ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ರ‌್ಯಾಂಕಿಂಗ್: ಸೋಮದೇವ್ ಜೀವಶ್ರೇಷ್ಠ 116ನೇ ಸ್ಥಾನಕ್ಕೆ (Somdev Devvarman | ATP | Sania Mirza | Yuki Bhambari)
Feedback Print Bookmark and Share
 
ಭಾರತದ ಭರವಸೆಯ ಟೆನಿಸ್ ಆಟಗಾರ ಸೋಮದೇವ್ ದೇವರ್ಮನ್ ಸೋಮವಾರ ಬಿಡುಗಡೆಗೊಂಡ ನೂತನ ಎಪಿಪಿ ರ‌್ಯಾಂಕಿಂಗ್‌ ಪಟ್ಟಿಯಲ್ಲಿ ಐದು ಸ್ಥಾನಗಳ ಭಡ್ತಿ ಪಡೆಯುವ ಮೂಲಕ 116ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಈ ಮೂಲಕ ಭಾರತದ ನಂಬರ್ ವನ್ ಆಟಗಾರ ಸೋಮದೇವ್ ಅಗ್ರ 100ರೊಳಗೆ ಕಾಣಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಇದೀಗ ಸತತ ಮೂರನೇ ವಾರ ಜೀವನಶ್ರೇಷ್ಠ ರ‌್ಯಾಂಕಿಂಗ್ ಸ್ಥಾನ ಕಾಣುತ್ತಿರುವ ಸೋಮದೇವ್ ಖಾತೆಯಲ್ಲಿ ಒಟ್ಟು 480 ಎಟಿಪಿ ಅಂಕಗಳಿವೆ.

ಅವರು ಕಳೆದ ವಾರ ಕೊರಿಯಾದಲ್ಲಿ ನಡೆದ ಎಟಿಪಿ ಚಾಲೆಂಜರ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಇದರಿಂದಾಗಿ ರ‌್ಯಾಂಕಿಂಗ್‌ನಲ್ಲಿ ಮತ್ತೆ ಮೇಲೇರಿದ್ದಾರೆ.

ಅದೇ ವೇಳೆ ಮತ್ತೊಬ್ಬ ಯುವ ಆಟಗಾರ ಯೂಕಿ ಭಾಂಬ್ರಿ 480ನೇ ಸ್ಥಾನದಲ್ಲಿಯೇ ಸ್ಥಿರವಾಗಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಕೂಡಾ 58ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಡಬಲ್ಸ್ ವಿಭಾಗದಲ್ಲಿ ಎರಡು ಸ್ಥಾನ ಕುಸಿತ ಕಂಡಿರುವ ಅವರು 38ಕ್ಕೆ ತಲುಪಿದ್ದಾರೆ.

ಪುರುಷರ ಡಬಲ್ಸ್ ಪಟ್ಟಿಯಲ್ಲಿ ಮಹೇಶ್ ಭೂಪತಿ ಏಳು ಹಾಗೂ ಲಿಯಾಂಡರ್ ಪೇಸ್ ಎಂಟನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ