ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸೆಂಟ್ರಲ್ ಬ್ಯಾಂಕ್ ಐಟಿಎಫ್ ಯೂಕಿ ಮಡಿಲಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆಂಟ್ರಲ್ ಬ್ಯಾಂಕ್ ಐಟಿಎಫ್ ಯೂಕಿ ಮಡಿಲಿಗೆ
ಇಲ್ಲಿನ ಡಿಎಲ್‌ಟಿಎ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ 15,000 ಅಮೆರಿಕನ್ ಡಾಲರ್ ಬಹುಮಾನ ಹೊಂದಿದ್ದ ಸೆಂಟ್ರಲ್ ಬ್ಯಾಂಕ್ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ಫ್ಯೂಚರ್ಸ್ ಕಪ್‌ನಲ್ಲಿ ರೋಹನ್ ಗಜ್ಜಾರ್‌ರಿಗೆ 6-2, 7-6(6)ರ ಸೋಲುಣಿಸಿರುವ ಬರ್ತ್‌ಡೇ ಬಾಯ್ ಯೂಕಿ ಭಾಂಬ್ರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಈ ಜಯದೊಂದಿಗೆ ಗಜ್ಜಾರ್ ವಿರುದ್ಧ ಮುಖಾಮುಖಿಯಾದ ಮೂರೂ ಪಂದ್ಯಗಳನ್ನು ಯೂಕಿ ಗೆದ್ದುಕೊಂಡ ದಾಖಲೆ ನಿರ್ಮಿಸಿದ್ದಾರೆ. ಏಪ್ರಿಲ್ - ಮೇ ತಿಂಗಳ ಅವಧಿಯಲ್ಲಿ ನಡೆದಿದ್ದ ಎರಡು ಐಟಿಎಫ್ ಟೂರ್ನಮೆಂಟ್‌ಗಳಲ್ಲಿ ಯೂಕಿಯವರು ಗಜ್ಜಾರ್‌ರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದರು.

ಒಟ್ಟಾರೆ ಮೂರನೇ ಐಟಿಎಫ್ ಗೆದ್ದುಕೊಂಡಿರುವ ಯೂಕಿ ಮತ್ತೊಂದು ಪ್ರಶಸ್ತಿ ಗೆದ್ದುಕೊಳ್ಳುವ ಅವಕಾಶವಿದೆ. ಸೋಮವಾರ ಆರಂಭವಾಗಲಿರುವ ಐಟಿಎಫ್ ಟೂರ್ನಿಯನ್ನೂ ಗೆದ್ದುಕೊಂಡಲ್ಲಿ ಸತತ ಎರಡು ಐಟಿಎಫ್ ಗೆದ್ದ ದಾಖಲೆಯೂ ನಿರ್ಮಾಣವಾದಂತಾಗುತ್ತದೆ.

ದೆಹಲಿಯ 17ರ ಹುಡುಗ ಶನಿವಾರ ನಡೆದ ಫೈನಲ್ ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಾ ಗುಜ್ಜಾರ್‌ರನ್ನು ತಬ್ಬಿಬ್ಬುಗೊಳಿಸಿದ್ದರು. ಸುಮಾರು ಒಂದು ಗಂಟೆ 22 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯನ್ನು ನಾಲ್ಕನೇ ಶ್ರೇಯಾಂಕಿತ ಯೂಕಿ ಅನುಭವಿಸಿದ್ದರಾದರೂ ನಂತರ ಚೇತರಿಕೆಯ ಪ್ರದರ್ಶನ ನೀಡಿದ್ದರು.

ಗಜ್ಜಾರ್‌ನ ಸ್ವಯಂ ತಪ್ಪುಗಳ ಲಾಭವನ್ನು ಪಡೆದುಕೊಂಡ ಆಸ್ಟ್ರೇಲಿಯನ್ ಜೂನಿಯರ್ ಓಪನ್ ಚಾಂಪಿಯನ್ ಆರಂಭಿಕ ಸೆಟ್ಟನ್ನು ಸುಲಭವಾಗಿ ಗೆದ್ದುಕೊಂಡಿದ್ದರು. ಆದರೆ ಎರಡನೇ ಸೆಟ್ ಟೈಬ್ರೇಕರ್ ತಲುಪಿತ್ತು. ಅಲ್ಲೂ ಜಯ ಗಳಿಸುವ ಮೂಲಕ ಯೂಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಗೆಲುವಿನೊಂದಿಗೆ 1,950 ಅಮೆರಿಕನ್ ಡಾಲರ್ ಬಹುಮಾನ ಹಾಗೂ 25 ಎಟಿಪಿ ರ‌್ಯಾಂಕಿಂಗ್ ಅಂಕಗಳನ್ನೂ ಯೂಕಿ ಪಡೆದಿದ್ದಾರೆ. "ಇಂದಿನ ಪಂದ್ಯದಲ್ಲಿ ಕೆಲವು ಕಡೆ ತಪ್ಪುಗಳಾದವು. ಆದರೆ ಪಂದ್ಯದುದ್ದಕ್ಕೂ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದೆ. ಗೆದ್ದಿರುವುದರಿಂದ ಸಂತೋಷವಾಗಿದೆ. ತವರಿನಲ್ಲಿ ಆಡುವುದೆಂದರೆ ನನಗೆ ವಿಪರೀತ ಖುಷಿ. ಇಲ್ಲಿ ಪ್ರೋತ್ಸಾಹಿಸಲು ಬೇಕಾದಷ್ಟು ಅಭಿಮಾನಿಗಳಿರುತ್ತಾರೆ" ಎಂದು ಇಂದು ಹುಟ್ಟುಹಬ್ಬವನ್ನಾಚರಿಸಿದ ಯೂಕಿ ಪ್ರತಿಕ್ರಿಯೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂದೀಪ್ ಸಿಂಗ್ ಈಗ ಪೊಲೀಸ್ ಅಧೀಕ್ಷಕ!
ಏಷ್ಯನ್ ಯುವ ಕ್ರೀಡಾಕೂಟ: ಭಾರತಕ್ಕೆ 10ನೇ ಪದಕ
ಐಟಿಎಫ್‌ ಟೆನಿಸ್‌: ಯೂಕಿ, ಗಜ್ಜರ್ ಫೈನಲ್‌ಗೆ
ಫೆಡೆಕ್ಸ್-ರಾಡಿಕ್, ವಿಲಿಯಮ್ಸ್: ಯಾರ ಕೊರಳಿಗೆ ಮಾಲೆ?
ಮಿಶ್ರ ಡಬಲ್ಸ್: ಪ್ರಶಸ್ತಿ ಸುತ್ತಿಗೆ ಪೇಸ್-ಬ್ಲಾಕ್ ಜೋಡಿ
ಬ್ಯಾಡ್ಮಿಂಟನ್: ಫೈನಲ್‌ಗೆ ಚೇತನ್, ಪ್ರಭು