ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಮಿಶ್ರ ಡಬಲ್ಸ್: ಪ್ರಶಸ್ತಿ ಸುತ್ತಿಗೆ ಪೇಸ್-ಬ್ಲಾಕ್ ಜೋಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿಶ್ರ ಡಬಲ್ಸ್: ಪ್ರಶಸ್ತಿ ಸುತ್ತಿಗೆ ಪೇಸ್-ಬ್ಲಾಕ್ ಜೋಡಿ
PTIPTI
ಅಗ್ರ ಶ್ರೇಯಾಂಕದ ಭಾರತದ ಲಿಯಾಂಡರ್ ಪೇಸ್ ಮತ್ತು ಜಿಂಬಾಬ್ವೆಯ ಕ್ಲಾರಾ ಬ್ಲಾಕ್ ಜೋಡಿ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್ ‌ಪಂದ್ಯದಲ್ಲಿ ಪೇಸ್-ಬ್ಲಾಕ್ ಜೋಡಿ 6-4, 6-4 ನೇರ ಸೆಟ್‌ಗಳ ಅಂತರದಿಂದ 12ನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ ಸ್ಟೀಫನ್ ಹಸ್ಸ್ ಮತ್ತು ಸ್ಪಾನಿಶ್‌ನ ವೆರ್ಜಿನಾ ರೂವಾನೊ ಪಾಸ್ಕುವಲ್ ವಿರುದ್ಧ ಸುಲಭ ಜಯ ದಾಖಲಿಸಿದರು. ಪೇಸ್-ಬ್ಲಾಕ್ ಜೋಡಿ ಪಂದ್ಯವನ್ನು ಕೇವಲ 71 ನಿಮಿಷಗಳಲ್ಲಿ ವಶಪಡಿಸಿಕೊಂಡರು.

ವಿಂಬಲ್ಡನ್‌ನಲ್ಲಿ ಭಾರತದ ಏಕೈಕ ಭರವಸೆಯಾಗಿರುವ ಲಿಯಾಂಡರ್ ಪೇಸ್ ಮತ್ತು ಜಿಂಬಾಬ್ವೆಯ ಕ್ಲಾರಾ ಬ್ಲಾಕ್ ಜೋಡಿ ಕಳೆದ ವರ್ಷ 'ಅಮೆರಿಕನ್ ಓಪನ್' ಗೆದ್ದುಕೊಂಡಿದ್ದರು.

ಪೇಸ್-ಬ್ಲಾಕ್ ಜೋಡಿ ಪ್ರಶಸ್ತಿಗಾಗಿನ ಹೋರಾಟದಲ್ಲಿ ಬಹಮಾಸ್‌ನ ಮಾರ್ಕ್ ನೋವ್ಲ್ಸ್ ಮತ್ತು ಜರ್ಮನಿಯ ಅನ್ನಾ ಲಿನಾ ಗ್ರೋನ್‌ಫೀಲ್ಡ್ ಜೋಡಿಯನ್ನು ಎದುರಿಸಲಿದ್ದಾರೆ. ನಿನ್ನೆ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯಯಲ್ಲಿ ಮಾರ್ಕ್-ಲಿನಾ ಜೋಡಿ 6-2, 7-5ರಲ್ಲಿ ಅಮೆರಿಕದ ಲಿಜೆಲ್ ಹಬ್ಬರ್ ಮತ್ತು ಇಂಗ್ಲೆಂಡ್‌ನ ಜೆಮ್ಮಿ ವಿರುದ್ಧ ಜಯಗಳಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಡ್ಮಿಂಟನ್: ಫೈನಲ್‌ಗೆ ಚೇತನ್, ಪ್ರಭು
ಟೇಬಲ್ ಟೆನಿಸ್: ನೈಋತ್ಯ ರೈಲ್ವೇಗೆ ಜಯ
ಡಬಲ್ಸ್ ಫೈನಲ್‌ನಲ್ಲಿ ವಿಲಿಯಮ್ಸ್ ಸಹೋದರಿಯರು
ಫೆಡರರ್ 15ನೇ ಗ್ರಾಂಡ್‌ಸ್ಲಾಮ್‌ಗಿನ್ನು ಒಂದೇ ಹೆಜ್ಜೆ..
ವಿಶ್ವಕಪ್ ಕುರಿತ ಫಿಫಾ ಷರತ್ತಿಗೆ ಬದ್ಧ: ದ.ಆಫ್ರಿಕಾ
9.5 ಸೆಕುಂಡಿನಲ್ಲಿ 100 ಮೀಟರ್: ಬೋಲ್ಟ್ ವಿಶ್ವಾಸ