ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಡಬಲ್ಸ್ ಫೈನಲ್‌ನಲ್ಲಿ ವಿಲಿಯಮ್ಸ್ ಸಹೋದರಿಯರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಬಲ್ಸ್ ಫೈನಲ್‌ನಲ್ಲಿ ವಿಲಿಯಮ್ಸ್ ಸಹೋದರಿಯರು
ಹಾಲಿ ಚಾಂಪಿಯನ್‌ಗಳಾದ ಸೆರೆನಾ ವಿಲಿಯಮ್ಸ್ - ವೀನಸ್ ವಿಲಿಯಮ್ಸ್ ಹಾಗೂ ಆಸ್ಟ್ರೇಲಿಯಾ ಜೋಡಿ ಸಮಂತಾ ಸ್ಟೋಸರ್ - ರೆನ್ನೇ ಸ್ಟಬ್ಸ್ ತಮ್ಮ ಎದುರಾಳಿಗಳನ್ನು ಮಣಿಸಿ ವಿಂಬಲ್ಡನ್ ಮಹಿಳೆಯರ ಡಬಲ್ಸ್ ಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿನ ಮೂರು ಬಾರಿಯ ಚಾಂಪಿಯನ್‌ಗಳಾದ ವಿಲಿಯಮ್ಸ್ ಸಹೋದರಿಯರು ಅಗ್ರ ಶ್ರೇಯಾಂಕಿತ ಜಿಂಬಾಬ್ವೆ-ಅಮೆರಿಕಾ ಜೋಡಿ ಕಾರಾ ಬ್ಲಾಕ್ - ಲೀಜೆಲ್ ಹ್ಯೂಬರ್‌ರೆದುರು 6-1, 6-2ರಿಂದ ಸುಲಭವಾಗಿ ಮೇಲುಗೈ ಸಾಧಿಸಿದರು.
PTI

ಮತ್ತೊಂದು ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತರಾದ ಸ್ಟೋಸರ್-ಸ್ಟಬ್ಸ್ ಜತೆಗಾತಿಯರು ಎರಡನೇ ಶ್ರೇಯಾಂಕಿತ ಸ್ಪೇನ್ ಜೋಡಿ ಅನಾಬೆಲ್ ಮೆಡಿನಾ ಗಾರಿಗಸ್ - ವರ್ಜೀನಿಯಾ ರುವಾನೋ ಪಾಸ್ಕಲ್‌ರನ್ನು 6-7, 6-4, 6-2ರಿಂದ ಮಣಿಸುವ ಮೂಲಕ ಫೈನಲ್ ತಲುಪಿದೆ.

ಭಾನುವಾರದ ಫೈನಲ್‌ನಲ್ಲಿ 2000, 2002 ಹಾಗೂ 2008ರಲ್ಲಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಗೆದ್ದಿರುವ ವಿಲಿಯಮ್ಸ್ ಸಹೋದರಿಯರು ಸಮಂತಾ ಸ್ಟೋಸರ್ - ರೆನ್ನೇ ಸ್ಟಬ್ಸ್‌ರನ್ನು ಮುಖಾಮುಖಿಯಾಗಲಿದ್ದಾರೆ.

ಆಸ್ಟ್ರೇಲಿಯಾ ಓಪನ್‌ನಲ್ಲಿ 2001, 2003, 2009, ಫ್ರೆಂಚ್ ಓಪನ್‌ನಲ್ಲಿ 1999, ಅಮೆರಿಕಾ ಓಪನ್‌ನಲ್ಲಿ 1999ರಲ್ಲಿ ಗೆದ್ದಿರುವ ಈ ಜೋಡಿ ಪ್ರಸಕ್ತ ಡಬಲ್ಸ್ ಕಿರೀಟವನ್ನೂ ಪಡೆದುಕೊಂಡರೆ ಒಂಬತ್ತನೇ ಗ್ರಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಗೆದ್ದಂತಾಗುತ್ತದೆ.

ಇಲ್ಲಿನ ಸಿಂಗಲ್ಸ್‌ನಲ್ಲಿಯೂ ಕಳೆದ ವರ್ಷದಂತೆ ಈ ಬಾರಿಯೂ ವಿಲಿಯಮ್ಸ್ ಸಹೋದರಿಯರೇ ಪರಸ್ಪರ ಮುಖಾಮುಖಿಯಾಗಿರುವುದು ವಿಶೇಷ. 2008ರ ಸಿಂಗಲ್ಸ್ ಪ್ರಶಸ್ತಿ 7-5, 6-4ರ ಅಂತರದಿಂದ ವೀನಸ್ ಗೆದ್ದುಕೊಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೆಡರರ್ 15ನೇ ಗ್ರಾಂಡ್‌ಸ್ಲಾಮ್‌ಗಿನ್ನು ಒಂದೇ ಹೆಜ್ಜೆ..
ವಿಶ್ವಕಪ್ ಕುರಿತ ಫಿಫಾ ಷರತ್ತಿಗೆ ಬದ್ಧ: ದ.ಆಫ್ರಿಕಾ
9.5 ಸೆಕುಂಡಿನಲ್ಲಿ 100 ಮೀಟರ್: ಬೋಲ್ಟ್ ವಿಶ್ವಾಸ
ಟಾಟಾ ಓಪನ್: ಅರವಿಂದ್ ಪ್ರಧಾನ ಸುತ್ತಿಗೆ
ಐಟಿಎಫ್ ಫ್ಯೂಚರ‌್ಸ್: ಯೂಕಿ, ಆಶುತೋಷ್ ಸೆಮಿಗೆ ಲಗ್ಗೆ
ಮಿಶ್ರ ಡಬಲ್ಸ್ ಸೆಮಿಗೆ ಪೇಸ್-ಬ್ಲಾಕ್ ಜೋಡಿ