ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಐಟಿಎಫ್ ಟೂರ್ನಿ: ಯ‌ೂಕಿ, ಆಶುತೋಷ್ ಕ್ವಾರ್ಟರ್‌ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿಎಫ್ ಟೂರ್ನಿ: ಯ‌ೂಕಿ, ಆಶುತೋಷ್ ಕ್ವಾರ್ಟರ್‌ಗೆ
ಇಲ್ಲಿ ನಡೆಯುತ್ತಿರುವ ಐಟಿಎಫ್‌ ಫ್ಯೂಚರ‌್ಸ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ಭಾರತದ ಭರವಸೆಯ ಯುವ ಆಟಗಾರ ಯುಕಿ ಭಾಂಬ್ರಿ ಮತ್ತು ಆಶುತೋಷ್‌ ಸಿಂಗ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಯೂಕಿ ತನ್ನ ಎದುರಾಳಿ ಕ್ವಾಲಿಫೈಯರ್ ಅಶ್ಚಿನ್ ವಿಜಯರಾಘವನ್ ಅವರನ್ನು 6-1, 6-2ರಲ್ಲಿ ನೇರ ಸೆಟ್‌ಗಳಿಂದ ಸೋಲಿಸಿದರು.

ನಿನ್ನೆ ನಡೆದ ಮತ್ತೊಂದು ಫ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಆಶುತೋಷ್‌ ಸಿಂಗ್‌ ತನ್ನ ಎದುರಾಳಿ ಉತ್ತರ ಕೊರಿಯಾದ ಮೂರನೇ ಶ್ರೇಯಾಂಕಿತ ಆಟಗಾರ ಹ್ಯುಯಾನ್‌ ವೂ ನಾಮ್‌ ಅವರನ್ನು ಕಠಿಣ ಸವಾಲಿನಲ್ಲಿ 3-6, 6-3, 6-2 ಅಂತರದಿಂದ ಮಣಿಸಿದರು.

ಉಳಿದಂತೆ ರಾಷ್ಟ್ರೀಯ ಚಾಂಪಿಯನ್ ರಂಜಿತ್ ವಿರಾಲಿ ಮುರುಗೇಶನ್ ಅವರು 6-3, 6-2 ಅಂತರದಿಂದ ಪಿ. ಸಿ. ವಿಗ್ನೇಶ್ ವಿರುದ್ಧವೂ ಹಾಗೂ ದಿವಿಜ ಶರಣ್‌ ಅವರು 7-6 (1), 6-2ರಿಂದ ಪೌರವ್‌ ರಾಜಾ ಸಿಂಗ್ ವಿರುದ್ಧ ಜಯಗಳಿಸಿದ್ದಾರೆ. ಆಶುತೋಷ್‌ ಸಿಂಗ್ ಕ್ವಾರ್ಟ‌ರ್‌ನಲ್ಲಿ ರಂಜಿತ್ ವಿರಾಲಿ ಮುರುಗೇಶನ್ ಅವರನ್ನು ಎದುರಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೆಡರರ್-ಹಾಸ್, ರಾಡಿಕ್-ಮುರ್ರೆ; ಫೈನಲ್‌ಗೆ ಯಾರ‌‌್ಯಾರು?
ಹಾಕಿ: ಸೇಂಟ್ ಜೋಸೆಫ್ಸ್‌ಗೆ ಜಯ
ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ
ವಿಂಬಲ್ಡನ್: ಭೂಪತಿ-ನೋವ್ಲ್ಸ್ ಜೋಡಿ ಸವಾಲು ಅಂತ್ಯ
ವಿಲಿಯಮ್ಸ್ ಸಹೋದರಿಯರು ಸೆಮಿಗೆ
ಕಾರ್ಲೊವಿಕ್ ಮಣಿಸಿದ ಫೆಡರರ್ ಸೆಮಿಗೆ ಮೆರವಣಿಗೆ