ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ರ‌್ಯಾಂಕಿಂಗ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸ್ಥಾನಕ್ಕೆ ಶರತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರ‌್ಯಾಂಕಿಂಗ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸ್ಥಾನಕ್ಕೆ ಶರತ್
ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡಿರುವ ಒಲಿಂಪಿಯನ್ ಅಚಂತಾ ಶರತ್ ಕಮಾಲ್ 67ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹಾಲಿ ರಾಷ್ಟ್ರೀಯ ಚಾಂಪಿಯನ್ ಕಮಾಲ್ ಕಳೆದ ತಿಂಗಳಿನ ರ‌್ಯಾಂಕಿಂಗ್‌ನಲ್ಲಿ 70ನೇ ಸ್ಥಾನದಲ್ಲಿ 11674.50 ಅಂಕಗಳನ್ನು ಪಡೆದಿದ್ದರು. ಈ ಬಾರಿ ತನ್ನ ಕ್ರೀಡಾಜೀವನದ ಶ್ರೇಷ್ಠ ಸ್ಥಾನವನ್ನು ಅವರು ಏರಿದ್ದಾರೆ.

ಮೇ ತಿಂಗಳಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಶರತ್ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ನಂತರ ಪುಣೆಯಲ್ಲಿ ತಿಂಗಳುಗಳಷ್ಟು ಸುದೀರ್ಘ ಕಾಲದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಅವರು ಮತ್ತು ಸಹ ಆಟಗಾರರು ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರಲಿಲ್ಲ.

ಬುಧವಾರ ಬಿಡುಗಡೆಯಾಗಿರುವ ಈ ಪಟ್ಟಿಯಲ್ಲಿ ಗ್ಲಾಸ್ಗೋದಲ್ಲಿ ಕಂಚಿನ ಪದಕ ಗೆದ್ದಿದ್ದ ಶುಭಾಜಿತ್ ಸಾಹಾ ಆರು ಸ್ಥಾನಗಳ ಕುಸಿತ ಕಂಡು 242ನೇ ಸ್ಥಾನಕ್ಕಿಳಿದಿದ್ದಾರೆ.

ಮಹಿಳೆಯರಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಮೌಮಾ ದಾಸ್ ಒಂಬತ್ತು ಸ್ಥಾನ ಕುಸಿದು 191ನೇ ಸ್ಥಾನ ತಲುಪಿದ್ದಾರೆ. ಆಕೆಯ ಡಬಲ್ಸ್ ಜತೆಗಾತಿ ಪೌಲೊಮಿ ಘಾತಕ್ ಸಿಂಗಲ್ಸ್ ವಿಭಾಗದಲ್ಲಿ 203 ಹಾಗೂ ನೇಹಾ ಅಗರ್ವಾಲ್ 252ನೇ ಸ್ಥಾನದಲ್ಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಡೇವಿಸ್ ಕಪ್' ಪ್ಲೇ ಆಫ್‌ ಗೆಲುವು 50-50: ಸೋಮದೇವ್
ವಿಶ್ವ ಸ್ಕೂಲ್ ಅಥ್ಲೆಟಿಕ್ಸ್: ಭಾರತಕ್ಕೆ ಮೂರನೇ ಪದಕ
ಫಿಫಾ: ನಂಬರ್ ವನ್ ಸ್ಥಾನ ಮರಳಿ ಪಡೆದ ಬ್ರೆಜಿಲ್
ಐಟಿಎಫ್ ಟೂರ್ನಿ: ಯ‌ೂಕಿ, ಆಶುತೋಷ್ ಕ್ವಾರ್ಟರ್‌ಗೆ
ಫೆಡರರ್-ಹಾಸ್, ರಾಡಿಕ್-ಮುರ್ರೆ; ಫೈನಲ್‌ಗೆ ಯಾರ‌‌್ಯಾರು?
ಹಾಕಿ: ಸೇಂಟ್ ಜೋಸೆಫ್ಸ್‌ಗೆ ಜಯ