ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಶೂಟಿಂಗ್ ವಿಶ್ವಕಪ್‌: ರಂಜನ್ ಸೋಧಿಗೆ ರಜತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೂಟಿಂಗ್ ವಿಶ್ವಕಪ್‌: ರಂಜನ್ ಸೋಧಿಗೆ ರಜತ
ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್ ಫೆಡರೇಷನ್ ವಿಶ್ವಕಪ್‌ನ ಡಬಲ್ ಡ್ರಾಪ್ ಪುರುಷರ ವಿಭಾಗದಲ್ಲಿ ಭಾರತದ ರಂಜನ್ ಸೋಧಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಬುಧವಾರ ಬೆಲೂರಾಸ್‌ನ ಮಿನ್ಸ್‌ಕ್‌ನಲ್ಲಿ ನಡೆದ ಈ ಟೂರ್ನಮೆಂಟ್‌ನಲ್ಲಿ ಸೋಧಿಯವರು 49 ಅಂಕಗಳನ್ನು ಪಡೆಯುವ ಮೂಲಕ ಒಟ್ಟಾರೆ 194 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದುಕೊಂಡರು. ಮೊದಲ ಮೂರು ಸುತ್ತುಗಳಲ್ಲಿ ಅವರು 47, 48 ಮತ್ತು 50 ಅಂಕಗಳೊಂದಿಗೆ 145 ಅಂಕ ಪಡೆದಿದ್ದರು.

ಈ ವಿಭಾಗದಲ್ಲಿ ಮೊದಲ ಸ್ಥಾನ ಚೀನಾದ ಬಿನಿಯುವನ್ ಹೂ ಪಾಲಾಗಿದೆ. ಅವರು ಮೊದಲ ಮೂರು ಸುತ್ತುಗಳಲ್ಲಿ 49, 49, 49ರೊಂದಿಗೆ 147 ಅಂಕಗಳನ್ನು ಪಡೆದಿದ್ದರು. ಫೈನಲ್‌ನಲ್ಲಿ 49 ಅಂಕ ಪಡೆಯುವ ಮೂಲಕ ಒಟ್ಟಾರೆ 196 ಅಂಕ ಗಳಿಸಿ ಸ್ವರ್ಣ ಪದಕ ಗಿಟ್ಟಿಸಿಕೊಂಡರು.

ರಷ್ಯಾದ ವಿಟಾಲಿ ಫೋಕೀವ್‌ ಫೈನಲ್‌ನಲ್ಲಿ 48 ಅಂಕ ಪಡೆದು ಒಟ್ಟಾರೆ 190 ಅಂಕ ಗಳಿಸುವ ಮೂಲಕ ಕಂಚಿನ ಪದಕ ಪ್ರಶಸ್ತಿಗೆ ಭಾಜನರಾದರು. ಅವರು ಮೊದಲ ಮೂರು ಸುತ್ತುಗಳಲ್ಲಿ 48, 48, 46ರೊಂದಿಗೆ ಒಟ್ಟಾರೆ 142 ಅಂಕ ಗಳಿಸಿದ್ದರು.

ಭಾರತದ ಮತ್ತಿಬ್ಬರು ಶೂಟರ್‌ಗಳಾದ ವಿಕ್ರಮ್ ಛೋಪ್ರಾ 43, 47, 42ರೊಂದಿಗೆ 132 ಅಂಕಗಳನ್ನು ಪಡೆದು 17ನೇ ಸ್ಥಾನ, ಅಸಬ್ ಮೊಹಮ್ಮದ್ 44, 35, 40ರೊಂದಿಗೆ 119 ಅಂಕ ಪಡೆದು 28ನೇ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಇವರಿಬ್ಬರಿಗೂ ಫೈನಲ್ ಪ್ರವೇಶ ಸಾಧ್ಯವಾಗಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದು ತಮಿಳುನಾಡು-ಗೋವಾ ಸೆಮಿ
ಸಂತೋಷ್ ಟ್ರೋಫಿ: ಫೈನಲ್‌ಗೆ ಬಂಗಾಳ
ಬಿಲ್ಗಾರಿಕಾ ಟೂರ್ನಿ
ಏಗನ್ ಕ್ಲಾಸಿಕ್ ಪ್ರಿ-ಕ್ವಾರ್ಟರ್‌ಗೆ ಸಾನಿಯಾ
ಹಾಲೆಂಡ್ ವಿರುದ್ಧ ಗೆಲುವಿನ ಭರವಸೆಯಲ್ಲಿ ಭಾರತ
ದಿನೇಶ್, ಜಿತೇಂದರ್, ಭಗವಾನ್ ಸೆಮಿಗೆ ಲಗ್ಗೆ