ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಇಂಗ್ಲೆಂಡ್‌ ಟೆನಿಸ್ ಪಂದ್ಯಕ್ಕೆ ಬಾಂಬ್ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಗ್ಲೆಂಡ್‌ ಟೆನಿಸ್ ಪಂದ್ಯಕ್ಕೆ ಬಾಂಬ್ ಬೆದರಿಕೆ
ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಪೂರ್ವತಯಾರಿ ಟೂರ್ನಮೆಂಟ್‌ವೊಂದಕ್ಕೆ ಬಾಂಬ್ ಬೆದರಿಕೆ ಬಂದ ಕಾರಣ ಆಂಡಿ ರಾಡಿಕ್ ಮತ್ತು ಲೀಟಾನ್ ಹೆವಿಟ್ ನಡುವಿನ ಮೂರನೇ ಸುತ್ತಿನ ಪಂದ್ಯ 15 ನಿಮಿಷಗಳ ವಿಳಂಬವಾಗಿ ಆರಂಭಗೊಂಡಿತು.

"ಗೋಡೆಯೊಂದರಲ್ಲಿ ಬೆದರಿಕೆ ಪತ್ರವೊಂದು ಕಂಡು ಬಂದಿದ್ದು, ಸೆಂಟರ್ ಕೋರ್ಟ್‌ನಲ್ಲಿ ಮೂರನೇ ಪಂದ್ಯ ಆರಂಭಕ್ಕೂ ಮೊದಲು ವೀಕ್ಷಕರೊಬ್ಬರು ನಮ್ಮ ಗಮನಕ್ಕೆ ತಂದಿದ್ದರು" ಎಂದು ಕ್ವೀನ್ಸ್ ಕ್ಲಬ್ ಕಾರ್ಯನಿರ್ವಾಹಕ ಮುಖ್ಯಸ್ಥ ಆಂಡ್ರ್ಯೂ ಸ್ಟೀವಾರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಂತರ ಈ ಬೆದರಿಕೆಯು ಕೀಟಲೆಯೆಂದು ತಿಳಿದು ಬಂದ ನಂತರ ಪಂದ್ಯವನ್ನು ಹೆವಿಟ್ 6-7(2), 6-7(4)ರಿಂದ ಅಮೆರಿಕನ್ ಎದುರು ಕಳೆದುಕೊಂಡಿದ್ದರು. ಪರಿಸ್ಥಿತಿಯ ಹಿನ್ನಲೆಯಲ್ಲಿ ಹೀಗಾಯಿತು ಎಂದು ಫಲಿತಾಂಶವನ್ನು ವಿಶ್ಲೇಷಿಸಲಾಗಿದೆ.

"ನಮಗೆ ಯಾವ ಮಾಹಿತಿಯನ್ನೂ ನೀಡಲಾಗಿರಲಿಲ್ಲ. ಅಲ್ಲೇನೋ ನಡೆಯುತ್ತಿದ್ದ ಹೊರತಾಗಿಯೂ ನಮ್ಮನ್ನು ಸ್ವಲ್ಪ ಹೊತ್ತು ಕಾಯುವಂತೆ ಮಾತ್ರ ಹೇಳಲಾಯಿತು. ಕೋರ್ಟ್ ಹೊರಗಡೆ ಅಲ್ಪ ಪ್ರಮಾಣದ ಗೊಂದಲ ನಿರ್ಮಾಣವಾಗಿತ್ತು. ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ" ಎಂದು ಆಸ್ಟ್ರೇಲಿಯನ್ ಹೆವಿಟ್ ಪ್ರತಿಕ್ರಿಯೆ ನೀಡಿದ್ದಾರೆ.

"ಈ ವರ್ಷದ ಮೆಂಫಿಸ್ ಓಪನ್ ಸಂದರ್ಭದಲ್ಲಿ ಜೇಮ್ಸ್ ಬ್ಲಾಕೆ ಮತ್ತು ನಾನು ಇಂತಹುದೇ ಪರಿಸ್ಥಿತಿಯನ್ನು ಎದುರಿಸಿದ್ದೆವು. ಜನಸಮೂಹದ ಮಧ್ಯೆ ಯಾರೋ ಒಬ್ಬರು ಹೃದಯಾಘಾತಕ್ಕೊಳಗಾಗಿದ್ದರು. ಅದು ಸಾಮಾನ್ಯ ಸಂಗತಿಯಾಗಿತ್ತು. ಆರು ತಿಂಗಳೊಳಗೆ ಇಂತಹ ಅನುಭವಗಳು ಎರಡು ಬಾರಿ ಆಗಿರುವುದು ದುರದೃಷ್ಟ" ಎಂದು ಅವರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾನಿಯಾ 'ಏಗನ್ ಕ್ಲಾಸಿಕ್' ಕ್ವಾರ್ಟರ್ ಫೈನಲ್‌ಗೆ
ಟೆನಿಸ್: ರೀತು, ರೋಹನ್ ಚಾಂಪಿಯನ್
ಸಂತೋಷ್ ಟ್ರೋಫಿ: ಗೋವಾ ಫೈನಲ್‌ಗೆ ಲಗ್ಗೆ
ಸಿಂಗಾಪುರ ಓಪನ್ ಕ್ವಾರ್ಟರ್‌ಗೆ ಸೈನಾ, ಅನೂಪ್‌‌
ರಾಷ್ಟ್ರೀಯ ಚಾಂಪಿಯನ್‌ಶಿಪ್
ಸೆಮಿಫೈನಲ್‌ಗೆ ವಿಜೇಂದರ್, ಸುರಂಜಯ್