ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಚಿರತೆಯನ್ನೇ ದತ್ತು ಪಡೆದ ವಿಶ್ವವೇಗಿ ಬೋಲ್ಟ್ (Usain Bolt | cheetah | The worlds fastest man | Jamaica)
Feedback Print Bookmark and Share
 
ವಿಶ್ವದ ಅತೀ ವೇಗದ ಓಟಗಾರ ಜಮೈಕಾದ ಉಸೈನ್ ಬೋಲ್ಟ್ ವನ್ಯಜೀವಿಗಳಲ್ಲಿ ಅತಿ ವೇಗದಲ್ಲಿ ಓಡುವ ಪ್ರಾಣಿಯಾಗಿರುವ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ.

ಕೀನ್ಯಾದಲ್ಲಿ ವಂಶನಾಶ ಭೀತಿಯನ್ನೆದುರಿಸುತ್ತಿರುವ ಪ್ರಾಣಿ ಸಂಕುಲ ರಕ್ಷಣೆಯನ್ನು ಪ್ರೋತ್ಸಾಹಿಸುವುದರ ಅಂಗವಾಗಿ ಬೋಲ್ಟ್ 3 ತಿಂಗಳ ಪ್ರಾಯದ ಚಿರತೆಯನ್ನು ದತ್ತು ಪಡೆದಿದ್ದಾರೆ ಎಂದು ವರದಿ ತಿಳಿಸಿವೆ.

100 ಹಾಗೂ 200 ಮೀಟರ್ ವಿಭಾಗದ ವಿಶ್ವ ಚಾಂಪಿಯನ್ ಬೋಲ್ಟ್ 13,700 ಅಮೆರಿಕನ್ ಡಾಲರ್ ನೀಡಿ ಚಿರತೆಯನ್ನು ಖರೀದಿಸಿದ್ದಾರೆ. ಅಲ್ಲದೆ ವರ್ಷಂಪ್ರತಿ 3000 ಅಮೆರಿಕನ್ ಡಾಲರ್ ಚಿರತೆಯ ಪಾಲನೆ-ಪೋಷಣೆಗಾಗಿ ನೀಡಲಿದ್ದಾರೆ.

ಬೋಲ್ಟ್ ನೀಡಿದ ದುಡ್ಡು ಕೀನ್ಯಾದ ವನ್ಯಜೀವಿ ಸೇವಾ ಕೇಂದ್ರಕ್ಕೆ ಸಲ್ಲಲಿದೆ ಎಂದು ಕೀನ್ಯಾ ವೈಲ್ಡ್‌ಲೈಫ್ ಸರ್ವೀಸ್ (ಕೆಡಬ್ಲ್ಯುಎಸ್) ನಿರ್ದೇಶಕ ಜುಲಿಯಾಸ್ ಕಿಪ್‌ನೆಗಿಟಿಕ್‌ ತಿಳಿಸಿದರು.

ಅದೇ ವೇಳೆ 110 ಮೀಟರ್ ಹರ್ಡಲ್ಸ್ ಮಾಜಿ ವಿಶ್ವ ಚಾಂಪಿಯನ್ ಕಾಲಿನ್ ಜಾಕ್ಸನ್ ಅವರೂ ಕೂಡಾ ಜಿಂಕೆ ಮರಿಯೊಂದನ್ನು ದತ್ತು ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ