾತ್ಕರ್, ಅಶ್ವಿನಿ ಪೊನ್ನಪ್ಪ ಸೋಲನುಭವಿಸಿದ್ದಾರೆ.

ಆರನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ತನ್ನ ಎದುರಾಳಿ ಕ್ವಾಲಿಫೈಯರ್ ಸ್ಲೋವೇನಿಯಾದ ಮಾಜಾ ತ್ವೆರ್ಡಿಯವರನ್ನು 18-21, 21-11, 21-16ರಿಂದ 50 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸೋಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮುಂದಿನ ಸುತ್ತಿನಲ್ಲಿ ನೆಹ್ವಾಲ್‌ರವರು ಇಂಡೋನೇಷಿಯಾದ ಶ್ರೇಯಾಂಕರಹಿತ ಆಟಗಾರ್ತಿ ಅದ್ರಿಯಾಂತಿ ಫ್ರಿರ್ದಾಸರಿಯವರನ್ನು ಮುಖಾಮುಖಿಯಾಗಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಕೊರಿಯಾದ ಮೂನ್ ಹೀ ಕಿಮ್‌ರನ್ನು 23-21, 21-15ರಿಂದ ಮಣಿಸಿದ್ದರು.

ಅದೇ ಹೊತ್ತಿಗೆ ಮಹಿಳೆಯರ ವಿಭಾಗದಲ್ಲಿದ್ದ ಮತ್ತೊಬ್ಬ ಭಾರತೀಯ ಆಟಗಾರ್ತಿ ಅದಿತಿ ಮುತಾತ್ಕರ್ ಮೊದಲ ಸುತ್ತಿನಲ್ಲಿಯೇ ನಿರಾಸೆ ಅನುಭವಿಸಿದ್ದಾರೆ. ನೆದರ್ಲೆಂಡ್‌ನ ಜೂಡಿತ್ ಮೆಲೆಂಡಿಜಿಕ್ಸ್‌‌ರೆದುರು ಮುತಾತ್ಕರ್ 21-14, 21-19ರ ಅಂತರದಿಂದ ಸುಮಾರು 30 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸೋಲುಂಡರು.

ಮಿಶ್ರ ಡಬಲ್ಸ್ ಜೋಡಿ ಜ್ವಾಲಾ ಗುತ್ತಾ ಮತ್ತು ವಿ. ದಿಜು ಆರನೇ ಶ್ರೇಯಾಂಕಿತ ಚೈನೀಸ್ ಜೋಡಿ ಜೂಂಗ್ಬೋ ಕ್ಸಿಯೇ - ಯಾವೆನ್ ಜಾಂಗ್‌ರೆದುರು 21-13, 21-14ರಿಂದ 23 ನಿಮಿಷಗಳಲ್ಲಿ ಕುಸಿದರು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುತ್ತಾ - ಅಶ್ವಿನಿ ಪೊನ್ನಪ್ಪ ಜತೆಗಾತಿಯರು ತಮ್ಮ ಎದುರಾಳಿಗಳಾದ ಸ್ಕಾಟ್ಲೆಂಡ್‌ನ ಇಮೋಜನ್ ಬಾಂಕೈರ್ - ಇಂಗ್ಲೆಂಡ್‌ನ ಡೋನಾ ಕೆಲ್ಲೋಗ್‌ ವಿರುದ್ಧ 22-20, 10-21, 12-21ರಿಂದ 39 ನಿಮಿಷಗಳ ಹೋರಾಟದಲ್ಲಿ ಸೋಲೊಪ್ಪಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚೇತನ್ ಆನಂದ್ ಮತ್ತು ಅರವಿಂದ್ ಭಟ್ ಕೂಡ ಸೋಲನುಭವಿಸಿದ್ದಾರೆ. ಚೇತನ್‌ರವರು ಮಲೇಷಿಯಾದ ಚೂಂಗ್ ಹಾನ್ ವಾಂಗ್‌ರೆದುರು 21-18, 21-11ರ ಅಂತರದಿಂದ 32 ನಿಮಿಷಗಳಲ್ಲಿ ಹಾಗೂ ಭಟ್ ಇಂಡೋನೇಷಿಯಾದ ಮೂರನೇ ಶ್ರೇಯಾಂಕಿತ ಸೋನಿ ದ್ವಿ ಕುನ್ಕೋರ್ಡ್‌ರೆದುರು 21-12, 15-21, 21-9ರಿಂದ 43 ನಿಮಿಷಗಳಲ್ಲಿ ಸೋಲು ಕಂಡರು.

ಒಟ್ಟಾರೆ ಸಿಂಗಾಪುರ ಓಪನ್ ಸೂಪರ್ ಸಿರೀಸ್‌ನಲ್ಲಿ ಭಾರತೀಯರಾಗಿ ಇದೀಗ ಸೈನಾ ನೆಹ್ವಾಲ್ ಮತ್ತು ಅನೂಪ್ ಶ್ರೀಧರ್ ಮಾತ್ರ ಉಳಿದುಕೊಂಡಂತಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೂರನೇ ಮದುವೆ ಮಾಡಿಕೊಂಡ ಟೈಸನ್
ಏಗನ್ ಕ್ಲಾಸಿಕ್ ಎರಡನೇ ಸುತ್ತಿಗೆ ಸಾನಿಯಾ
ಅರ್ಹತಾ ಸುತ್ತಿನಲ್ಲಿ ಅನೂಪ್‌ಗೆ ಜಯ
ಟೆನಿಸ್: ಮೋನಿಷ್, ಸರ್ದಾ ಕ್ವಾರ್ಟರ್‌ಗೆ
ರಿಯಲ್‌ಗೆ ಕಾಕಾ
ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ವಿಜೇಂದರ್