ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಫೆಡೆಕ್ಸ್-ರಾಡಿಕ್, ವಿಲಿಯಮ್ಸ್: ಯಾರ ಕೊರಳಿಗೆ ಮಾಲೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಡೆಕ್ಸ್-ರಾಡಿಕ್, ವಿಲಿಯಮ್ಸ್: ಯಾರ ಕೊರಳಿಗೆ ಮಾಲೆ?
ಐದು ಬಾರಿ ವಿಂಬಲ್ಡನ್ ಪುರುಷರ ಸಿಂಗಲ್ಸ್ ಕಿರೀಟವೇರಿಸಿಕೊಂಡಿರುವ ರೋಜರ್ ಫೆಡರರ್, ಫೈನಲ್‌ಗೇರಿದ್ದೇ ಸಾಧನೆ ಎನ್ನುತ್ತಿರುವ ಆಂಡಿ ರಾಡಿಕ್; ಅತ್ತ ಮಹಿಳೆಯರ ಸಿಂಗಲ್ಸ್‌ನಲ್ಲಿ ಇಲ್ಲಿನ ಐದು ಪ್ರಶಸ್ತಿ ಗೆದ್ದಿರುವ ಚಾಂಪಿಯನ್ ವೀನಸ್ ವಿಲಿಯಮ್ಸ್, ಎರಡು ಬಾರಿ ಚಾಂಪಿಯನ್‌ಶಿಪ್ ಪಡೆದಿರುವ ಸೆರೆನಾ; ಇವರಲ್ಲಿ ಜಯದ ಮಾಲೆ ಯಾರ‌್ಯಾರ ಕೊರಳಿಗೆ?

ಸ್ವಿಜರ್ಲೆಂಡ್‌ನ ಎರಡನೇ ಶ್ರೇಯಾಂಕಿತ ಫೆಡರರ್ - ಅಮೆರಿಕಾದ ಆರನೇ ಶ್ರೇಯಾಂಕಿತ ಆಂಡಿ ರಾಡಿಕ್ ಭಾನುವಾರ ನಡೆಯಲಿರುವ ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮುಖಾಮುಖಿಯಾಗಲಿದ್ದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಈ ಬಾರಿಯೂ ವಿಲಿಯಮ್ಸ್ ಸಹೋದರಿಯರದ್ದೇ ಕಾರುಬಾರು.

ವಿಂಬಲ್ಡನ್‌ನಲ್ಲಿ ಐದು ಬಾರಿ ಚಾಂಪಿಯನ್‌ಶಿಪ್ ಪಡೆದಿರುವ ದಿಗ್ಗಜ ಫೆಡರರ್ ಈ ಬಾರಿಯೂ ಗೆದ್ದರೆ ಅವರ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಸಂಖ್ಯೆ ದಾಖಲೆಯ 15ಕ್ಕೇರುತ್ತದೆ. ಆ ಮೂಲಕ ಪೀಟ್ ಸಾಂಪ್ರಸ್‌ರ 14ರ ದಾಖಲೆಯನ್ನು ಮುರಿದು ನಿಲ್ಲುವ ಅವಕಾಶ ಫೆಡರರ್ ಮುಂದಿದೆ.

ಫೆಡರರ್ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ 24ನೇ ಶ್ರೇಯಾಂಕಿತ ಟಾಮಿ ಹಾಸ್ ವಿರುದ್ಧ ಹಾಗೂ ರಾಡಿಕ್ ಬ್ರಿಟನ್‌ನ ಮೂರನೇ ಶ್ರೇಯಾಂಕಿತ ಆಂಡಿ ಮುರ್ರೆಯವರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.

1936ರ ನಂತರ ಯಾವೊಬ್ಬ ಬ್ರಿಟೀಷ್ ಆಟಗಾರನೂ ವಿಂಬಲ್ಡನ್ ಚಾಂಪಿಯನ್ ಪಟ್ಟವೇರದ ಹಸಿವನ್ನು ಮುರ್ರೆ ನೀಗಿಸುವರೆಂಬ ಭರವಸೆ ಈ ಬಾರಿ ಎಲ್ಲರದ್ದಾಗಿತ್ತು. ಆದರೆ ಆ ಕನಸನ್ನು ನುಚ್ಚು ನೂರು ಮಾಡಿದ್ದು ರಾಡಿಕ್. ಅವರು 6-4, 4-6, 7-6 (9/7), 7-6 (7/5)ರ ಅಂತರದಿಂದ ಮುರ್ರೆಯವರನ್ನು ಸೆಮಿಫೈನಲ್‌ನಿಂದಲೇ ಹೊರಗಟ್ಟಿದ್ದರು.

2003ರ ಅಮೆರಿಕಾ ಓಪನ್ ಮಾತ್ರ ಇದುವರೆಗೆ ಗೆದ್ದಿರುವ ರಾಡಿಕ್‌ 2006ರ ನಂತರ ಪ್ರವೇಶಿಸಿರುವ ಮೊದಲ ಗ್ರಾಂಡ್ ಸ್ಲಾಮ್ ಫೈನಲ್ ಇದಾಗಿದೆ.

ಅತ್ತ ಮಹಿಳೆಯರ ಸಿಂಗಲ್ಸ್ ಕಳೆದ ವರ್ಷದಂತೆ ಈ ವರ್ಷವೂ ವಿಲಿಯಮ್ಸ್ ಸಹೋದರಿಯರ ನಡುವೆಯೇ ನಡೆಯುತ್ತಿದೆ. ಎರಡನೇ ಶ್ರೇಯಾಂಕಿತೆ ಸೆರೆನಾ ಪ್ರಭಾವ ವಿಂಬಲ್ಡನ್‌ನಲ್ಲಿ ತುಸು ಕಡಿಮೆಯೆಂದೇ ಗುರುತಿಸಲಾಗುತ್ತದೆ. ಆಕೆ ಇದುವರೆಗೆ ಎರಡು ಬಾರಿ ಮಾತ್ರ ಪ್ರಶಸ್ತಿ ಪಡೆಯಲು ಸಾಧ್ಯವಾಗಿರುವುದು ಅದಕ್ಕೆ ಕಾರಣ. ಇದುವರೆಗೆ 10 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸೆರೆನಾ 2002 ಮತ್ತು 2003ರಲ್ಲಿ ವಿಂಬಲ್ಡನ್ ಗೆದ್ದಿದ್ದರು.

ಆದರೆ ಆಕೆಯ ಸಹೋದರಿ ವೀನಸ್ ಐದು ಸಲ ವಿಂಬಲ್ಡನ್ ಗೆದ್ದಿದ್ದಾರೆ. ಹಾಲಿ ಚಾಂಪಿಯನ್ ವೀನಸ್ ಹೆಸರಲ್ಲಿ ಒಟ್ಟು ಒಂಬತ್ತು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳಿವೆ. ಈ ಅಮೆರಿಕನ್ ಮೂರನೇ ಶ್ರೇಯಾಂಕಿತೆ ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ರಷ್ಯಾದ ದಿನಾರಾ ಸಫಿನಾರನ್ನು 6-1, 6-0ಯ ಭರ್ಜರಿ ಅಂತರದಿಂದ ಮಣಿಸುವ ಮೂಲಕ ತಾಕತ್ತು ಪ್ರದರ್ಶಿಸಿದ್ದರು. ಹಾಗಾಗಿ ಇವರ ಮೇಲೆ ಹೆಚ್ಚಿನ ಭರವಸೆಯನ್ನಿಡಲಾಗುತ್ತಿದೆ.

ಮಹಿಳೆಯರ ಸಿಂಗಲ್ಸ್ ಶನಿವಾರ ಹಾಗೂ ಪುರುಷರ ಸಿಂಗಲ್ಸ್ ಭಾನುವಾರ ಲಂಡನ್‌ನಲ್ಲಿ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಿಶ್ರ ಡಬಲ್ಸ್: ಪ್ರಶಸ್ತಿ ಸುತ್ತಿಗೆ ಪೇಸ್-ಬ್ಲಾಕ್ ಜೋಡಿ
ಬ್ಯಾಡ್ಮಿಂಟನ್: ಫೈನಲ್‌ಗೆ ಚೇತನ್, ಪ್ರಭು
ಟೇಬಲ್ ಟೆನಿಸ್: ನೈಋತ್ಯ ರೈಲ್ವೇಗೆ ಜಯ
ಡಬಲ್ಸ್ ಫೈನಲ್‌ನಲ್ಲಿ ವಿಲಿಯಮ್ಸ್ ಸಹೋದರಿಯರು
ಫೆಡರರ್ 15ನೇ ಗ್ರಾಂಡ್‌ಸ್ಲಾಮ್‌ಗಿನ್ನು ಒಂದೇ ಹೆಜ್ಜೆ..
ವಿಶ್ವಕಪ್ ಕುರಿತ ಫಿಫಾ ಷರತ್ತಿಗೆ ಬದ್ಧ: ದ.ಆಫ್ರಿಕಾ