ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > 'ಡೇವಿಸ್ ಕಪ್' ಪ್ಲೇ ಆಫ್‌ ಗೆಲುವು 50-50: ಸೋಮದೇವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಡೇವಿಸ್ ಕಪ್' ಪ್ಲೇ ಆಫ್‌ ಗೆಲುವು 50-50: ಸೋಮದೇವ್
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಡೇವಿಸ್ ಕಪ್ ಟೈಯಲ್ಲಿ ಭಾರತ ಗೆಲ್ಲುವ ಸಾಧ್ಯತೆ 50-50 ಎಂದು ದೇಶದ ನಂ.1 ಸಿಂಗಲ್ಸ್ ಆಟಗಾರ ಸೋಮದೇವ್ ದೇವರ್ಮನ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈಯಲ್ಲಿ ನಡೆಯಬೇಕಾಗಿದ್ದ ಏಷಿಯಾ-ಓಸಿಯಾನಿಯಾ ಗುಂಪು 1ರಿಂದ ಆಸ್ಟ್ರೇಲಿಯಾವು ಹಿಂದಕ್ಕೆ ಸರಿದ ಕಾರಣ ಭಾರತವು ಪ್ಲೇ-ಆಫ್ ಸುತ್ತಿಗೆ ವಾಕ್ ಓವರ್ ಪಡೆದುಕೊಂಡಿತ್ತು. ಈ ಪಂದ್ಯಗಳು ಸೆಪ್ಟೆಂಬರ್ 18ರಿಂದ 20ರವರೆಗೆ ನಡೆಯಲಿವೆ. ಇಲ್ಲಿ ಗೆಲುವು ಸಾಧಿಸುವ ತಂಡ ವಿಶ್ವ ಗುಂಪಿನಲ್ಲಿ ಆಡಲು ಸ್ಥಾನ ಪಡೆಯುತ್ತದೆ.

ಭಾರತದ ಖ್ಯಾತ ಸಿಂಗಲ್ಸ್ ಆಟಗಾರನಾಗಿರುವ ಸೋಮದೇವ್ ಪ್ರಕಾರ ಎರಡೂ ತಂಡಗಳು ಪ್ರಬಲವಾಗಿವೆ. ಆದರೆ ಭಾರತವು ಡಬಲ್ಸ್‌ನಲ್ಲಿ ಅದ್ಭುತ ಜೋಡಿಯನ್ನೇ ಹೊಂದಿದೆ.

"ನನ್ನ ಪ್ರಕಾರ ಗೆಲುವಿನ ಸಾಧ್ಯತೆ ಫಿಫ್ಟಿ-ಫಿಫ್ಟಿ. ನಾವು ಸಾಮಾನ್ಯವಾಗಿ ಕಣದಲ್ಲಿರುವವರಾಗಿರುವ ಕಾರಣ ನಮ್ಮ ಬಗ್ಗೆ ಅವರಿಗೆ ಗೊತ್ತು, ಅವರ ಬಗ್ಗೆ ನಮಗೆ ಗೊತ್ತು. ಅವರು ನಮ್ಮ ಗೆಳೆಯರು ಕೂಡ ಹೌದು. ನಾವು ತಯಾರಿ ನಡೆಸಿದ್ದೇವೆ. ಅದೇ ಹೊತ್ತಿಗೆ ಅವರೂ ತಯಾರಿ ನಡೆಸಿರುತ್ತಾರೆ. ಆದರೆ ನಮ್ಮ ಕಡೆಗೇ ತೂಕ ಅಲ್ಪ ಪ್ರಮಾಣದಲ್ಲಿ ಹೆಚ್ಚಿದೆ. ಯಾಕೆಂದರೆ ನಮ್ಮಲ್ಲಿ ಅದ್ಭುತ ಡಬಲ್ಸ್ ಜೋಡಿಯಿದೆ" ಎಂದು ಸೋಮದೇವ್ ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ನಡೆದ ಚೆನ್ನೈ ಓಪನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಪ್ರವಾಸಗಳಲ್ಲಿ ಸೋಮದೇವ್ ಸತತ ಹಿನ್ನಡೆ ಅನುಭವಿಸುತ್ತಿದ್ದಾರೆ. ಚೆನ್ನೈ ಓಪನ್‌ನಲ್ಲಿ ಅವರು ರನ್ನರ್-ಅಪ್ ಪ್ರಶಸ್ತಿ ಗಳಿಸಿದ್ದರು.

ಇತ್ತೀಚಿನ ಟೂರ್ನಮೆಂಟ್‌ಗಳಲ್ಲಿ ಮೊದಲ ಅಥವಾ ಎರಡನೇ ಸುತ್ತು ಮೀರಿ ನಿಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಅಲ್ಲದೆ ಮೂರು ಗ್ರಾಂಡ್ ಸ್ಲಾಮ್‌ ಸಿಂಗಲ್ಸ್ ಪ್ರಮುಖ ಸುತ್ತಿಗಾಗಿ ನಡೆಸಿದ ಪ್ರಯತ್ನಗಳೂ ನೀರಲ್ಲಿಟ್ಟ ಹೋಮದಂತಾಗಿದ್ದವು.

ಈ ಬಗ್ಗೆ ಮಾತನಾಡುವಾಗ ಅದನ್ನು ದುರದೃಷ್ಟವೆಂದಷ್ಟೇ ಹೇಳುವ ಸೋಮದೇವ್, ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ನೀಡುತ್ತಾರೆ.

"ಟೆನಿಸ್ ಆಟದಲ್ಲಿ ಆಟಗಾರರು ಮೇಲೆ ಅಥವಾ ಕೆಳಗೆ ಓಲಾಡುವುದು ಆಗಾಗ ಸಾಮಾನ್ಯ. ಇದರರ್ಥ ನನ್ನ ಆಟದಲ್ಲಿ ಏನೋ ತಪ್ಪುಗಳಿವೆ ಎಂದಲ್ಲ. ನಾನೀಗ ಸ್ವಲ್ಪ ಮಟ್ಟಿನ ದುರದೃಷ್ಟಶಾಲಿ. ಆದರೂ ಎಲ್ಲಾ ಪಂದ್ಯಗಳನ್ನೂ ಯಾವತ್ತೂ ಜಯಿಸಲಾಗದು" ಎಂದರು.

ಆದರೆ ನನ್ನ ಅವಕಾಶಗಳನ್ನು ಮತ್ತೆ ಗಳಿಸಿಕೊಳ್ಳಲು ಯತ್ನಿಸುತ್ತೇನೆ. ನಿಜವಾಗಿಯೂ ನಾನು ಅತ್ಯುತ್ತಮ ಆಟವನ್ನೇ ಆಡುತ್ತಿದ್ದೇನೆ. ಇದೀಗ ಡೇವಿಸ್ ಕಪ್ ಟೈಗಾಗಿ ನಾನು ಸಂಪೂರ್ಣ ಸಿದ್ಧತೆ ನಡೆಸಿದ್ದೇನೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ನಾನು ಮುಂಚಿತವಾಗಿಯೇ ಪ್ರಯಾಣ ಬೆಳೆಸಲಿದ್ದೇನೆ. ನನ್ನಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಚೈನೀಸ್ ತೈಪೈ ವಿರುದ್ಧದ ಟೈಯಲ್ಲಿ ಮಾಡಿದಂತೆ ಆಡಲು ಯತ್ನಿಸುತ್ತೇನೆ ಎಂದು ಸೋಮದೇವ್ ಭರವಸೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವ ಸ್ಕೂಲ್ ಅಥ್ಲೆಟಿಕ್ಸ್: ಭಾರತಕ್ಕೆ ಮೂರನೇ ಪದಕ
ಫಿಫಾ: ನಂಬರ್ ವನ್ ಸ್ಥಾನ ಮರಳಿ ಪಡೆದ ಬ್ರೆಜಿಲ್
ಐಟಿಎಫ್ ಟೂರ್ನಿ: ಯ‌ೂಕಿ, ಆಶುತೋಷ್ ಕ್ವಾರ್ಟರ್‌ಗೆ
ಫೆಡರರ್-ಹಾಸ್, ರಾಡಿಕ್-ಮುರ್ರೆ; ಫೈನಲ್‌ಗೆ ಯಾರ‌‌್ಯಾರು?
ಹಾಕಿ: ಸೇಂಟ್ ಜೋಸೆಫ್ಸ್‌ಗೆ ಜಯ
ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ