ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > 'ಗ್ರೇಟ್ ಕಲಿ' ಭಾರತದ ಬಹುದೊಡ್ಡ ಆಸ್ತಿ: ಕೇನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಗ್ರೇಟ್ ಕಲಿ' ಭಾರತದ ಬಹುದೊಡ್ಡ ಆಸ್ತಿ: ಕೇನ್
ಕೇನ್
PTI
'ಗ್ರೇಟ್ ಕಲಿ'ಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವ ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಸೂಪರ್‌ಸ್ಟಾರ್ 'ಕೇನ್', ಅವರು ಭಾರತದ ಅತಿದೊಡ್ಡ ಆಸ್ತಿ; ಅವರಿಂದಾಗಿ ದೇಶದ ಜನ ವೃತ್ತಿಪರ ಕುಸ್ತಿಯತ್ತ ಆಕರ್ಷಿತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2007ರ ರೆಸ್ಲ್‌ಮೇನಿಯಾಕ್ಕಾಗಿ ನಡೆಯುತ್ತಿದ್ದ 'ಮನಿ ಇನ್ ದ ಬ್ಯಾಂಕ್' ಅರ್ಹತಾ ಪಂದ್ಯದಿಂದ ಕೇನ್‌ರನ್ನು ಹೊರದಬ್ಬುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಲಿಯ ಬಗ್ಗೆ ಕಣದಿಂದ ಹೊರಗೆ ಭರಪೂರ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ ಡಬ್ಲ್ಯೂಡಬ್ಲ್ಯೂಇಯ ಖ್ಯಾತ ಕುಸ್ತಿಪಟು.

"ಕಲಿ ನಿಸ್ಸಂಶಯವಾಗಿಯೂ ಡಬ್ಲ್ಯೂಡಬ್ಲ್ಯೂಇನ ಬಹುದೊಡ್ಡ ಆಸ್ತಿ. ಭಾರತದಲ್ಲಿ ಅವರ ಜನಪ್ರಿಯತೆಯು ತುತ್ತತುದಿಯಲ್ಲಿದೆ. ಅಲ್ಲದೆ ಮಕ್ಕಳಿಗೆ ಅವರು ಮಾದರಿಯಾಗಿ ಹೋಗಿದ್ದಾರೆ. ನನ್ನ ಪ್ರಕಾರ ಭಾರತೀಯರು ಅವರ ಬಗ್ಗೆ ಹೆಮ್ಮೆಪಡಬೇಕಾಗಿದೆ" ಎಂದು 'ಅಂಡರ್‌ಟೇಕರ್'ರವರ ಸಹೋದರನಾಗಿರುವ ಏಳು ಅಡಿ ಎತ್ತರದ ಕೇನ್ ತಿಳಿಸಿದ್ದಾರೆ.

ಕೇನ್‌ ಎನ್ನುವುದು ಅವರ ರಿಂಗ್ ಹೆಸರು. ಅವರ ನಿಜ ನಾಮಧೇಯ ಗ್ಲೆನ್ ಥೋಮಸ್ ಜೇಕಬ್ಸ್. ಇದೀಗ ದೆಹಲಿಯಲ್ಲಿರುವ ಕೇನ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಬಾರಿ ಅವರು ಭೇಟಿ ನೀಡಿರುವುದು 'ಟೆನ್ ಸ್ಪೋರ್ಟ್ಸ್' ಪ್ರಾಯೋಜಿತ ಕಾರ್ಯಕ್ರಮಕ್ಕಾಗಿ.
ಕೇನ್
PTI

ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ಸೂಪರ್‌ಸ್ಟಾರ್‌ಗಳ ನಡುವೆ ದ್ವೇಷದ ಆಟವೂ ನಡೆಯುವುದರಿಂದ ಇದನ್ನು ಕ್ರೀಡೆಯೆಂದು ಪರಿಗಣಿಸುವುದು ಸರಿಯಲ್ಲ ಎನ್ನುವುದು ಕೇನ್ ಅಭಿಪ್ರಾಯ.

"ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್ ಕೆಲಸವೇ ಜನರಿಗೆ ಮನರಂಜನೆ ಒದಗಿಸುವುದು. ಇದು ಕೇವಲ ಕ್ರೀಡೆಯಲ್ಲ; ಇದು ಮನೋರಂಜನಾ ಕ್ರೀಡೆ" ಎಂದು ಅವರು ತಿಳಿಸಿದ್ದಾರೆ.

ಸಹೋದರ 'ದಿ ಅಂಡರ್‌ಟೇಕರ್' ತನ್ನ ರೆಸ್ಲಿಂಗ್ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದಿರುವ ಕೇನ್, "ಅವರು ನನ್ನ ಕ್ರೀಡಾಜೀವನದ ಮೇಲೆ ಮಹತ್ತರ ಪ್ರಭಾವವನ್ನು ಬೀರಿದ್ದಾರೆ. ಇಂದು ನಾನೇನಾಗಿದ್ದೇನೋ ಅದಕ್ಕೆ ಬಹುತೇಕ ಕಾರಣ ಅಂಡರ್‌ಟೇಕರ್" ಎಂದರು.

ಒಂಬತ್ತು ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಕೇನ್ ಇದುವರೆಗೆ ಎರಡು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಖಾದ್ಯಗಳು ತನಗೆ ಇಷ್ಟ ಎಂದಿರುವ ಅವರಿಗೆ ಬಾಲಿವುಡ್‌ನತ್ತ ಎಚ್ಚರಿಕೆಯಿಂದಿದ್ದಾರಂತೆ.

"ಹಾಲಿವುಡ್‌ಗಿಂತ ಬಾಲಿವುಡ್ ಸ್ವಲ್ಪಮಟ್ಟಿಗೆ ಭಿನ್ನವಾಗಿದೆ. ಇಲ್ಲಿ ಹಾಡುಗಳು ಮತ್ತು ನೃತ್ಯಗಳು ಕೂಡ ಇರುತ್ತವೆ. ಅದು ನನಗೆ ಸಾಧ್ಯವಾಗುತ್ತದೆ ಎಂಬ ಭರವಸೆಯಿಲ್ಲ. ಆದರೂ ಮಾಡಬಲ್ಲೆ.." ಎಂದು ಕೇನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಡಿ ಬದಲಿಸಿಕೊಂಡ ವ್ಯಕ್ತಿಯ ಮ್ಯಾರಥಾನ್ ಓಟ
'ಹಾಕಿ ಇಂಡಿಯಾ' ವಿರೋಧಿ ಗುಂಪಿನಲ್ಲಿ ಬಿರುಕು
ಶೂಟಿಂಗ್ ವಿಶ್ವಕಪ್‌: ರಂಜನ್ ಸೋಧಿಗೆ ರಜತ
ಇಂದು ತಮಿಳುನಾಡು-ಗೋವಾ ಸೆಮಿ
ಸಂತೋಷ್ ಟ್ರೋಫಿ: ಫೈನಲ್‌ಗೆ ಬಂಗಾಳ
ಬಿಲ್ಗಾರಿಕಾ ಟೂರ್ನಿ