ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸಾನಿಯಾ 'ಏಗನ್ ಕ್ಲಾಸಿಕ್' ಕ್ವಾರ್ಟರ್ ಫೈನಲ್‌ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾನಿಯಾ 'ಏಗನ್ ಕ್ಲಾಸಿಕ್' ಕ್ವಾರ್ಟರ್ ಫೈನಲ್‌ಗೆ
ಮತ್ತೆ ಗ್ರಾಸ್ ಕೋರ್ಟ್‌ನಲ್ಲಿ ಮಿಂಚುತ್ತಿರುವ ಭಾರತದ ಅಗ್ರ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 'ಏಗನ್ ಕ್ಲಾಸಿಕ್‌' ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಅವರು ರಷ್ಯಾದ ಐದನೇ ಶ್ರೇಯಾಂಕಿತೆ ಅನಾಸ್ತಾಸಿಯಾ ಪಾವ್ಲಿಚೆಂಕೋವಾರನ್ನು 7-6(3), 3-6, 6-2ರಿಂದ ಪರಾಜಯಗೊಳಿಸಿ ಮುಂದಿನ ಸುತ್ತು ತಲುಪಿದರು.

ಆರಂಭಿಕ ಸೆಟ್‌ನಲ್ಲಿ ತೀವ್ರ ಸ್ಪರ್ಧೆ ಕಂಡು ಬಂದ ಹಿನ್ನಲೆಯಲ್ಲಿ ಆಟ ಟೈ ಬ್ರೇಕರ್ ತಲುಪಿತ್ತು. ಮಿರ್ಜಾ ಅಲ್ಲೂ ಪಾರಮ್ಯ ಸಾಧಿಸಿ ಏಳರಿಂದ ಮೂರು ಅಂಕಗಳನ್ನು ಪಡೆದುಕೊಂಡು ಸೆಟ್ ಗೆದ್ದರು.

ವಿಶ್ವದ ನಂ.27 ಆಟಗಾರ್ತಿ ಪಾವ್ಲಿಚೆಂಕೋ ಎರಡನೇ ಸೆಟ್‌ನಲ್ಲಿ ತಿರುಗಿ ಬಿದ್ದು ಸಾನಿಯಾರ ಸರ್ವ್‌ಗಳನ್ನು ಎರಡು ಬಾರಿ ಬ್ರೇಕ್ ಮಾಡಿದರು. ಆ ಮೂಲಕ ಎರಡನೇ ಸೆಟ್ ಸಾನಿಯಾರಿಂದ ದೂರವೇ ಉಳಿಯಿತು.

ಮೂರನೇ ಸೆಟ್‌ನಲ್ಲಿ ಸುಧಾರಿಸಿಕೊಂಡ ಸಾನಿಯಾ ಎದುರಾಳಿಯ ಸರ್ವ್‌ಗಳನ್ನು ಎರಡು ಬಾರಿ ಬ್ರೇಕ್ ಮಾಡುವ ಮೂಲಕ ಗೆಲುವು ಸಾಧಿಸಿದರು. 25ರಲ್ಲಿ 17 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಪಾರಮ್ಯತೆ ಮೆರೆದ ಸಾನಿಯಾ ಜಯಕ್ಕಾಗಿ ಸುಮಾರು ಎರಡು ಗಂಟೆಗಳ ಕಾಲ ಹೋರಾಡಿದ್ದರು.

ಹೈದರಾಬಾದ್ ಆಟಗಾರ್ತಿ ಸೆಮಿಫೈನಲ್ ಪ್ರವೇಶಿಸಬೇಕಾದರೆ ಹಂಗೇರಿಯ 16ನೇ ಶ್ರೇಯಾಂಕಿತೆ ಹಾಗೂ ವಿಶ್ವದ ನಂ. 62 ಮೆಲಿಂದಾ ಜಿಂಕ್‌ರನ್ನು ಮುಂದಿನ ಹಂತದಲ್ಲಿ ಸೋಲಿಸಬೇಕು. ಜಿಂಕ್ ಕೆನಡಾದ ಮೂರನೇ ಶ್ರೇಯಾಂಕಿತೆ ಅಲೆಕ್ಸಾಂಡ್ರಾ ವೊಜ್ನಾಯಿಕ್ ವಿರುದ್ಧ 6-7, 7-5, 7-5ರ ಜಯ ದಾಖಲಿಸಿ ಕ್ವಾರ್ಟರ್ ತಲುಪಿದ್ದಾರೆ.

ಸಾನಿಯಾ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲೂರಾಸ್‌ನ ತತಿಯಾನಾ ಪೌತ್ಚೆಕ್‌ರನ್ನು 6-1, 6-2ರಿಂದ ಹಾಗೂ ಎರಡನೇ ಸುತ್ತಿನಲ್ಲಿ 11ನೇ ಶ್ರೇಯಾಂಕಿತೆ ಬ್ರಿಟನ್‌ನ ಅನ್ನೇ ಕಿಯೋತಾವಾಂಗ್‌ರನ್ನು 6-1, 7-6(5)ರಿಂದ ಮಣಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೆನಿಸ್: ರೀತು, ರೋಹನ್ ಚಾಂಪಿಯನ್
ಸಂತೋಷ್ ಟ್ರೋಫಿ: ಗೋವಾ ಫೈನಲ್‌ಗೆ ಲಗ್ಗೆ
ಸಿಂಗಾಪುರ ಓಪನ್ ಕ್ವಾರ್ಟರ್‌ಗೆ ಸೈನಾ, ಅನೂಪ್‌‌
ರಾಷ್ಟ್ರೀಯ ಚಾಂಪಿಯನ್‌ಶಿಪ್
ಸೆಮಿಫೈನಲ್‌ಗೆ ವಿಜೇಂದರ್, ಸುರಂಜಯ್
ಹಾಕಿ ವಿಶ್ವಕಪ್ ನಿರ್ಗಮನ ಭೀತಿಯಲ್ಲಿ ಭಾರತ