ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಏಷಿಯನ್ ಒಳಾಂಗಣ ಕ್ರೀಡಾಕೂಟ: ಅಡ್ವಾಣಿ ಔಟ್ (Asian Indoor Games | Pankaj Adwani| India | Snooker)
Feedback Print Bookmark and Share
 
ವಿಯೆಟ್ನಾಂನಲ್ಲಿ ನಡೆಯುತ್ತಿರುವ ಮೂರನೇ ಏಷಿಯನ್ ಒಳಾಂಗಣ ಕ್ರೀಡಾಕೂಟದ ಸ್ನೂಕರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಭಾರತದ ಪಂಕಜ್ ಅಡ್ವಾಣಿ ಅವರು ಸ್ಥಳೀಯ ಫೆವರೀಟ್ ಆಟಗಾರ ಕ್ವಾನ್ ಡೊ ಹೊಂಗ್ ಎದುರು ಆಘಾತಕಾರಿ ಸೋಲುಂಡಿದ್ದಾರೆ. ಇದರೊಂದಿಗೆ ಭಾರತದ ಪದಕದ ಆಸೆಯು ಕಮರಿ ಹೋಯಿತು.

ಮೊದಲ ಪಂದ್ಯದಲ್ಲಿ ಜಪಾನ್‌ನ ಸುಜಿ ಹಾಸೆರನ್ನು 49-25, 42-1, 37-2, 43-12, 30-43, 45-0ರಲ್ಲಿ ಮಣಿಸಿದ ಆಡ್ವಾಣಿ ಟೂರ್ನಿಯಲ್ಲಿ ಉತ್ತಮ ಆರಂಭವನ್ನೇ ಪಡೆದಿದ್ದರು.

ಆದರೆ ನಂತರ ನಡೆದ ಪಂದ್ಯದಲ್ಲಿ ಅಡ್ವಾಣಿ ವಿಯೆಟ್ನಾಂನ ಕ್ವಾನ್ ಡೊ ಹೊಂಗ್ ಎದುರು 70-0, 36-2, 4-42, 5-37, 36-28, 0-49, 1-41, 16-35ರಲ್ಲಿ ಪರಾಜಯಗೊಂಡರು.

ಇತ್ತೀಚೆಗಷ್ಟೇ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದ ಅಡ್ವಾಣಿ ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ