ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಜಯದೊಂದಿಗೆ ಶುಭಾರಂಭ ಮಾಡಿಕೊಂಡ ಫೆಡರರ್ (Roger Federer | Swiss Indoors | ATP | Tennis)
Feedback Print Bookmark and Share
 
ಆರು ವಾರಗಳ ಸುದೀರ್ಘ ವಿರಾಮದ ನಂತರ ಮರಳಿ ಅಂಗಣಕ್ಕಿಳಿದಿರುವ ವಿಶ್ವ ನಂ.1 ಆಟಗಾರ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಸ್ವಿಸ್ ಒಳಾಂಗಣ ಎಟಿಪಿ ಟೆನಿಸ್ ಟೂರ್ನಮೆಂಟ್‌ನ ಮೊದಲ ಸುತ್ತಿನಲ್ಲಿ ಜಯಗಳಿಸುವ ಮೂಲಕ ಶುಭಾರಂಭ ಮಾಡಿಕೊಂಡಿದ್ದಾರೆ.

ಅಗ್ರ ಶ್ರೇಯಾಂಕಿತ ರೋಜರ್, ಮೊದಲ ಸುತ್ತಿನ ಹೋರಾಟದಲ್ಲಿ ಕ್ವಾಲಿಫೈಯರ್ ಬೆಲ್ಜಿಯಂನ ಒಲಿವಿಯರ್ ರೊಚುಸ್‌ರನ್ನು 6-3, 6-4ರ ನೇರ ಸೆಟ್‌ನಲ್ಲಿ ಮಣಿಸಿ ಮುನ್ನಡೆದರು.

ಸತತ ನಾಲ್ಕನೇ ಬಾರಿಗೆ ಸ್ವಿಸ್ ಒಳಾಂಗಣ ಚಾಂಪಿಯನ್‌ಶಿಪ್ ಪ್ರಶಸ್ತಿ ಎದುರು ನೋಡುತ್ತಿರುವ ಫೆಡರರ್ ಪಂದ್ಯದ ಎಲ್ಲಾ ಹಂತದಲ್ಲೂ ಉತ್ತಮ ಆಟದ ಪ್ರದರ್ಶನ ನೀಡಿದರು.

15 ಬಾರಿಯ ಗ್ರಾಂಡ್‌ಸ್ಲಾಮ್ ಚಾಂಪಿಯನ್ ಫೆಡರರ್ ಕೊನೆಯದಾಗಿ ಸೆಪ್ಟೆಂಬರ್‌ನಲ್ಲಿ ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯಾವಳಿಯಲ್ಲಿ ಆಡಿದ್ದರು. ಅದಕ್ಕಿಂತ ಮೊದಲು ಅಮೆರಿಕನ್ ‌ಓಪನ್‌ನಲ್ಲಿ ಪಾಲ್ಗೊಂಡಿದ್ದ ಅವರು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.

ಸಂಬಂಧಿತ ಮಾಹಿತಿ ಹುಡುಕಿ