ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ಸಾನಿಯಾ ಮತ್ತು ನನ್ನದು ಉತ್ತಮ ಆಟ: ಸೈನಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾನಿಯಾ ಮತ್ತು ನನ್ನದು ಉತ್ತಮ ಆಟ: ಸೈನಾ
ಸಾನಿಯಾ ಮಿರ್ಜಾ ಸಾಧನೆಗಿಂತ ಸೈನಾ ನೆಹ್ವಾಲ್ ಸಾಧನೆ ಶ್ರೇಷ್ಠ ಎಂದು ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತದ ಖ್ಯಾತ ಆಟಗಾರ್ತಿ ಸೈನಾ, ಪ್ರತ್ಯೇಕ ಕ್ಷೇತ್ರಗಳಲ್ಲಿ ನಾವಿಬ್ಬರೂ ಉತ್ತಮವಾಗಿ ಆಡುತ್ತಿದ್ದೇವೆ ಎಂದಿದ್ದಾರೆ.

ಸೈನಾ ಅಗ್ರ ಆಟಗಾರ್ತಿಯನ್ನು ಹಲವಾರು ಬಾರಿ ಮಣಿಸಿರುವುದರಿಂದ ಸಾನಿಯಾಗಿಂತ ಆಕೆ ಶ್ರೇಷ್ಠ ಸಾಧಕಿ ಎಂದು ಪಡುಕೋಣೆ ಇತ್ತೀಚೆಗಷ್ಟೇ ಹೇಳಿದ್ದರು. ಆ ಹೇಳಿಕೆಯಿಂದ ಮುಜುಗರಕ್ಕೊಳಗಾದ ಸೈನಾ ಪರಿಸ್ಥಿತಿಯನ್ನು ಮೃದುವಾಗಿಸಲು ಯತ್ನಿಸಿದ್ದಾರೆ.

"ಅದು ಪಡುಕೋಣೆ ಸರ್ ಹೇಳಿಕೆ. ನಾವಿಬ್ಬರೂ ಅತ್ಯುತ್ತಮವಾಗಿ ಆಡುತ್ತಿದ್ದೇವೆ ಎಂದು ನಾನು ಹೇಳಬಲ್ಲೆ" ಎಂದು ತೆಲುಗು ದೇಶಂ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡುರವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರು ಪಡುಕೋಣೆ ಹೇಳಿಕೆಗೆಯನ್ನು ಪ್ರಶ್ನಿಸಿದಾಗ ಈ ರೀತಿ ಹೇಳಿದರು.

ಕಳೆದ ತಿಂಗಳು ಇಂಡೋನೇಷಿಯನ್ ಸೂಪರ್ ಸಿರೀಸ್ ಗೆದ್ದುಕೊಂಡ ಹಿನ್ನಲೆಯಲ್ಲಿ ನಾಯ್ಡು ಜತೆ ಮಾತುಕತೆ ನಡೆಸಿದ ನೆಹ್ವಾಲ್‌ಗೆ ಟಿಡಿಪಿ ಮುಖಂಡ, ಮುಂದಿನ ದಿನಗಳಲ್ಲಿ ಪ್ರಮುಖ ಟೂರ್ನಮೆಂಟ್‌ಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.

"ಕ್ರೀಡೆಯನ್ನು ಬೆಂಬಲಿಸುವ ಇಂತವರನ್ನು ಭೇಟಿ ಮಾಡುವುದು ನಿಜಕ್ಕೂ ಉತ್ತಮವಾಗಿರುತ್ತದೆ. ಟೂರ್ನಮೆಂಟ್‌ಗಳತ್ತ ಹೆಚ್ಚಿನ ಗಮನ ಹರಿಸುತ್ತಾ ಗೆಲುವನ್ನು ಅಭ್ಯಾಸ ಮಾಡಿಕೊಳ್ಳುವಂತೆ ಅವರು ನನಗೆ ತಿಳಿಸಿದ್ದಾರೆ" ಎಂದು ಭೇಟಿಯ ನಂತರ ಸೈನಾ ಮಾಹಿತಿ ನೀಡಿದರು.

ಅಲ್ಲದೆ ಮುಂದಿನ ದಿನಗಳಲ್ಲಿ ಸೈನಾ ಕ್ರೀಡಾಜೀವನಕ್ಕೆ ಸಾಧ್ಯವಾದಷ್ಟು ಸಹಾಯ ಮಾಡುವ ಭರವಸೆಯನ್ನೂ ನಾಯ್ಡು ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೆಂಟ್ರಲ್ ಬ್ಯಾಂಕ್ ಐಟಿಎಫ್ ಯೂಕಿ ಮಡಿಲಿಗೆ
ಸಂದೀಪ್ ಸಿಂಗ್ ಈಗ ಪೊಲೀಸ್ ಅಧೀಕ್ಷಕ!
ಏಷ್ಯನ್ ಯುವ ಕ್ರೀಡಾಕೂಟ: ಭಾರತಕ್ಕೆ 10ನೇ ಪದಕ
ಐಟಿಎಫ್‌ ಟೆನಿಸ್‌: ಯೂಕಿ, ಗಜ್ಜರ್ ಫೈನಲ್‌ಗೆ
ಫೆಡೆಕ್ಸ್-ರಾಡಿಕ್, ವಿಲಿಯಮ್ಸ್: ಯಾರ ಕೊರಳಿಗೆ ಮಾಲೆ?
ಮಿಶ್ರ ಡಬಲ್ಸ್: ಪ್ರಶಸ್ತಿ ಸುತ್ತಿಗೆ ಪೇಸ್-ಬ್ಲಾಕ್ ಜೋಡಿ