ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಜೀವನಶ್ರೇಷ್ಠ ‌ರ‌್ಯಾಂಕಿಂಗ್ ಸ್ಥಾನಕ್ಕೆ ಸೋಮದೇವ್ ಮತ್ತೊಮ್ಮೆ ನೆಗೆತ (Somdev Devvarman | India | ATP | Ranking)
Feedback Print Bookmark and Share
 
ಸೋಮದೇವ್ ದೇವರ್ಮನ್
PTI
PTI
ಸೋಮವಾರ ಬಿಡುಗಡೆಗೊಂಡ ನೂತನ ಎಟಿಪಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ಜೀವನಶ್ರೇಷ್ಠ ಸ್ಥಾನಕ್ಕೆ ಮತ್ತೊಮ್ಮೆ ನೆಗೆತ ಕಂಡಿರುವ ಉದಯೋನ್ಮುಖ ಆಟಗಾರ ಸೋಮದೇವ್ ದೇವರ್ಮನ್ 121ನೇ ಸ್ಥಾನಕ್ಕೆ ತಲುಪಿದ್ದಾರೆ.

ಕಳೆದ ವಾರವಷ್ಟೇ 124ಕ್ಕೆ ತಲುಪಿದ್ದ ಸೋಮದೇವ್ ಮತ್ತೆ ಮೂರು ಸ್ಥಾನ ಉತ್ತಮಪಡಿಸುವ ಮೂಲಕ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ಜೀವನಶ್ರೇಷ್ಠ ಸಾಧನೆ ಪ್ರಸ್ತುತ ಪಡಿಸಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಜೂನಿಯರ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಯೂಕಿ ಭಾಂಬ್ರಿ ಕೂಡಾ ಮೂರು ಸ್ಥಾನಗಳ ಭಡ್ತಿ ಪಡೆದು 344ಕ್ಕೆ ತಲುಪಿದ್ದಾರೆ. ಭಾರತ ಮೂಲದ ಮತ್ತೊಬ್ಬ ಆಟಗಾರ ಪ್ರಕಾಶ್ ಅಮೃತರಾಜ್ 17ಸ್ಥಾನಗಳ ನೆಗೆತ ಕಂಡು 232ಕ್ಕೆ ತಲುಪಿದ್ದಾರೆ.

ಸಾನಿಯಾ ಸ್ಥಿರ..
ಅದೇ ವೇಳೆ ಮಹಿಳಾ ರ‌್ಯಾಂಕಿಂಗ್ ಪಟ್ಟಿಯಲ್ಲಿ ಹೈದರಾಬಾದ್ ಆಟಗಾರ್ತಿ ಸಾನಿಯಾ ಮಿರ್ಜಾ 58ರಲ್ಲಿ ಸ್ಥಿರವಾಗಿದ್ದಾರೆ. ಆದರೆ ಡಬಲ್ಸ್‌ನಲ್ಲಿ ಎರಡು ಸ್ಥಾನ ಕುಸಿತ ಕಂಡಿರುವ ಅವರು 38ಕ್ಕೆ ಜಾರಿಕೊಂಡಿದ್ದಾರೆ.

ಮಹೇಶ್ ಕುಸಿತ, ಪೇಸ್ ಸ್ಥಿರ...
ಪುರುಷರ ಡಬಲ್ಸ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡಿರುವ ಮಹೇಶ್ ಭೂಪತಿ ಏಳಕ್ಕೆ ತಲುಪಿದ್ದಾರೆ. ಇವರ ಸ್ಥಾನವನ್ನು ಲೂಕಾಸ್ ದೋಹ್ಲಿ ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಡಬಲ್ಸ್ ಪಟು ಲಿಯಾಂಡರ್ ಪೇಸ್ ಎಂಟರಲ್ಲಿಯೇ ಸ್ಥಿರವಾಗಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ