ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಗೇಮ್ಸ್‌ ಉದ್ಘಾಟನಾ ಸಮಾರಂಭಕ್ಕೆ ಖಾನ್ ಮೆರುಗು (Shah Rukh Khan | Commonwealth Games | opening ceremony | Delhi)
Feedback Print Bookmark and Share
 
ಶಾರುಖ್ ಖಾನ್
PR
PR
ಮುಂದಿನ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಉತ್ಸುಕರಾಗಿದ್ದಾರೆ. ಭಾನುವಾರ ದೆಹಲಿಯಲ್ಲಿ ನಡೆದ ಏರ್‌‍ಟೆಲ್ ದೆಹಲಿ ಅರೆ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ನಂತರ ಅವರು ತನ್ನ ಈ ಆಸೆಯನ್ನು ತೋಡಿಕೊಂಡರು.

ದೆಹಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸದುದ್ದೇಶವಿಟ್ಟುಕೊಂಡಿರುವ ನನಗೆ ಪ್ರದರ್ಶನ ನೀಡಲು ಇಚ್ಛೆಯಿದೆ. ಈ ಬಗ್ಗೆ ನನಗೆ ಅಪಾರ ಭರವಸೆಯಿದೆ ಎಂದು ಶಾರುಖ್ ಹೇಳಿಕೊಂಡರು.

ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿನ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡುವುದರೊಂದಿಗೆ ಕೆಲ ಸ್ಪರ್ಧೆಗಳನ್ನು ಕೂಡ ವೀಕ್ಷಿಸಲಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ದೇವರ ದಯೆಯಿದ್ದರೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಭಾರತವು ಸಫಲವಾಗಲಿದೆ ಎಂದು ಖಾನ್ ವರದಿಗಾರರಿಗೆ ತಿಳಿಸಿದರು.

ನಾನು ಉದ್ಘಾಟನಾ ಸಮಾರಂಭದಲ್ಲಿ ಹಾಜರಾಗಲಿದ್ದೇನೆ. ಇದು ಖಂಡಿತಾ ಯಶಸ್ವಿಯಾಗುತ್ತದೆ. ದೆಹಲಿ ಜನತೆ ಸಿದ್ಧರಾಗಿ ಎಂದು ಚೀರುತ್ತಿದ್ದ ಅಭಿಮಾನಿಗಳತ್ತ ನೋಡುತ್ತಾ ಖಾನ್ ಹೇಳಿದರು.

ಅಂದ ಹಾಗೆ ಶಾರುಕ್ ಖಾನ್ ಸೋಮವಾರ ತನ್ನ 44ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ