ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಕೊರಿಯಾ ಚಾಲೆಂಜರ್: ಪ್ರಕಾಶ್‌ಗೆ ಮಿಶ್ರಫಲ (Korea Challenger | Prakash Amritraj | ATP | Alex Kuznetosv)
Feedback Print Bookmark and Share
 
ಪ್ರಕಾಶ್ ಅಮೃತರಾಜ್ ಕೊರಿಯಾದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಮೆಂಟ್‌ನ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರೆ ಡಬಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಪ್ರಕಾಶ್ ಮಿಶ್ರಫಲ ಅನುಭವಿಸಿದರು.

ಮಂಗಳವಾರ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಪ್ರಕಾಶ್, ಐದನೇ ಶ್ರೇಯಾಂಕಿತ ಸ್ಥಳೀಯ ಫೆವರೀಟ್ ಕ್ಯೂ ತೆ ಇಮ್‌ರನ್ನು 7-6(2) 6-2ರ ಅಂತರದಲ್ಲಿ ಬಗ್ಗುಬಡಿದರು.

ಒಂದು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತ ಹೊಂದಿರುವ ಟೂರ್ನಿಯಲ್ಲಿ ಐದನೇ ಶ್ರೇಯಾಂಕಿತ ಆಟಗಾರನನ್ನು ಮಣಿಸುವ ಮೂಲಕ ಪ್ರಕಾಶ್ ಅಚ್ಚರಿ ಫಲಿತಾಂಶಕ್ಕೆ ಕಾರಣರಾದರು.

ಮುಂದಿನ ಸುತ್ತಿನಲ್ಲಿ ಅವರು ಲಟ್ವಿಯಾನ್ ಆಂಡಿಸ್ ಜುಸ್ಕಾರನ್ನು ಎದುರಿಸಲಿದ್ದಾರೆ.

ಅದೇ ವೇಳೆ ಪ್ರಕಾಶ್ ಮತ್ತು ಅಮೆರಿಕಾದ ಅಲೆಕ್ಸ್ ಕುಜ್ನೆತ್ಸೋವ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ. ಪ್ರಕಾಶ್-ಅಲೆಕ್ಸ್ ಜೋಡಿ, ಎರಡನೇ ಶ್ರೇಯಾಂಕಿತ ದಕ್ಷಿಣ ಆಫ್ರಿಕಾದ ರಿಕ್ ಡಿ ವೋಸ್ಟ್ ಮತ್ತು ಫ್ರೆಡೆರಿಕ್ ನಿಲ್ಸನ್ ಜೋಡಿ ಎದುರು 3-6 4-6ರ ಅಂತರದಲ್ಲಿ ಮಣಿದರು.

ಮತ್ತೊಂದೆಡೆ ನಾಲ್ಕನೇ ಶ್ರೇಯಾಂಕಿತ ಪುರಾವ್ ರಾಜಾ ಮತ್ತು ಸಾದಿಕ್ ಖದೀರ್ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ