ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡದವರು ಬ್ರೂನೈನಲ್ಲಿ ನಡೆದ ಏಷ್ಯನ್ ಸೆವೆನ್ಸ್ ಸರ್ಕ್ಯೂಟ್ ರಗ್ಬಿ ಟೂರ್ನಿಯ ಪ್ಲೇಟ್ ವಿಭಾಗದ ಫೈನಲ್‌ನಲ್ಲಿ ಜಯ ಪಡೆದರು. ಭಾರತ ತಂಡ ಪ್ಲೇಟ್ ವಿಭಾಗದ ಫೈನಲ್ ಪಂದ್ಯದಲ್ಲಿ 34-5 ರಲ್ಲಿ ಆತಿಥೇಯ ಬ್ರೂನೈ ವಿರುದ್ಧ ಗೆಲುವು ಪಡೆಯಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ಪಂದ್ಯದ ಎಲ್ಲ ವಿಭಾಗಗಲ್ಲಿ ಮೇಲುಗೈ ಸಾಧಿಸಿತ್ತು.