ಮಹಿಳಾ ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ ಸಾನಿಯಾ ಮಿರ್ಜಾ ಮತ್ತು ಆಕೆಯ ಜತೆಗಾರ್ತಿ ಇಟೆಲಿಯ ಫ್ರಾನ್ಸೆಂಸ್ಕಾ ಶಿವೊನ್ ಇಲ್ಲಿ ನಡೆಯುತ್ತಿರುವ ಎರಡು ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಹೊಂದಿರುವ ಸಿನ್ಸಿನಾಟಿ ಓಪನ್ ಟೂರ್ನಮೆಂಟ್‌ನಿಂದ ನಿರ್ಗಮಿಸಿದ್ದಾರೆ.
ಶ್ರೇಯಾಂಕ ರಹಿತ ಭಾರತ-ಇಟೆಲಿ ಜೋಡಿ 4-6, 3-6ರ ನೇರ ಸೆಟ್‌ಗಳಲ್ಲಿ ಜಿಂಬಾಬ್ವೆಯ ಕ್ಲಾರಾ ಬ್ಲಾಕ್ ಮತ್ತು ಅಮೆರಿಕಾದ ಲಿಜೆಲ್ ಹ್ಯೂಬರ್ ವಿರುದ್ಧ ಪರಾಜಯ ಕಂಡರು.
ಜಿಂಬಾಬ್ವೆ-ಅಮೆರಿಕಾ ಜೋಡಿ ಪಂದ್ಯವನ್ನು ಒಂದು ಗಂಟೆ 14 ನಿಮಿಷಗಳ ಹೋರಾಟದಲ್ಲಿ ವಶಪಡಿಸಿಕೊಂಡಿತು.
ಕಳೆದ ತಿಂಗಳು ನಡೆದ ಲೆಕ್ಸಿಂಗ್ಟನ್ ಚಾಲೆಂಜರ್ ಟೂರ್ನಮೆಂಟ್‌ನ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಾನಿಯಾ, ಕೆನಡಾದಲ್ಲಿ ನಡೆದ ವಾಂಕೊವರ್ ಓಪನ್‌ನ ಫೈನಲ್‌ನಲ್ಲಿ ಸೋಲುವ ಮೂಲಕ ಸತತ ಎರಡನೇ ಐಟಿಎಫ್ ಪ್ರಶಸ್ತಿ ಅವಕಾಶವನ್ನು ಕಳೆದು ಕೊಂಡಿದ್ದರು.