ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ವಿಶ್ವಕಪ್ ಕುರಿತ ಫಿಫಾ ಷರತ್ತಿಗೆ ಬದ್ಧ: ದ.ಆಫ್ರಿಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಕಪ್ ಕುರಿತ ಫಿಫಾ ಷರತ್ತಿಗೆ ಬದ್ಧ: ದ.ಆಫ್ರಿಕಾ
PTIPTI
ಫುಟ್ಬಾಲ್ ವಿಶ್ವಕಪ್‌ಗಾಗಿ ನಾವು ಸಕಲ ಪೂರ್ವತಯಾರಿಗಳನ್ನು ನಡೆಸಿದ್ದು, ಈ ಸಂಬಂಧ ಫಿಫಾಗೆ ಸಂಪೂರ್ಣ ಭರವಸೆ ನೀಡಿದ್ದೇವೆ ಎಂದು 2010ರ ವಿಶ್ವಕಪ್ ಆತಿಥೇಯ ರಾಷ್ಟ್ರ ದಕ್ಷಿಣ ಆಫ್ರಿಕಾ ಕ್ರೀಡಾ ಸಚಿವ ಮೆಕೆನ್‌ಕೆಸ್ ಸ್ಟೊಫೈಲ್ ತಿಳಿಸಿದ್ದಾರೆ.

ಮುಂದಿನ ವರ್ಷದ ವಿಶ್ವಕಪ್‌ಗೆ ಅಗತ್ಯವಿರುವ ಪೂರ್ವ ಸಿದ್ಧತೆಗಳಲ್ಲಿ ತಾವು ತೊಡಗಿರುವುದಾಗಿ ಹೇಳಿಕೊಂಡಿರುವ ದಕ್ಷಿಣ ಆಫ್ರಿಕಾ, ಶೀಘ್ರದಲ್ಲೇ ಬಾಕಿ ಉಳಿದ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸಲಾಗುವುದು ಎಂದಿದೆ.

ಕೇಪ್‌ಟೌನ್‌ನ ರಾಷ್ಟ್ರೀಯ ಪಾರ್ಲಿಮೆಂಟ್‌ನಲ್ಲಿ ಮಾತನಾಡುತ್ತಿದ್ದ ಅವರು, ಫಿಫಾ ಬಯಸುವ 17 ನಿಬಂಧನೆಗಳಿಗೆ ನಾವು ಬದ್ಧರಾಗಿದ್ದೇವೆ ಎಂದರು. ಇದರಲ್ಲಿ ಆರ್ಥಿಕ ಪರಿಸ್ಥಿತಿ, ಬೌದ್ಧಿಕ ಸಂಪತ್ತು, ಮಾರುಕಟ್ಟೆ ಹಕ್ಕುಗಳು, ರಕ್ಷಣೆ ಹಾಗೂ ಭದ್ರತೆ, ಆರೋಗ್ಯ, ದೂರಸಂಪರ್ಕಗಳು ಸಹ ಸೇರಿವೆ.

ದಕ್ಷಿಣ ಆಫ್ರಿಕಾವು ಕಳೆದ ವಾರವಷ್ಟೇ ಅಂತ್ಯಗೊಂಡ ಕಾನ್ಫೆಡರೇಶನ್ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಯಶಸ್ವಿಯಾಗಿ ನಡೆಸಿತ್ತು.

19ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಆತಿಥ್ಯವನ್ನು ದಕ್ಷಿಣ ಆಫ್ರಿಕಾ ವಹಿಸುತ್ತಿದ್ದು, ಜೂನ್ 11ರಿಂದ ಆರಂಭವಾಗಿ ಜುಲೈ 11ಕ್ಕೆ ಕೊನೆಗೊಳ್ಳಲಿದೆ. 2006ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ಇಟಲಿ ಗೆದ್ದುಕೊಂಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
9.5 ಸೆಕುಂಡಿನಲ್ಲಿ 100 ಮೀಟರ್: ಬೋಲ್ಟ್ ವಿಶ್ವಾಸ
ಟಾಟಾ ಓಪನ್: ಅರವಿಂದ್ ಪ್ರಧಾನ ಸುತ್ತಿಗೆ
ಐಟಿಎಫ್ ಫ್ಯೂಚರ‌್ಸ್: ಯೂಕಿ, ಆಶುತೋಷ್ ಸೆಮಿಗೆ ಲಗ್ಗೆ
ಮಿಶ್ರ ಡಬಲ್ಸ್ ಸೆಮಿಗೆ ಪೇಸ್-ಬ್ಲಾಕ್ ಜೋಡಿ
ಟೇಬಲ್ ಟೆನಿಸ್: ಅಚಂತಾ ಜೀವನಶ್ರೇಷ್ಠ ರ‌್ಯಾಂಕಿಂಗ್
ಹಾಕಿ: ಬಿರ್ಲಾ ಅಕಾಡೆಮಿಗೆ ರೋಚಕ ಸೋಲು