ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್, ರಷ್ಯಾದ ಅನತೊಲಿ ಕಾರ್ಪೋವ್ ವಿರುದ್ಧ ನಡೆದ ನಾಲ್ಕು ಪಂದ್ಯಗಳ ರ‌್ಯಾಪಿಡ್ ಚೆಸ್ ಸರಣಿಯನ್ನು 3.5-0.5 ಪಾಯಿಂಟ್‌ಗಳಿಂದ ವಶಪಡಿಸಿಕೊಂಡಿದ್ದಾರೆ.
ಮೊದಲೆರಡು ಗೇಮ್‌ಗಳ ಅಂತ್ಯಕ್ಕೆ 1.5-0.5 ಅಂಕಗಳ ಮುನ್ನಡೆ ಪಡೆದಿದ್ದ ಆನಂದ್ ನಂತರ ಎರಡೂ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ಮತ್ತೊಮ್ಮೆ ಸಾಬೀತುಪಡಿಸಿದರು.
ಮೂರನೇ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ಆನಂದ್ 30 ನಡೆಗಳಲ್ಲಿ ಜಯಗಳಿಸಿದರು. ಈ ಗೆಲುವಿನೊಂದಿಗೆ ಸರಣಿ ವಶಪಡಿಸಿದ ಆನಂದ್ ಅಂತಿಮ ಪಂದ್ಯವನ್ನೂ ಲಘುವಾಗಿ ಪರಿಗಣಿಸಲಿಲ್ಲ.
ನಾಲ್ಕನೇ ಗೇಮ್ ನಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದ ಗ್ರಾಂಡ್‌ಮಾಸ್ಟರ್ 32 ನಡೆಗಳಲ್ಲಿ ಗೆಲುವು ದಾಖಲಿಸಿದರು.