ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ನಟಿ ಪ್ಯಾರಿಸ್ ಹಿಲ್ಟನ್ ಹಾಲಿವುಡ್ ಕ್ಲಬ್‌ವೊಂದರಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದರು ಎಂದು ವಿದೇಶಿ ಮಾಧ್ಯಮಗಳು ಚಿತ್ರಸಹಿತ ವರದಿ ಮಾಡಿವೆ.ರಿಯಲ್ ಮ್ಯಾಡ್ರಿಡ್‌ನಿಂದ ಐತಿಹಾಸಿಕ 80 ಮಿಲಿಯನ್ ಪೌಂಡ್‌ಗಳ ಭಾರೀ ಮೊತ್ತದ ಒಪ್ಪಂದವನ್ನು ಪಡೆದ ಖುಷಿಯಲ್ಲಿದ್ದ ರೊನಾಲ್ಡೋ ತನ್ನ ಹಾಟ್ ರಾತ್ರಿಯನ್ನು ಕಾಮಕನ್ಯೆಯೆಂದೇ ಬಿಂಬಿತವಾಗಿರುವ ಹಿಲ್ಟನ್ ಜತೆ ಕಳೆದಿದ್ದಾರೆ ಎಂದು 'ದಿ ಸನ್' ಚಿತ್ರ ಸಮೇತ ಪ್ರಕಟಿಸಿದ್ದು ಹಲವರು ಹುಬ್ಬೇರಿಸಿದ್ದಾರೆ.ರೊನಾಲ್ಡೋ ಮತ್ತು ಹಿಲ್ಟನ್ ಹಾಲಿವುಡ್‌ನ ವೈಭವೋಪೇತ ನೈಟ್ ಕ್ಲಬ್ 'ಮೈ ಹೌಸ್'ನಲ್ಲಿ ಮುಖಾಮುಖಿಯಾಗಿದ್ದರು. ಆಗಲೇ ಪರಸ್ಪರ ಮುತ್ತಿಕ್ಕಲಾರಂಭಿಸಿದ ಇಬ್ಬರ ತೋಳುಗಳೂ ಗಂಟೆಗಳ ಕಾಲ ಒತ್ತೊತ್ತಾಗಿದ್ದವು. ನಂತರ ಅವರು ಹಿಲ್ಟನ್ ಸಹೋದರಿಯ ಮನೆಗೆ ತೆರಳಿದರು ಎಂದು ಪತ್ರಿಕೆಗಳು ವರದಿ ಮಾಡಿವೆ. " ತಾವು ಪ್ರಯಾಣಿಸುತ್ತಿರುವ ವಿಮಾನ ಧರೆಗಪ್ಪಳಿಸುತ್ತಿದೆ ಎಂಬಂತೆ ಇಬ್ಬರೂ ಪರಸ್ಪರ ತಮ್ಮ ಮುತ್ತಿನ ಮಳೆಗರೆಯುತ್ತಿದ್ದರು" ಎಂದು ಕ್ಲಬ್‌ನಲ್ಲಿ ಈ ದೃಶ್ಯಗಳನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿರುವುದಾಗಿ 'ದಿ ಸನ್' ತಿಳಿಸಿದೆ.ಮತ್ತೊಬ್ಬ ಪ್ರತ್ಯಕ್ಷದರ್ಶಿ ವಿವರಿಸುವುದು ಹೀಗೆ, "ಇಡೀ ರಾತ್ರಿ ರೊನಾಲ್ಡೋ ಮತ್ತು ಹಿಲ್ಟನ್ ಇಬ್ಬರೂ ಸುಖಿಸುತ್ತಿದ್ದರು. ಆತನ ಟೇಬಲ್ಲಿಗೆ ಭಾರೀ ಪಾನೀಯಗಳನ್ನು ಸರಬರಾಜು ಮಾಡಲು ಆ ಕಟ್ಟಡದ ಪ್ರತಿಯೊಬ್ಬ ವೈಟರ್ ಮಹಿಳೆಯ ಅಗತ್ಯವಿತ್ತು. ಶಾಂಪೇನ್ ಮತ್ತು ಮದ್ಯಕ್ಕಾಗಿ ಆತ ಬರೋಬ್ಬರಿ 20 ಸಾವಿರ ಡಾಲರುಗಳನ್ನು ವೆಚ್ಚ ಮಾಡಿದ್ದಾರೆ" ಎಂದಿದ್ದಾನೆ.ಸುಮಾರು ಎರಡು ಗಂಟೆಗಳ ಕಾಲ ರೊನಾಲ್ಡೋ ಜತೆಗಿನ ಶಾಂಪೇನ್ ಮತ್ತು ಬೆಚ್ಚಗಿನ ತೊಳಲಾಟಗಳ ನಂತರ ಹಿಲ್ಟನ್ ತನ್ನ ಸಹೋದರಿ ನಿಕ್ಕಿಯ ಮನೆಗೆ ತೆರಳಿದರು.ಗಂಟೆಗಳ ಬಳಿಗೆ 24ರ ಹರೆಯದ ರೊನಾಲ್ಡೋ ಹಿಲ್ಟನ್ ಸಹೋದರಿ ಮನೆಗೆ ತೆರಳಿ ಸುದೀರ್ಘ ಸಮಯದ ಬಳಿಕ ಮುಖ ಮುಚ್ಚಿಕೊಂಡು ಮರಳಿದರು. ಭೇಟಿಯನ್ನು ಅವರು ಗುಪ್ತವಾಗಿರಿಸಲು ಬಯಸಿದ್ದರು ಎಂದು ವರದಿಯಾಗಿದೆ.ಅದೇ ಹೊತ್ತಿಗೆ 28ರ ಪ್ಯಾರಿಸ್ ಹಿಲ್ಟನ್ ಇಬ್ಬರ ಸಂಬಂಧವನ್ನು ವಿಶೇಷವಾಗಿ ಬಣ್ಣಿಸಿದ್ದಾಳೆ. ಅವಳ ಪ್ರಕಾರ ಆತ ವಿಶ್ವದ ದುಬಾರಿ ಆಟಗಾರ, ತಾನು ಹಾಟ್ ಐಟಂ ಎಂದಿದ್ದಾಳೆ.ಪ್ರಿಯತಮ ಅಮೆರಿಕನ್ ಬೇಸ್‌ಬಾಲ್ ಆಟಗಾರ ಡಗ್ ರೈನ್‌ಹಾರ್ಟ್‌ಗೆ ಕೇವಲ 24 ಗಂಟೆಗಳ ಮೊದಲು ಸೋಡಾ ಚೀಟಿ ಕೊಟ್ಟಿದ್ದ ಹಿಲ್ಟನ್ ಅಷ್ಟು ಬೇಗ ರೊನಾಲ್ಡೋ ತೆಕ್ಕೆಗೆ ಬಿದ್ದಿರುವ ಬಗ್ಗೆ ಆಂಗ್ಲ ಪತ್ರಿಕೆಗಳು ಆಶ್ಚರ್ಯ ವ್ಯಕ್ತಪಡಿಸಿವೆ. |