ಸಿಂಗಾಪುರ: ಇಲ್ಲಿ ನಡೆಯುತ್ತಿರುವ 'ಏಷ್ಯನ್ ಯುವ ಕ್ರೀಡಾಕೂಟ'ದಲ್ಲಿ 5 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಭಾರತ ನಾಲ್ಕನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ.
800 ಮೀಟರ್ ಓಟದಲ್ಲಿ ಕರ್ನಾಟಕದ ರವಿ ಕುಮಾರ್ ಹಾಗೂ ಈಜುನಲ್ಲಿ ಆರ್ಯನ್ ಕುಮಾರ್ ಚಿನ್ನ ಪದಕ ಗೆಳ್ಳುವುದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 10ಕ್ಕೇರಿತು.
ಬಾಲಕರ 800 ಮೀಟರ್ ಓಟದಲ್ಲಿ ಕರ್ನಾಟಕದ ರವಿ ಕುಮಾರ್ 1:55.91 ನಿಮಿಷದಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಇರಾನ್‌ನ ಬೆಳ್ಳಿ ಹಾಗೂ ಶ್ರೀಲಂಕಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಇದೇ ವೇಳೆ ಬಾಲಕಿಯರ 800 ಮೀಟರ್ ಓಟದಲ್ಲಿ ನಮಿತಾ ಕಬತ್ 2:15.55 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದುಕೊಂಡರು. ಇದೇ ವಿಭಾಗದಲ್ಲಿ ವಿಯೆಟ್ನಾಂಗೆ ಬೆಳ್ಳಿ ಹಾಗೂ ಮ್ಯಾನ್‌ಮಾರ್‌ಗೆ ಕಂಚಿನ ಪದಕ ದೊರೆತಿದೆ.
ಈಜು ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನ ಪದಕವನ್ನು ತಂದಿತ್ತ ಆರ್ಯನ್, 200 ಮೀಟರ್ ಫ್ರೀ ಸ್ಟೈಲ್ ದೂರವನ್ನು 1.52.22 ಸೆಕೆಂಡ್‌ಗಳಲ್ಲಿ ಕ್ರಮಿಕರಿಸಿದ್ದರು.
|