ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ದಿನೇಶ್, ಜಿತೇಂದರ್, ಭಗವಾನ್ ಸೆಮಿಗೆ ಲಗ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಿನೇಶ್, ಜಿತೇಂದರ್, ಭಗವಾನ್ ಸೆಮಿಗೆ ಲಗ್ಗೆ
ಚೀನಾದ ಝುಹೈನಲ್ಲಿ ನಡೆಯುತ್ತಿರುವ ಏಷಿಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ಸ್‌ನಲ್ಲಿ ದಿನೇಶ್ ಕುಮಾರ್, ಜಿತೇಂದರ್ ಕುಮಾರ್ ಮತ್ತು ಜೈ ಭಗವಾನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಇವರು ತಮ್ಮ ಎದುರಾಳಿಗಳನ್ನು ಭಾರೀ ಅಂತರದಿಂದ ಮಣಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದರು.

ದಿನೇಶ್ 81 ಕೆ.ಜಿ. ವಿಭಾಗದಲ್ಲಿ ಚೈನೀಸ್ ತೈಪೈಯ ಬಾಕ್ಸರ್ ಹ್ಸಿಯೋ ಹ್ವುಯಾಂಗ್ ಯೀ ವಿರುದ್ಧ 7-2ರಿಂದ ಜಯಭೇರಿ ಬಾರಿಸುವ ಮೂಲಕ ತನ್ನ ಕ್ವಾರ್ಟರ್ ಫೈನಲ್ ಆಟವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

54 ಕೆ.ಜಿ. ವಿಭಾಗದ ಸ್ಪರ್ಧಿ ಜಿತೇಂದರ್ ಮಂಗೋಲಿಯಾದ ಎಂಕಜರ್ಗಲ್ ಇದೆರ್ಕೂರನ್ನು 10-2ರಿಂದ ಹೆಡೆಮುರಿಕಟ್ಟುವ ಮೂಲಕ ಪದಕ ಸುತ್ತಿಗೆ ಪ್ರವೇಶಿಸಿದರು. ಜಿತೇಂದರ್ ಫ್ಲೈ ವೈಟ್ (51 ಕೆ.ಜಿ.) ವಿಭಾಗದಿಂದ ಭಡ್ತಿ ಪಡೆದ ನಂತರ ಮೊದಲ ಬಾರಿ ಪದಕದ ಹತ್ತಿರಕ್ಕೆ ಬಂದಿದ್ದಾರೆ.

60 ಕೆ.ಜಿ. ವಿಭಾಗದ ಜೈ ಭಗವಾನ್ ಕೂಡ ಕಡಿಮೆ ಪ್ರತಾಪಿಯಲ್ಲ. ಅವರು ಸ್ಥಳೀಯ ಸ್ಪರ್ಧಿ ಹೂ ಕ್ವಿನ್ಕನ್‌ರನ್ನು 12-3ರ ಅಂತರದಿಂದ ಸೋಲಿಸಿ ಸೆಮಿ ತಲುಪಿದ್ದಾರೆ.

ಈ ಮೂವರು ಸೆಮಿಫೈನಲ್ ಪ್ರವೇಶಿಸಿರುವುದರೊಂದಿಗೆ ಭಾರತಕ್ಕೆ ಒಟ್ಟಾರೆ ಐದು ಪದಕಗಳು ಖಚಿತವಾದಂತಾಗಿದೆ. ಈಗಾಗಲೇ 48 ಕೆ.ಜಿ. ವಿಭಾಗದಲ್ಲಿ ತ್ರೊಕ್ಚೊಮ್ ನ್ಯಾನೋ ಸಿಂಗ್ ಮತ್ತು +91 ಕೆ.ಜಿ. ವಿಭಾಗದಲ್ಲಿ ಪರಮಜಿತ್ ಸಮೋತಾ ಸೆಮಿ ತಲುಪಿದ್ದಾರೆ.

ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಜಿತೇಂದರ್ ಚೈನೀಸ್ ತೈಪೈಯ ಲಿಯೂ ಶಿಹ್ ಜಂಗ್ ವಿರುದ್ಧ ಸೆಣಸಾಡಲಿದ್ದಾರೆ. ಸಂಪೂರ್ಣ ಆತ್ಮವಿಶ್ವಾಸದ ಮಾತುಗಳನ್ನಾಡುವ ಜಿತೇಂದರ್ ಗೆಲ್ಲುವ ಭರವಸೆ ಹೊಂದಿದ್ದು, ಚಿನ್ನದ ಪದಕ ಪಡೆಯಲಿದ್ದೇನೆ ಎಂದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಶಾಂತಿ' ಕಳೆದುಕೊಂಡವಳ ಹೊಸ ಜೀವನ...
ಸೈನಾ, ಅನೂಪ್‌‌ಗೆ ಗೆಲುವು; ಚೇತನ್, ಭಟ್‌ಗೆ ನಿರಾಸೆ
ಮೂರನೇ ಮದುವೆ ಮಾಡಿಕೊಂಡ ಟೈಸನ್
ಏಗನ್ ಕ್ಲಾಸಿಕ್ ಎರಡನೇ ಸುತ್ತಿಗೆ ಸಾನಿಯಾ
ಅರ್ಹತಾ ಸುತ್ತಿನಲ್ಲಿ ಅನೂಪ್‌ಗೆ ಜಯ
ಟೆನಿಸ್: ಮೋನಿಷ್, ಸರ್ದಾ ಕ್ವಾರ್ಟರ್‌ಗೆ