ಇಲ್ಲಿ ನಡೆಯುತ್ತಿರುವ ಐಟಿಎಫ್ ಫ್ಯೂಚರ‌್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಭಾರತದ ಭರವಸೆಯ ಯುವ ಆಟಗಾರ ಯೂಕಿ ಭಾಂಬ್ರಿ, ಆಶುತೋಷ್ ಸಿಂಗ್, ರೋಹನ್ ಗಜ್ಜಾರ್ ಮತ್ತು ವಿಷ್ಣು ವರ್ಧನ್ ಪ್ರವೇಶಿಸಿದ್ದಾರೆ.ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಯೂಕಿ ಭಾಂಬ್ರಿ ಅವರು ಐದನೇ ಶ್ರೇಯಾಂಕಿತ ಆಟಗಾರ ದಿವಿಜಿ ಶರಣ್ ವಿರದ್ಧ 6-2 6-4 ಅಂತರದ ಸುಲಭ ಜಯ ಸಾಧಿಸಿ ಸೆಮಿಗೆ ಲಗ್ಗೆಯಿಟ್ಟರು. ಯೂಕಿ ಸೆಮಿಫೈನಲ್ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ ವಿಷ್ಣು ಬರ್ಧನ್ ಅವರನ್ನು ಎದುರಿಸಲಿದ್ದಾರೆ. ವಿಷ್ಣು ವರ್ಧನ್ ನಿನ್ನೆ ನಡೆದ ಕಠಿಣ ಸವಾಲಿನಲ್ಲಿ ರೂಪೇಶ್ ರಾವ್ ವಿರುದ್ಧ 6-2 7-6(7) ಅಂತರದಿಂದ ಮಣಿಸಿದರು.ನಿನ್ನೆಯ ಮತ್ತೊಂದು ಅಚ್ಚರಿ ಫಲಿತಾಂಶದಲ್ಲಿ ಭಾರತದ ಆರನೇ ಶ್ರೇಯಾಂಕದ ರೋಹನ್ ಗಜ್ಜಾರ್ ಅವರು ತನ್ನ ಎದುರಾಳಿ ಜಪಾನ್‌ನ ಅಗ್ರ ಶ್ರೇಯಾಂಕಿತ ಆಟಗಾರ ಕಿಂಟೊ ತಾಕೆಚಿ ಅವರನ್ನು ಸದೆಬಡೆಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪ್ರಬಲ ಪೈಪೋಟಿಯಿಂದ ಸಾಗಿದ ಪಂದ್ಯದಲ್ಲಿ ರೋಹನ್ 4-6 7-6(3) 6-3 ಅಂತರದಲ್ಲಿ ಕಿಂಟೊ ಅವರನ್ನು ಮಣಿಸಿದರು.ಎರಡನೇ ಸೆಮಿಫೈನಲ್ ಮುಖಾಮುಖಿಯಲ್ಲಿ ರೋಹನ್ ಅವರು ಶ್ರೇಯಾಂಕರಹಿತ ಆಟಗಾರ ಆಶುತೋಷ್ ಸಿಂಗ್ ಅವರನ್ನು ಎದುರಿಸಲಿದ್ದಾರೆ. ಆಶುತೋಷ್ ನಿನ್ನೆ ನಡೆದ ಮತ್ತೊಂದು ಕ್ವಾರ್ಟರ್‌ನಲ್ಲಿ ಏಳನೇ ಶ್ರೇಯಾಂಕದ ವಿರಾಲಿ ಮುರುಗೇಷನ್ ವಿರುದ್ಧ 4-6 6-4 7-6 (3) ಅಂತರದಿಂದ ಜಯಗಳಿಸಿದ್ದರು. |